ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್ನಲ್ಲಿ ನಿನ್ನೆ (ಜುಲೈ 6) ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ (Chandrashekhar Guruji) ಕೊಲೆ (Murder) ನಡೆದಿದೆ. ಈಗಾಗಲೇ ಕೊಲೆಗಾರರು ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆ ನಡೆಯುತ್ತಿದೆ. ಆರೋಪಿ ಮಹಾಂತೇಶ್ ಚಂದ್ರಶೇಖರ್ ಗುರೂಜಿ ಜೊತೆ ಕೆಲಸ ಮಾಡಿದವನು. ಅಪಾರ್ಟ್ಮೆಂಟ್ ವಿಚಾರಕ್ಕೆ ಈ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯ ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೊಲೆ ಆರೋಪಿ ಮಹಾಂತೇಶ್ ಐದು ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ಆ ಪೋಸ್ಟ್ನಲ್ಲಿ ಗುರೂಜಿಯನ್ನು ಕೊಲ್ಲುವ ಸುಳಿವು ಕೊಟ್ಟಿದ್ದ ಎಂದು ತಿಳಿದುಬಂದಿದೆ.
ಐದು ದಿನಗಳ ಹಿಂದೆ ಆರೋಪಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದ. ಭಗವದ್ಗೀತೆಯ ಶ್ಲೋಕವನ್ನು ಪೋಸ್ಟ್ ಮಾಡಿದ್ದ ಆರೋಪಿ, ಕೊಲೆಗೆ ಮೊದಲೇ ನಿರ್ಧರಿಸಿದ್ದ. ‘ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನು ವಿಳಂಬವೇಕೆ ಪ್ರಭುವೇ? ಆದಷ್ಟು ಬೇಗ ಅವತರಿಸು ಪ್ರಭು. ಸಂಭವಾಮಿ ಯುಗೇ ಯುಗೇ…’ ಎಂದು ಬರೆದುಕೊಂಡಿದ್ದ.
ಇದನ್ನೂ ಓದಿ: ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರ ಬಂಧನ: 5 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳು ವಶ
ಹೋಟೆಲ್ನಲ್ಲಿ ಸುರಕ್ಷತೆ ಕೊರತೆ?
ಸ್ವಾಮೀಜಿ ಹತ್ಯೆಗೆ ಹೋಟೆಲ್ ಭದ್ರತಾ ಲೋಪ ಕಾರಣವಾಯ್ತಾ ಎಂಬ ಅನುಮಾನ ಮೂಡಿದೆ. ವಿಐಪಿ ಮುವೆಮೆಂಟ್ ಇದ್ದ ಹೋಟೆಲ್ನಲ್ಲಿ ಸುರಕ್ಷತೆಯೇ ಇಲ್ಲ. ಮೆಟಲ್ ಡಿಟೆಕ್ಟರ್ ಇಲ್ಲದೇ ಆಡಳಿತ ಮಂಡಳಿ ಹೋಟೆಲ್ ನಡೆಸುದೆ. ಮೆಟಲ್ ಡಿಟೆಕ್ಟರ್ ಇದ್ದಿದ್ದರೆ ಸ್ವಾಮೀಜಿ ಬದುಕುತ್ತಿದ್ದರು ಎಂದು ಸ್ವಾಮೀಜಿ ಆಪ್ತರು ಹೇಳಿದರು.
ವೀರಶೈವ ಲಿಂಗಾಯತ ಧರ್ಮದ ಪ್ರಕಾರ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಮೂರು ಸಾವಿರ ಮಠದ ಸ್ವಾಮೀಜಿಗಳಿಂದ ಅಂತ್ಯಕ್ರಿಯೆ ಕಾರ್ಯ ನಡೆಯುತ್ತದೆ. 12 ಜನರ ತಂಡದಿಂದ ಅಂತ್ಯಕ್ರಿಯೆ ಕಾರ್ಯ ನಡೆಯಲಿದೆ ಎಂದು ಟಿವಿ9ಗೆ ಅರ್ಚಕರು ಮಾಹಿತಿ ನೀಡಿದ್ದಾರೆ. ಸ್ವಾಮೀಜಿ ಕೊಲೆಯಿಂದ ನಮಗೆಲ್ಲ ಭಯ ಆಗಿದೆ. ಸ್ವಾಮೀಜಿಗಳು ಗನ್ ಮ್ಯಾನ್ ಇಟ್ಟುಕೊಳ್ಳಬೇಕಿತ್ತು ಎಂದು ಹೇಳಿದರು.
Published On - 10:57 am, Wed, 6 July 22