ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ, ಕಚೇರಿ ಮೇಲೆ ACB ದಾಳಿ: ಏನೇನು ಸಿಕ್ತು?.. ರೇಡ್ನ ರೌಂಡಪ್ ಇಲ್ಲಿದೆ
ರಾಜ್ಯದ ಹಲವೆಡೆ ಇಂದು ACB ಅಧಿಕಾರಿಗಳಿಂದ ದಾಳಿ ನಡೆದಿದೆ. ಅಧಿಕಾರಿಗಳ ರೇಡ್ನಲ್ಲಿ ಅಪಾರ ಪ್ರಮಾಣದಲ್ಲಿ ಹೆಚ್ಚುವರಿ ಆಸ್ತಿ ಪತ್ತೆಯಾಗಿದೆ. ಇವುಗಳ ವಿವರವನ್ನ ಇಲಾಖೆ ಬಿಡುಗಡೆ ಮಾಡಿದೆ.
ಬೆಂಗಳೂರು: ರಾಜ್ಯದ ಹಲವೆಡೆ ಇಂದು ACB ಅಧಿಕಾರಿಗಳಿಂದ ದಾಳಿ ನಡೆದಿದೆ. ಅಧಿಕಾರಿಗಳ ರೇಡ್ನಲ್ಲಿ ಅಪಾರ ಪ್ರಮಾಣದಲ್ಲಿ ಹೆಚ್ಚುವರಿ ಆಸ್ತಿ ಪತ್ತೆಯಾಗಿದೆ. ಇವುಗಳ ವಿವರವನ್ನ ಇಲಾಖೆ ಬಿಡುಗಡೆ ಮಾಡಿದೆ.
ಇತ್ತ, ಅರಮನೆ ನಗರಿ ಮೈಸೂರಿನಲ್ಲಿ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ಸುಬ್ರಹ್ಮಣ್ಯ ಕೆ.ವಡ್ಡರ್ ಮೇಲೆ ದಾಳಿ ನಡೆದ ವೇಳೆ ಶೇ. 82.33ರಷ್ಟು ಹೆಚ್ಚುವರಿ ಆಸ್ತಿ ಪತ್ತೆಯಾಗಿದೆ. ಅದರ ವಿವರ ಹೀಗಿದೆ.
1.ಉಡುಪಿ ಜಿಲ್ಲೆ ಮತ್ತೂರು ಗ್ರಾಮದಲ್ಲಿ ಒಂದು ವಾಸದ ಮನೆ 2.206 ಗ್ರಾಂ ಚಿನ್ನಾಭರಣ, 2 ಕೆ.ಜಿ 473 ಗ್ರಾಂ ಬೆಳ್ಳಿ ವಸ್ತುಗಳು 3. 1.35 ಲಕ್ಷ ನಗದು, 1 ಮಾರುತಿ ಕಾರು, 1 ದ್ವಿಚಕ್ರ ವಾಹನ 4. 15 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆ
ಅತ್ತ, ಮೈಸೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಆಯುಕ್ತ ಕಚೇರಿಯ FDA ಚನ್ನವೀರಪ್ಪ ಬಳಿ ಆದಾಯಕ್ಕಿಂತ ಶೇ.149.51ರಷ್ಟು ಆಸ್ತಿ ಪತ್ತೆಯಾಗಿದೆ.
1. ಮೈಸೂರಿನ ಕುವೆಂಪುನಗರದಲ್ಲಿ 1 ವಾಸದ ಮನೆ 2. ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಪತ್ನಿ ಹೆಸರಿನಲ್ಲಿ 1 ಮನೆ 3. ಮಂಡ್ಯ ಜಿಲ್ಲೆಯ ವಿವಿಧೆಡೆ 2 ಖಾಲಿ ನಿವೇಶನಗಳು ಪತ್ತೆ 4. ಮಂಡ್ಯ ಜಿಲ್ಲೆಯಲ್ಲಿ 34 ಗುಂಟೆ ಕೃಷಿ ಜಮೀನು ಪತ್ತೆ 5. 1 ಹೋಂಡಾ ಸಿಟಿ ಕಾರು, 4 ದ್ವಿಚಕ್ರ ವಾಹನಗಳು ಪತ್ತೆ 6. 275 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿ ವಸ್ತುಗಳು ಪತ್ತೆ 7. 5 ಲಕ್ಷ ಮೌಲ್ಯದ ವಿಮೆ, 92 ಸಾವಿರ ರೂ. ನಗದು ಪತ್ತೆ 8. 13.50 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆ
ಬೆಣ್ಣೆನಗರಿಯಲ್ಲಿ ಭರ್ಜರಿ ಬೇಟೆ ಅತ್ತ, ದಾವಣಗೆರೆ, ಬೆಳಗಾವಿಯಲ್ಲಿ ಬಾಯ್ಲರ್ ಸ್ವಾಸ್ಥ್ಯ ಸಂರಕ್ಷಣಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ K.M.ಪ್ರಥಮ್ ಎಂಬುವವರ ಬಳಿ 2 ಕೋಟಿ 68 ಲಕ್ಷ ಮೌಲ್ಯದ ಆಸ್ತಿ ಪತ್ತೆಯಾಗಿದೆ.
1. ಬೆಂಗಳೂರಿನ ಸಂಜಯನಗರದಲ್ಲಿ 2.5 ಕೋಟಿ ಮೌಲ್ಯದ ಮನೆ 2. 400 ಗ್ರಾಂ ಚಿನ್ನಾಭರಣ, 52 ಸಾವಿರ ನಗದು, 2 ಕಾರು ಪತ್ತೆ 3. 2 ಬೈಕ್, 25 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆ 4. ಒಟ್ಟು 63 ಲಕ್ಷ 96 ಸಾವಿರ ರೂ. ಮೌಲ್ಯದ ಚರಾಸ್ತಿ ಪತ್ತೆ
ಕುಂದಾನಗರಿಯಲ್ಲಿ ಅಧಿಕಾರಿಗಳ ಮೇಲೆ ACB ದಾಳಿ ಕುಂದಾನಗರಿ ಬೆಳಗಾವಿಯಲ್ಲಿ ಸಹ ACB ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡೆಪ್ಯುಟಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಹನುಮಂತ ಚಿಕ್ಕಣ್ಣನವರ್ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ. ಚೆನ್ಮಮ್ಮ ನಗರದಲ್ಲಿರುವ ಚಿಕ್ಕಣ್ಣನವರ್ ಮನೆ ಮೇಲೆ ಎಸಿಬಿ ದಾಳಿ ವೇಳೆ ಅಪಾರ ಆಸ್ತಿಪಾಸ್ತಿ, ಚಿನ್ನಾಭರಣ ಪತ್ತೆಯಾಗಿದೆ. ಎಸಿಬಿ ಎಸ್‌ಪಿ B.S.ನೇಮಗೌಡ ನೇತೃತ್ವದಲ್ಲಿ ದಾಳಿ ನಡೆಯಿತು.
1. 816 ಗ್ರಾಂ ಚಿನ್ನಾಭರಣ, 6317 ಗ್ರಾಂ ಬೆಳ್ಳಿ ಆಭರಣ ಪತ್ತೆ 2. ಮನೆಯಲ್ಲಿ 1 ಲಕ್ಷ 88 ಸಾವಿರ ನಗದು ಪತ್ತೆ 3. ಶಾಂತಿನಾಥ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್ 4. 1 ಪೆಂಟ್ ಹೌಸ್, 4 ಅಂಗಡಿ ಖರೀದಿಸಿರುವುದು ಪತ್ತೆ 5. 1 ರೆಡಿಮೇಡ್ ಬಟ್ಟೆ ಅಂಗಡಿ, ಒಂದು ಎಲೆಕ್ಟ್ರಿಕ್ ಅಂಗಡಿ
ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ನೌಕರ ಎಸಿಬಿ ಬಲೆಗೆ ಈ ಮಧ್ಯೆ, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ನೌಕರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಶಂಕರ್ ಘೋಡಕೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಶಂಕರ್ ಹಜರತ್ ಅಲಿ ಮುಲ್ಲಾ ಎಂಬುವವರಿಂದ ಮನೆ ಟ್ಯಾಕ್ಸ್ ಕ್ಲಿಯರೆನ್ಸ್ ಬಗ್ಗೆ 75,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಶಂಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: ಯಶವಂತಪುರದಲ್ಲಿ ಹುಡುಗಿ ವಿಚಾರಕ್ಕೆ ಕಿತ್ತಾಟ: ಜಗಳ ಬಿಡಿಸಲು ಹೋದ PU ವಿದ್ಯಾರ್ಥಿಯ ಬರ್ಬರ ಕೊಲೆ
Published On - 11:16 pm, Tue, 9 March 21