Agnipath: ಅಗ್ನಿಪಥ್ ಯೋಜನೆ ಖಂಡಿಸಿ ಬೆಳಗಾವಿ ಬಂದ್ ಕರೆಗೆ ಜನರು ಬೆಂಬಲಿಸಬಾರದು: ಲಕ್ಷ್ಮಣ್ ಸವದಿ ಮನವಿ

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಖಂಡಿಸಿ ಬೆಳಗಾವಿ ಬಂದ್ ಕರೆ ವಿಚಾರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾಜಿ ಸಚಿವ ಲಕ್ಷ್ಮಣ್ ಸವದಿ ರಾಷ್ಟ್ರ ನಿರುದ್ಯೋಗ ಸಮಸ್ಯೆ ಪರಿಹಾರ ಕಲ್ಪಿಸುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಸೇನಾ ನೇಮಕಾತಿ ಯೋಜನೆ ಘೋಷಣೆ ಮಾಡಿದೆ. ಅಗ್ನಿಪಥ್ ಯೋಜನೆ ವಿರುದ್ಧ ನಾಳೆ ಕರೆ ನೀಡಲಾಗಿರುವ ಬೆಳಗಾವಿ ಬಂದ್ ಯಾರು ಬೆಂಬಲಿಸಬಾರದು ಎಂದು ಮನವಿ ಮಾಡಿಕೊಂಡಿದ್ಧಾರೆ.

Agnipath: ಅಗ್ನಿಪಥ್ ಯೋಜನೆ ಖಂಡಿಸಿ ಬೆಳಗಾವಿ ಬಂದ್ ಕರೆಗೆ ಜನರು ಬೆಂಬಲಿಸಬಾರದು: ಲಕ್ಷ್ಮಣ್ ಸವದಿ ಮನವಿ
ಲಕ್ಷ್ಮಣ ಸವದಿImage Credit source: Deccan Chronicle
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 19, 2022 | 4:45 PM

ಬೆಳಗಾವಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ(Agnipath Scheme) ಖಂಡಿಸಿ ಬೆಳಗಾವಿ ಬಂದ್ ಕರೆ ವಿಚಾರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮಾಜಿ ಸಚಿವ ಲಕ್ಷ್ಮಣ್ ಸವದಿ (Laxman Savadi) ರಾಷ್ಟ್ರ ನಿರುದ್ಯೋಗ ಸಮಸ್ಯೆ ಪರಿಹಾರ ಕಲ್ಪಿಸುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಸೇನಾ ನೇಮಕಾತಿ ಯೋಜನೆ ಘೋಷಣೆ ಮಾಡಿದೆ. ಅಗ್ನಿಪಥ್ ಯೋಜನೆ ವಿರುದ್ಧ ನಾಳೆ ಕರೆ ನೀಡಲಾಗಿರುವ ಬೆಳಗಾವಿ ಬಂದ್(Belagavi Band) ಯಾರು ಬೆಂಬಲಿಸಬಾರದು ಎಂದು ಮನವಿ ಮಾಡಿಕೊಂಡಿದ್ಧಾರೆ. ಈ ಬಂದ್ ಕರೆ ಕಾಂಗ್ರೆಸ್ ಪಕ್ಷದ ಪರೋಕ್ಷ ಚಿತಾವಣೆಯಾಗಿದೆ. ಕೇಂದ್ರ ಸರ್ಕಾರ ಯೋಜನೆಗಳಿಂದ ಬಿಜೆಪಿ ಸರ್ಕಾರ ಸದೃಢ ಆಗುತ್ತಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದಿಂದ ಕಾಂಗ್ರೆಸ್‌ನ ಮಾನ ಮರ್ಯಾದೆ ಹರಾಜಾಗಿದೆ. ಇದನ್ನು ಮರೆ ಮಾಚಲು ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು. ಅಗ್ನಿಪಥ್ ಯೋಜನೆಯನ್ನ ನೆಪವಾಗಿಸಿಕೊಂಡು ಪ್ರತಿಭಟನೆ, ಬಂದ್‌ಗೆ ಕಾಂಗ್ರೆಸ್​​ ಕರೆ ನೀಡಿದೆ. ಹಿಂಸಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಇದರ ಅಂಗವಾಗಿ ನಾಳೆ ಬೆಳಗಾವಿಯಲ್ಲೂ ಬಂದ್ ನಡೆಸಿ, ಅರಾಜಕತೆ ಸೃಷ್ಟಿಸುವ ಹುನ್ನಾರಕ್ಕೆ ಯುವಕರು ಬಲಿಯಾಗಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ಇದನ್ನು ಓದಿ: ಅಗ್ನಿಪಥ್ ವಿರುದ್ಧ ಪ್ರತಿಭಟನೆ ಮಾಡುವವರು ಸೇನೆಗೆ ಸೇರ ಬಯಸುವವರಲ್ಲ: ಬಿಸಿ ಪಾಟೀಲ್​​

ಇಂತಹ ಬಂದ್ ಪ್ರತಿಭಟನೆಯಲ್ಲಿ ಅಹಿತಕರ ಘಟನೆ, ಹಿಂಸಾಚಾರ ಸಂಭವಿಸಿದರೇ ಯುವಕರ ಭವಿಷ್ಯದ ಮೇಲೆ ಕಪ್ಪು ಚುಕ್ಕೆಯಾಗಿ ಸರ್ಕಾರಿ ಹುದ್ದೆ ಸೇರಲು ತೊಂದರೆ ಆಗುತ್ತೆ. ನಾಳೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ ನವರು ನಾಡಿನ ಜನರ ದಿಕ್ಕು ತಪ್ಪಿಸಿ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಬಂದ್‌ ಹಾಗೂ ಪ್ರತಿಭಟನೆಗೆ ಮುಂದಾಗಿರುವುದು ಖಂಡನೀಯ‌. ಅಗ್ನಿಪಥ್ ಯೋಜನೆ ಸರಿಯಾಗಿದ್ದು ಯುವಕರು ಸದುಪಯೋಗ ಪಡಿಸಿಕೊಳ್ಳಲಿ ಅಂತಾ ಕೇಳಿಕೊಂಡಿದ್ದಾರೆ.

ಅಗ್ನಿಪಥ್ ಯೋಜನೆ ಖಂಡಿಸಿ ನಾಳೆ ಬೆಳಗಾವಿ ಬಂದ್ ಕರೆದಿರುವ ವಿಚಾರವಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಅವರು ಮಾತನಾಡಿ ಅಗ್ನಿಪಥ್ ವಿಚಾರಕ್ಕೆ ಬೆಳಗಾವಿ ಚಲೋ, ಬೆಳಗಾವಿ ಬಂದ್‌ ಮಾಡಲು ಕೆಲವರು ಹೊರಟಿದ್ದಾರೆ. ಪೊಲೀಸ್ ಇಲಾಖೆಗೆ ಈ ಸಂಬಂಧ ಯಾವುದೇ ಮನವಿ ಬಂದಿಲ್ಲ. ಪ್ರತಿಭಟನೆ ಮಾಡುತ್ತಿದ್ದೇವೆ ಅನುಮತಿ ಕೊಡಿ ಅಂತಾ ಮನವಿ ಬಂದಿಲ್ಲ. ಆದರೂ ಸಹ ಕೆಲವರು ಉದ್ದೇಶವಿಟ್ಟುಕೊಂಡು ಹೋರಾಟ ಮಾಡಲು ಸಜ್ಜಾಗಿದ್ದಾರೆ‌. ಅವರ ಮೇಲೆ ನಾವೆಲ್ಲಾ ಕಣ್ಣಿಟ್ಟಿದ್ದೇವೆ. ಯಾರಾದರೂ ಬಂದು ಅಹಿತಕರ ಘಟನೆ ಆದರೇ  ಸಣ್ಣಪುಟ್ಟ ಘಟನೆಗಳು ಸಂಭವಿಸಿದರೇ ಸೂಕ್ತ ಕ್ರಮ ಕೈಗೊಳ್ಳಲು ಸಿದ್ದರಾಗಿದ್ದೇವೆ.  ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿ: 16 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮುಸ್ಲಿಂ ಯುವತಿ ಆಕೆಯ ಆಯ್ಕೆಯ ಪುರುಷನನ್ನು ಮದುವೆಯಾಗಬಹುದು: ಹರ್ಯಾಣ ಹೈಕೋರ್ಟ್

ಕೆಎಸ್‌ಆರ್‌ಪಿ, ರ್ಯಾಪಿಡ್ ಪೋರ್ಸ್ ಸೇರಿದಂತೆ ಎಲ್ಲ ತುಕಡಿ ನಿಯೋಜನೆ ಮಾಡಿದ್ದೇವೆ. ನಾಳೆ ಪ್ರತಿಭಟನಾ ಸ್ಥಳ, ರೈಲು ನಿಲ್ದಾಣದಲ್ಲಿ ಡ್ರೋಣ ಮೂಲಕ ನಿಗಾ ಇಡುತ್ತೇವೆ. ಯಾರೇ ಸಣ್ಣ ಪುಟ್ಟ ಗಲಾಟೆ ಮಾಡಿದರೇ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಎನೇ ಮಾಡುವುದಾದರೂ ಅನುಮತಿ ಪಡೆದು ಮಾಡಬೇಕು, ಇಲ್ಲವಾದರೇ ಅನುಮತಿ ಕೊಡುವುದಿಲ್ಲ. ಮುಂದಿನ ಭವಿಷ್ಯಕ್ಕಾಗಿ ಸೌಮ್ಯವಾಗಿರಿ ಎಂದು ಹೇಳಿದ್ದಾರೆ.

ಅಗ್ನಿಪಥ್ ಯೋಜನೆ ಖಂಡಿಸಿ ಖಾನಾಪುರದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಉಪವಾಸ ಸತ್ಯಾಗ್ರಹ

ಖಾನಾಪುರ: ಅಗ್ನಿಪಥ್ ಯೋಜನೆ ಖಂಡಿಸಿ ಖಾನಾಪುರದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಶಿವ ಸ್ಮಾರಕ ಚೌಕ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಧರಣಿ ಸತ್ಯಾಗ್ರಹಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಬೆಂಬಲ ನೀಡಿದ್ದಾರೆ. ಅಗ್ನಿಪಥ್ ರದ್ದುಪಡಿಸಿ ಯುವಕರಿಗೆ ನ್ಯಾಯ ಒದಗಿಸಿ ಅಂತಾ ಭಿತ್ತಿ ಪತ್ರ ಹಿಡಿದು ಧರಣಿ ಶಾಸಕಿ ಕುಳಿತ್ತಿದ್ದಾರೆ. ಸಂಜೆ ಐದು ಗಂಟೆ ವರೆಗೂ ಶಾಸಕಿ ಧರಣಿ ಕುಳಿತುಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ.

Published On - 4:44 pm, Sun, 19 June 22