BBMP Director ACB raid ಕಂತೆ ಕಂತೆ ನೋಟು, ಸ್ಟಾಂಪ್, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಕಾರು ಬಾರು

ACB raids BBMP Assistant Director house ಫೆಬ್ರವರಿ 5ರಂದು 20 ಲಕ್ಷ ರೂ. ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದ BBMP ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆ ಮೇಲೆ ದಾಳೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್​ ಎದುರಾಗಿದೆ. ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕರಾಗಿರುವ ದೇವೇಂದ್ರಪ್ಪ ನಿವಾಸದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ.

BBMP Director ACB raid ಕಂತೆ ಕಂತೆ ನೋಟು, ಸ್ಟಾಂಪ್, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಕಾರು ಬಾರು
ಕಂತೆ ಕಂತೆ ನೋಟುಗಳು, ಸ್ಟಾಂಪ್​ಗಳು, ದುಬಾರಿ ಕಾರುಗಳು, ಮದ್ಯದ ಬಾಟಲಿಗಳು -ಇದು BBMP ಸಹಾಯಕ ನಿರ್ದೇಶಕನ ಭರ್ಜರಿ ದರ್ಬಾರು
Follow us
KUSHAL V
|

Updated on:Feb 08, 2021 | 6:18 PM

ಬೆಂಗಳೂರು: ಫೆಬ್ರವರಿ 5ರಂದು 20 ಲಕ್ಷ ರೂ. ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದ BBMP ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆ ಮೇಲೆ ದಾಳೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್​ ಎದುರಾಗಿದೆ. ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕರಾಗಿರುವ ದೇವೇಂದ್ರಪ್ಪ ನಿವಾಸದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ. BBMP Assistant Director house ACB raid

BBMP ಕಡತಗಳು

ದೇವೇಂದ್ರಪ್ಪ ಮೇಲೆ ದಾಳಿ ನಡೆಸಿದಾಗ ಅಧಿಕಾರಿಯ ಕಾರಿನಲ್ಲಿ 50ಕ್ಕೂ ಹೆಚ್ಚು ಬಿಬಿಎಂಪಿ‌ ಕಡತಗಳು ಪತ್ತೆಯಾಗಿವೆ. ನಗರ ಯೋಜನೆಗೆ ಸೇರಿದ 480ಕ್ಕೂ ಅಧಿಕ ಕಡತಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಮೇಲಾಧಿಕಾರಿಗಳ ಹೆಸರಿನಲ್ಲಿರುವ ರಬ್ಬರ್​ ಸ್ಟಾಂಪ್​ಗಳು ಹಾಗೂ ಸೂಕ್ತ ದಾಖಲೆ ಇಲ್ಲದ 7.40 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.

ಅಧಿಕಾರಿ ಮನೆಯಲ್ಲಿ ಪತ್ತೆಯಾದ ಮದ್ಯದ ಬಾಟಲಿಗಳು

ದೇವೇಂದ್ರಪ್ಪ ಅಲ್ಲ ‘ಕುಬೇರ’ಪ್ಪ! ಇದಲ್ಲದೆ, ನಿವಾಸದ ಮೇಲೆ ದಾಳಿ ಮುಂದುವರಿಸಿದ ಅಧಿಕಾರಿಗಳು ಒಟ್ಟು 27 ಲಕ್ಷದ 40 ಸಾವಿರ ವಶಕ್ಕೆ ಪಡೆದರು. ದೇವೇಂದ್ರಪ್ಪ ಮನೆಯಲ್ಲಿ ಕೇವಲ ನಗದು ಮಾತ್ರವಲ್ಲದೆ ದುಬಾರಿ ಕಾರುಗಳು, ಬ್ಯಾಂಕ್ ಖಾತೆಯ ದಾಖಲೆ ಹಾಗೂ ಮದ್ಯದ ಬಾಟಲಿಗಳು ಸಹ ಪತ್ತೆಯಾಗಿದೆ.

ಅಧಿಕಾರಿ ಬಳಿ ಪತ್ತೆಯಾದ ಕಂತೆ ಕಂತೆ ನೋಟುಗಳು

ಈ ನಡುವೆ, ಮನೆಯಲ್ಲಿ ಪತ್ತೆಯಾದ ಮದ್ಯದ ಬಾಟಲಿಗಳ ಬಗ್ಗೆ ಅಬಕಾರಿ ಇಲಾಖೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ. ಸದ್ಯ, BBMP ದಾಖಲೆಗಳ ಕುರಿತು ACB ತನಿಖೆ ಮುಂದುವರಿದಿದೆ.

ಫೆಬ್ರವರಿ 5ರಂದು ದೇವೇಂದ್ರಪ್ಪ ಕಟ್ಟಡಕ್ಕೆ ಸ್ವಾಧೀನ ಪತ್ರ ಕೊಡಲು ರಾಜೇಶ್​ ಎಂಬುವವರ ಬಳಿ ₹40 ಲಕ್ಷ ಲಂಚ ಕೇಳಿದ್ದರು. ಹಾಗಾಗಿ, ರಾಜೇಶ್​ ಎಂಬುವವರು ನೀಡಿದ ದೂರಿನನ್ವಯ ACB ಕಾರ್ಯಾಚರಣೆ ನಡೆಸಿತ್ತು. ಮೆಜೆಸ್ಟಿಕ್​​​ನ ಅಮರ್​ ಹೋಟೆಲ್​ ಬಳಿ ಸಹಾಯಕ ನಿರ್ದೇಶಕ ACB ಬಲೆಗೆ ಬಿದ್ದಿದ್ದರು.

ದುಬಾರಿ ಕಾರುಗಳು

ಹಿರಿಯ ಅಧಿಕಾರಿಗಳ ಸ್ಟಾಂಪ್​ಗಳು

Siddaramaiah cotton shopping spree ಏಯ್​.. ಚೆನ್ನಾಗಿರೋ ಪಂಚೆ ಕೊಡಯ್ಯ.. ಕಲರ್​ ಇಲ್ದೇ ಇರೋದು ಕೊಡಬೇಡ -ಸಿದ್ದರಾಮಯ್ಯ ಖಾದಿ ಶಾಪಿಂಗ್!

Published On - 6:12 pm, Mon, 8 February 21