ಇನ್ನು ಮುಂದೆ ಅಪರಾಧ ಕೃತ್ಯಗಳನ್ನ ಎಸಗಿ ತಪ್ಪಿಸಿಕೊಳ್ಳಲು ಸಾಧ್ಯನೇ ಇಲ್ಲ; ರಾಯಚೂರು ಪೊಲೀಸರ ಮಾಸ್ಟರ್ ಪ್ಲಾನ್ ಏನು?
ಅದೇಷ್ಟೋ ಪ್ರಕರಣಗಳಲ್ಲಿ ಇದುವರೆಗೂ ಆರೋಪಿಗಳನ್ನ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ರಾಯಚೂರು: ಆಂಧ್ರ- ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಹಿಂದುಳಿದ ಜಿಲ್ಲೆ ರಾಯಚೂರು (Raichur). ಈ ಜಿಲ್ಲೆಯಲ್ಲಿ ನಿತ್ಯ ನಿರಂತರ ಸರಣಿ ಕಳ್ಳತನ (Theft) ನಡೆಯುತ್ತಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಹಗಲು-ರಾತ್ರಿ ಎನ್ನದೆ ಕಳ್ಳತನ ಮಾಡುತ್ತಿರುವ ಖದೀಮರು ಪೊಲೀಸರಿಗೆ (Police) ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದಾರೆ. ಜೊತೆಗೆ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಪ್ರತಿಭಟನೆಗಳು, ಮೆರವಣಿಗೆಗಳ ಮೇಲೆ ನಿಗಾ ವಹಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಇದೀಗ ಕಳ್ಳತನ ಸೇರಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವರನ್ನ ಕ್ಷಣಾರ್ಧದಲ್ಲೇ ಸೆರೆಯಿಡಿಯಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಅದೇಷ್ಟೋ ಪ್ರಕರಣಗಳಲ್ಲಿ ಇದುವರೆಗೂ ಆರೋಪಿಗಳನ್ನ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ರಾಯಚೂರು ಜಿಲ್ಲಾ ಪೊಲೀಸರು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನ ಪತ್ತೆ ಹಚ್ಚಿ, ಹೆಡೆಮುರಿ ಕಟ್ಟಲು ರಾಯಚೂರು ಪೊಲೀಸರು ಭರ್ಜರಿ ಪ್ಲಾನ್ ರೂಪಿಸಿದ್ದು, ಎರಡು ಅತ್ಯಾಧುನಿಕ ಡ್ರೋನ್ ಕ್ಯಾಮರಾಗಳನ್ನ ಬಳಕೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: Agnipath: ಅಗ್ನಿಪಥ್ ಯೋಜನೆ ಖಂಡಿಸಿ ಬೆಳಗಾವಿ ಬಂದ್ ಕರೆಗೆ ಜನರು ಬೆಂಬಲಿಸಬಾರದು: ಲಕ್ಷ್ಮಣ್ ಸವದಿ ಮನವಿ
ಡ್ರೋನ್ ಕ್ಯಾಮರಾಗಳಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರವಾಗುತ್ತದೆ ಡ್ರೋನ್ ಕ್ಯಾಮರಾಗಳಿಂದ ಪ್ರತಿಯೊಬ್ಬ ಮನುಷ್ಯನನ್ನೂ ಗುರುತಿಸಲು ಸಾಧ್ಯವಾಗಿರುವುದರಿಂದ ಕ್ರೈಂ ಸಂಖ್ಯೆಗಳು ಸಹಜವಾಗಿ ಕಡಿಮೆ ಆಗುತ್ತವೆ. ಆರಂಭಿಕವಾಗಿ ಕೆಕೆಆರ್ಡಿಬಿ ಅನುದಾನದಿಂದ ಎರಡು ಡ್ರೋಣ್ ಕ್ಯಾಮರಾಗಳನ್ನ ತರಿಸಲಾಗಿದೆ. ಅಂದಾಜು ಮೂರು ಕಿಲೋಮೀಟರ್ನಷ್ಟು ವ್ಯಾಪ್ತಿಯಲ್ಲಿನ ದೃಶ್ಯಗಳನ್ನ ಸೆರೆಯಿಡಿಯಲಿದ್ದು, 70-100 ಮೀಟರ್ ಎತ್ತರಕ್ಕೆ ಹಾರಾಡುವ ಸಾಮರ್ಥ್ಯವನ್ನು ಈ ಡ್ರೋನ್ ಕ್ಯಾಮರಾಗಳು ಹೊಂದಿವೆ. ಸೂಕ್ಷ್ಮ ಸನ್ನಿವೇಶಗಳ ವೇಳೆ ಬಸ್ ನಿಲ್ದಾಣ, ರೈಲು ನಿಲ್ದಾಣಗಳ ಬಳಿಯೂ ಈ ಡ್ರೋನ್ ಹದ್ದಿನ ಕಣ್ಣಿಡಲಿದೆ.
ರಾಯಚೂರು ನಗರದ ಗುಡ್ಡ ಪ್ರದೇಶದಲ್ಲಿ ಸಾಕಷ್ಟು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ ಅಂತಾ ಪೊಲೀಸರಿಗೆ ಆಗಾಗ ದೂರುಗಳು ಬರುತ್ತಲೇ ಇವೆ. ಆದರೆ ದೂರು ಬಂದ ಮೇಲೆ ಇನ್ನೇನು ಪೊಲೀಸರು ಸ್ಥಳಕ್ಕೆ ರೀಚ್ ಆಗಬೇಕು ಅನ್ನುವಷ್ಟರಲ್ಲಿ ಕೃತ್ಯ ನಡೆಸಿ ಎಸ್ಕೇಪ್ ಆಗುತ್ತಾರೆ. ಆದರೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯನೆ ಇಲ್ಲ ಅಂತ ರಾಯಚೂರು ಎಸ್ಪಿ ನಿಖಿಲ್ ಬಿ ತಿಳಿಸಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ