AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ತಾಯಿಗೆ ಸರ್ಕಾರಿ ಭೂಮಿ ಮಂಜೂರು; ಬಂಗಾರಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ವಿರುದ್ಧ ಆರೋಪ

ಕೋಲಾರ ಜಿಲ್ಲೆ ಬಂಗಾರಪೇಟೆ ಗ್ರಾಮದ ಹುದುಕುಳ ಸರ್ವೆ ನಂಬರ್ 256ರ ಪೈಕಿ 3.10 ಎಕರೆ ಸರ್ಕಾರಿ ಜಾಗವನ್ನು 2018ರಲ್ಲಿ ಶಾಸಕರ ತಾಯಿ ಮುನಿಯಮ್ಮ ಹೆಸರಿಗೆ ಮಂಜೂರು ಮಾಡಿದ್ದಾರೆ.

ತಮ್ಮ ತಾಯಿಗೆ ಸರ್ಕಾರಿ ಭೂಮಿ ಮಂಜೂರು; ಬಂಗಾರಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ವಿರುದ್ಧ ಆರೋಪ
ಶಾಸಕ ಎಸ್ಎನ್ ನಾರಾಯಣಸ್ವಾಮಿ
TV9 Web
| Edited By: sandhya thejappa|

Updated on:Jun 19, 2022 | 3:45 PM

Share

ಕೋಲಾರ: ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ (MLA SN Narayanaswamy) ಅವರು ತಮ್ಮ ತಾಯಿ ಹೆಸರಿಗೆ ಸರ್ಕಾರಿ ಭೂಮಿ (Government Land) ಮಂಜೂರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಸಕರ ವಿರುದ್ಧ ಆರೋಪ ಮಾಡಿರುವ ರಾಜಣ್ಣ ಫೆಬ್ರವರಿ 23ರಂದು ಕೋಲಾರ ಎಸಿಬಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಜುಲೈ 8ರೊಳಗೆ ತನಿಖಾ ವರದಿ ಸಲ್ಲಿಸಲು ಎಸಿಬಿಗೆ ಬೆಂಗಳೂರಿನ ಜನಪ್ರತಿನಿಧಿಗಳ 81ನೇ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ಗ್ರಾಮದ ಹುದುಕುಳ ಸರ್ವೆ ನಂಬರ್ 256ರ ಪೈಕಿ 3.10 ಎಕರೆ ಸರ್ಕಾರಿ ಜಾಗವನ್ನು 2018ರಲ್ಲಿ ಶಾಸಕರ ತಾಯಿ ಮುನಿಯಮ್ಮ ಹೆಸರಿಗೆ ಮಂಜೂರು ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ರಾಜಣ್ಣ ಶಾಸಕ ಎಸ್ಎನ್ ನಾರಾಯಣಸ್ವಾಮಿ ವಿರುದ್ಧ ಆರೋಪಿಸಿದ್ದರು. ಅಂದಿನ ತಹಶೀಲ್ದಾರ್ ವಿಜಯಣ್ಣ, ಭೂ ಮಂಜೂರಾತಿ ಸಮಿತಿಯ ಸದಸ್ಯರಾಗಿದ್ದ ತಿಮ್ಮರಾಯಪ್ಪ, ಸೇರಿ 3 ಜನರ ವಿರುದ್ಧ ದೂರು ದಾಖಲಾಗಿತ್ತು.

ಇದನ್ನೂ ಓದಿ: ಕಾರ್ತಿಕ್ ಆಯ್ತು ಇದೀಗ ಮುರಳಿ ವಿಜಯ್; 2 ವರ್ಷಗಳ ನಂತರ ಮತ್ತೆ ಫೀಲ್ಡಿಗಿಳಿದ ತಮಿಳುನಾಡು ಕ್ರಿಕೆಟರ್

ಇದನ್ನೂ ಓದಿ
Image
Kichch Sudeep: ಮೈದಾನದಲ್ಲಿ ಕಿಚ್ಚ ಸುದೀಪ್ ಕೀಪಿಂಗ್ ನೋಡಿ ಫ್ಯಾನ್ಸ್ ಫಿದಾ
Image
ಬಡವರಿಗೆ ಸಹಾಯಕವಾಗುವ ಅಗತ್ಯ ಸಂಶೋಧನೆಗೆ ವಾಹನ ಉದ್ಯಮ ಮುಂದಾಗಬೇಕು: ನಿತಿನ್ ಗಡ್ಕರಿ
Image
‘ನನ್ನ ಹೀರೋ, ನನ್ನ ಗೆಳೆಯ’: ಕಮಲ್ ಹಾಸನ್​ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟ ಖುಷ್ಬೂ ಸುಂದರ್
Image
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಏರ್​​ ಸುವಿಧಾ ನಿಯಮ ತೆಗೆದುಹಾಕಲು ಸರ್ಕಾರದ ಚಿಂತನೆ

ಸಬ್ ರೆಜಿಸ್ಟಾರ್ ಅಂಧಾ ದರ್ಬಾರ್! ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಸಬ್ ರೆಜಿಸ್ಟಾರ್ ಅಂಧಾ ದರ್ಬಾರ್ ಮಾಡಿರುವ ಆರೋಪ ಕೇಳಿಬಂದಿದೆ. ಇಂಡಿ ಬಸ್ ರೆಜಿಸ್ಟಾರ್ ಮಹಮ್ಮದ್ ರಫಿ ಪಟೇಲ್‌ ಗೋಲ್‌ಮಾಲ್ ಮಾಡಿದ್ದಾರೆಂಬ ಆರೋಪವಿದ್ದು, ತಾಲೂಕು ಸಬ್ ರೆಜಿಸ್ಟಾರ್ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಸಬ್ ರೆಜಿಸ್ಟಾರ್​ನ ಇಬ್ಬರು ಸಹೋದರರು ಅಕ್ರಮವಾಗಿ ಬಾಂಡ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಇಲ್ಲಿ ಯಾವುದೇ ಕೆಲಸಕ್ಕೆ ಬಂದರೂ ಲಂಚ ಪಡೆಯುತ್ತಾರಂತೆ. ಒಂದೊಂದು ಕೆಲಸಕ್ಕೂ ಒಂದೊಂದು ದರ ನಿಗದಿ ಮಾಡಿದ್ದಾರಂತೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Sun, 19 June 22

Follow Us
TV9 Web
TV9 Web

TV9 Kannada

Read More
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ