ಮಡಿಕೇರಿ: ವಿರಾಜಪೇಟೆ ಪಟ್ಟಣದ ಖಾಸಗಿ ಲಾಡ್ಜ್ನಲ್ಲಿ ಯುವಕ ನೇಣಿಗೆ ಶರಣು
ಪ್ರತ್ಯೇಕ ಘಟನೆ: ವಿರಾಜಪೇಟೆ ತಾಲೂಕಿನ ಖಾಸಗಿ ಲಾಡ್ಜ್ನಲ್ಲಿ ಯುವಕ ಮೊಣ್ಣಪ್ಪ (28) ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಪೈಯಲಗುರ್ಕಿ ಕೆರೆಯಲ್ಲಿ ಮುಳುಗಿ ಮನಿಯಪ್ಪ (55) ಎಂಬುವರು ಮೃತಪಟ್ಟಿದ್ದಾರೆ.
ಮಡಿಕೇರಿ, ಜನವರಿ 30: ವಿರಾಜಪೇಟೆ (Virajpete) ತಾಲೂಕಿನ ಖಾಸಗಿ ಲಾಡ್ಜ್ನಲ್ಲಿ ಯುವಕ ಮೊಣ್ಣಪ್ಪ (28) ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ನಿವಾಸಿ ಮೊಣ್ಣಪ್ಪ ಖಾಸಗಿ ಬಸ್ ನಿರ್ವಾಹಕನಾಗಿ (Conductor) ಕೆಲಸ ಮಾಡುತ್ತಿದ್ದನು. ಇಂದು (ಜ.30) ಲಾಡ್ಜ್ನಲ್ಲಿ ವಿಷ ಕುಡಿದು, ಫ್ಯಾನ್ಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಮಡಿಕೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೀನು ಹಿಡಿಯಲು ಹೋಗಿ ವ್ಯಕ್ತಿ ನೀರುಪಾಲು
ಚಿಕ್ಕಬಳ್ಳಾಪುರ: ತಾಲೂಕಿನ ದೊಡ್ಡಪೈಯಲಗುರ್ಕಿ ಕೆರೆಯಲ್ಲಿ ಮುಳುಗಿ ಮನಿಯಪ್ಪ (55) ಮೃತಪಟ್ಟಿದ್ದಾರೆ. ಮೀನು ಹಿಡಿಯಲು ಹೋದಾಗ ನೀರುಪಾಲಾಗಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೆರೇಸಂದ್ರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಸರಣಿ ಆತ್ಮಹತ್ಯೆ: 3 ದಿನಗಳಲ್ಲಿ ಮೂವರು ಯುವತಿಯರ ಸಾವು
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅಪ್ಪಟ ಮಲೆನಾಡಿನ ಪರಿಸರ. ಇಲ್ಲಿ ಕಳೆದ ಕೆಲವು ವರ್ಷಗಳಿಂದ ಆತ್ಮಹತ್ಯೆ ಕೇಸ್ಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಪ್ರತಿ ವರ್ಷ 60 ರಿಂದ 70 ಯುಡಿಆರ್ ಕೇಸ್ಗಳು ಇಲ್ಲಿ ದಾಖಲು ಆಗುತ್ತವೆ. ಕೇವಲ ಮೂರೇ ದಿನಗಳ ಅಂತರದಲ್ಲಿ ಕಾಲೇಜ್ ವಿದ್ಯಾರ್ಥಿನಿ, ಮದುವೆ ನಿಶ್ಚಯವಾಗಿದ್ದ ಯುವತಿ ಹಾಗೂ ಮದುವೆಯಾಗಿ ಕೇವಲ 8 ತಿಂಗಳ ನವವಿವಾಹಿತೆ ನೇಣಿಗೆ ಶರಣಾಗಿದ್ದರು.
ತೀರ್ಥಹಳ್ಳಿ ತಾಲೂಕಿನ ಗ್ರಾಮದಲ್ಲಿ ಶಮಿತಾ ಎನ್ನುವ ಬಿ.ಕಾಂ ಪಧವಿಧರೆ ಜನವರಿ 18 ರಂದು ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾರ್ಥ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಒಂಟಿತನ ಮತ್ತು ಥೈರಾರ್ಡ್ ಸಮಸ್ಯೆ ಹಿನ್ನೆಲೆ ಆತ್ಮಹತ್ಯೆ ಅಂತಾ ಡೆತ್ ಬರೆದಿಟ್ಟು ಸಾವನ್ನಪ್ಪಿದ್ದು, ಆಗುಂಬೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಕಾಲೇಜ್ ವಿದ್ಯಾರ್ಥಿನಿಯಾಗಿರುವ ತೀರ್ಥಹಳ್ಳಿ ತಾಲೂಕಿನ ಬಿಳುಕೊಪ್ಪ ಗ್ರಾಮದ ಅದೀಕ್ಷಾ (20) ಎಂಬಾಕೆ ಜನವರಿ 19 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಲವ್ ಕೇಸ್ನಲ್ಲಿ ಯುವತಿಯು ಆತ್ಮಹತ್ಯೆ ಮಾಡಿಕೊಡಿರುವ ಸಾಧ್ಯತೆಯಿದೆ. ಸಾಯಿಯುವ ಮೊದಲು ಒಂದೇ ನಂಬರ್ನಿಂದ 19 ಮಿಸ್ ಕಾಲ್ಗಳಿದ್ದವು. ಹೀಗೆ ಹಿಂದೆ ಮುಂದೆ ನೋಡದೇ ಯುವತಿಯು ನೇಣಿಗೆ ಶರಣಾಗಿದ್ದಳು.
ಇದನ್ನೂ ಓದಿ: ಅಪಾರ್ಟ್ಮೆಂಟ್ನ 29ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ
ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ಚೈತ್ರ ಎನ್ನುವ 26 ವರ್ಷ ಯುವತಿಯು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಂ.ಕಾಂ ಪಧವಿಧರೆ ಆಗಿದ್ದ ಯವತಿಗೆ ಫೆ. 4 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಜನವರಿ 21 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಮದುವೆಯಾಗುವ ಯುವಕನು ಹಿಂದಿನ ದಿನ ಭೇಟಿಯಾಗಿ ಹೋಗಿದ್ದನು. ಬಳಿಕ ಯುವತಿಯು ಮದುವೆ ನಿರಾಕರಣೆ ಮಾಡಿದ್ದಳು. ಇದಕ್ಕೆ ಕುಟುಂಬಸ್ಥರು ಒಪ್ಪಿರಲಿಲ್ಲ. ಮದುವೆ ಫಿಕ್ಸ್ ಆಗಿದೆ. ಈಗ ಬೇಡೆ ಅಂದರೆ ಹೇಗೆ ಅಂತಾ ಬುದ್ಧಿ ಮಾತು ಹೇಳಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೀಗೆ ಕೇವಲ ಮೂರು ನಾಲ್ಕು ದಿನಗಳ ಅಂತರದಲ್ಲಿ ತೀರ್ಥಹಳ್ಳಿಯಲ್ಲಿ ಮೂರು ಆತ್ಮಹತ್ಯೆ ಕೇಸ್ ದಾಖಲು ಆಗಿರುವುದು ಅಚ್ಚರಿ ಮೂಡಿಸಿತ್ತು. ಶಾಸಕರೂ ಆಗಿರುವ ಮಾಜಿ ಗೃಹ ಸಚಿವ ಆರಗ ಜ್ಷಾನೇಂದ್ರ ಅವರು ಕ್ಷೇತ್ರದಲ್ಲಿ ಆದ ನಿರಂತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ತೀರ್ಥಹಳ್ಳಿಯಲ್ಲಿ ಒಂದು ಮಾನಸಿಕ ಕೇಂದ್ರ ತೆರೆಯಲು ಎಲ್ಲ ವ್ಯವಸ್ಥೆಗಳನ್ನು ಕೂಡಾ ಮಾಡಿಕೊಂಡಿದ್ದರು. ನಿಮಾನ್ಸ್ನಿಂದ ಒಂದು ತಂಡ ತೀರ್ಥಹಳ್ಳಿಗೆ ಬಂದು ಒಂದಿಷ್ಟು ಕೌನ್ಸಿಲಿಂಗ್ ಮತ್ತು ಜಾಗೃತಿ ಮೂಡಿಸಿತ್ತು. ತೀರ್ಥಹಳ್ಳಿಯಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚು ಇದೆ. ಈ ಹಿನ್ನಲೆಯಲ್ಲಿ ನಿಮಾನ್ಸ್ ವೈದ್ಯರ ತಂಡವು ತೀರ್ಥಹಳ್ಳಿಗೆ ಬಂದು ಹೋಗುತ್ತು.
ಇನ್ನು, ಈ ಮೂರು ಆತ್ಮಹತ್ಯೆ ಪ್ರಕರಣಗಳಲ್ಲಿ ಅಂತಹ ದೊಡ್ಡ ಸಮಸ್ಯೆಗಳು ಇರಲಿಲ್ಲ. ಎಲ್ಲವೂ ಸಣ್ಣ ಪುಟ್ಟ ವಿಷಯಗಳಿಗೆ ಮೂರು ಯುವತಿಯರು ನೇಣಿಗೆ ಶರಣಾಗಿದ್ದಾರೆ. ಮೂವರು ಪ್ರಕರಣಗಳಲ್ಲಿ ವಿವಿಧ ಠಾಣೆಯಲ್ಲಿ ಕೇಸ್ ದಾಖಲಾಗಿವೆ. ಈ ಮೂವರ ಸಾವಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಆದರೆ ಈ ಮೂವರು ಆತ್ಮಹತ್ಯೆ ಪ್ರಕರಣಗಳಿಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಲೇ ಹೊರಬೀಳಬೇಕಿದೆ.
ತೀರ್ಥಹಳ್ಳಿಯಲ್ಲಿ ಮೂರನೇ ದಿನಕ್ಕೆ ಮೂರು ಆತ್ಮಹತ್ಯೆ ಕೇಸ್ಗಳಾಗಿವೆ. ಯುವತಿಯು ಆತ್ಮಹತ್ಯೆಗೆ ತುಂಬಾ ಸಿಲ್ಲಿ ವಿಷಯಗಳು ಸಾವಿನ ಹಿಂದೆ ಕಂಡು ಬಂದಿವೆ. ತೀರ್ಥಹಳ್ಳಿಯಲ್ಲಿ ಆತ್ಮಹತ್ಯೆ ಕೇಸ್ಗಳು ಹೆತ್ತವರನ್ನು ಕಂಗೆಡಿಸಿವೆ. ಯುವತಿಯರು ಸಾವಿಗೆ ಶರಣಾಗುತ್ತಿರುವುದು ಕಳವಳಕಾರಿ ಸಂಗತಿ.
ಆತ್ಮಹತ್ಯೆ ಸಹಾಯವಾಣಿ
ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821, ಆರೋಗ್ಯ ವಾಣಿ: 104, ಸಹಾಯ್ ಸಹಾಯವಾಣಿ: 080-25497777
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:00 pm, Tue, 30 January 24