ಚಿತ್ರದುರ್ಗ: ಕೊಳಾಳ್ ಬಳಿ ADGP ರಾಮಚಂದ್ರರಾವ್ ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿಯೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ಬೆಂಗಳೂರಿನಿಂದ ದಾವಣಗೆರೆಗೆ ಎಡಿಜಿಪಿ ರಾಮಚಂದ್ರರಾವ್ ತೆರಳುತ್ತಿದ್ದರು. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೈವೇನಲ್ಲಿ ಹಂಪ್ಸ್ ಇದ್ದ ಕಾರಣ ಎಡಿಜಿಪಿ ವಾಹನವನ್ನು ಸ್ವಲ್ಪ ಸ್ಲೋ ಮಾಡಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎಡಿಜಿಪಿ ವಾಹನಕ್ಕೆ ಲಾರಿ ಡಿಕ್ಕಿಯೊಡೆದಿದೆ.
ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸುರಕ್ಷಿತವಾಗಿ ಎಡಿಜಿಪಿ ರಾಮಚಂದ್ರರಾವ್ ದಾವಣಗೆರೆ ತಲುಪಿದ್ದಾರೆ.