ಮುಡಾ ಬೆನ್ನಲ್ಲೇ ಏರೋಸ್ಪೇಸ್​ ಸೈಟ್ ವಿವಾದ: ಕೋರ್ಟ್​ಗೆ ಹೋಗುವುದಾಗಿ ಎಚ್ಚರಿಸಿದ ನಾರಾಯಣಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 13, 2024 | 3:02 PM

ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ನೀಡಿದ್ದ ಭೂಮಿ ವಾಪಸ್ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಈಗ ಅವರಿಗೆ ಅರಿವಾಗಿದೆ, ರಾಹುಲ್ ಖರ್ಗೆಗೆ ಅಭಿನಂಧಿಸುತ್ತೇನೆ. ರಾಹುಲ್‌ ಖರ್ಗೆ ಸೌಮ್ಯ ಸ್ವಭಾವದವರು. ಇದನ್ನ ಪ್ರಿಯಾಂಕ್‌ ಖರ್ಗೆ ಯಾಕೆ ಮೈಗೂಡಿಸಿಕೊಳ್ಳಬಾರದು? ಎಂದು ವಾಗ್ದಾಳಿ ಮಾಡಿದ್ದಾರೆ.

ಮುಡಾ ಬೆನ್ನಲ್ಲೇ ಏರೋಸ್ಪೇಸ್​ ಸೈಟ್ ವಿವಾದ: ಕೋರ್ಟ್​ಗೆ ಹೋಗುವುದಾಗಿ ಎಚ್ಚರಿಸಿದ ನಾರಾಯಣಸ್ವಾಮಿ
ಮುಡಾ ಬೆನ್ನಲ್ಲೇ ಏರೋಸ್ಪೇಸ್​ ಸೈಟ್ ವಿವಾದ: ಕೋರ್ಟ್​ಗೆ ಹೋಗುವುದಾಗಿ ಎಚ್ಚರಿಸಿದ ನಾರಾಯಣಸ್ವಾಮಿ
Follow us on

ಬೆಂಗಳೂರು, ಅಕ್ಟೋಬರ್​ 13: ಏರೋಸ್ಪೇಸ್​ನಲ್ಲಿ ಕೊಟ್ಟಿರುವ ಸೈಟ್ ಸಹ ಕಾನೂನು ಬಾಹಿರ. ಅದನ್ನೂ ತಕ್ಷಣ ರದ್ದು ಮಾಡಬೇಕು. ಇಲ್ಲವಾದರೆ ನಾವು ಕೋರ್ಟ್​ಗೆ ಹೋಗುತ್ತೇವೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಎಚ್ಚರಿಕೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ನೀಡಿದ್ದ ಭೂಮಿ ವಾಪಸ್ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಖರ್ಗೆಗೆ ಅಭಿನಂದನೆ ತಿಳಿಸುತ್ತಲ್ಲೇ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.

ಈಗ ಅವರಿಗೆ ಅರಿವಾಗಿದೆ, ರಾಹುಲ್ ಖರ್ಗೆಗೆ ಅಭಿನಂಧಿಸುತ್ತೇನೆ. ರಾಹುಲ್‌ ಖರ್ಗೆ ಸೌಮ್ಯ ಸ್ವಭಾವದವರು. ಇದನ್ನ ಪ್ರಿಯಾಂಕ್‌ ಖರ್ಗೆ ಯಾಕೆ ಮೈಗೂಡಿಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ. ನನ್ಮೇಲೆ ಆರೋಪಿಸಿದ್ದರು, ಧಮ್ ಬಿರಿಯಾನಿ ಬಗ್ಗೆ ಮಾತಾಡಿದರು. ಕೆಐಎಡಿಬಿಯಿಂದ ಜಾಗ ತೆಗೆದುಕೊಂಡೆ. ಸಚಿವ ಎಂ.ಬಿ.ಪಾಟೀಲ್ ಮುಖಾಂತರ ಭಾರೀ ಒತ್ತಡ ಹಾಕಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಪತ್ನಿಯಂತೆ ಖರ್ಗೆ ಕುಟುಂಬದ ಸಿದ್ಧಾರ್ಥ್​ ಟ್ರಸ್ಟ್​ ಸಹ 5 ಎಕರೆ ಸೈಟ್​ ಹಿಂತಿರುಗಿಸಲು ನಿರ್ಧಾರ

ಎಲ್ಲಾ ಲೀಗಲ್ ಆಗಿಯೇ ಇದ್ದರೆ ಯಾಕೆ ವಾಪಸ್​ ಕೊಟ್ಟರು? ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗಾಯಿತು ಇದು. ಸಿಎಂ ಸಿದ್ದರಾಮಯ್ಯ ಕೂಡ 14 ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿಎಂಗೂ ಸಹ ಸೈಟ್ ವಾಪಸ್ ಕೊಡುವ ಅವಶ್ಯಕತೆ ಇರಲಿಲ್ಲ. ವಿಚಾರಣೆ ವೇಳೆ ವಾಪಸ್ ಕೊಟ್ಟು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಬೆಂಗಳೂರು ಬಿಟ್ಟು ಮೈಸೂರು ಸುತ್ತಲು ಸಿಎಂ ಹೋಗಿದ್ದಾರೆ. ಕ್ಲೀನ್​ಚೀಟ್ ಪಡೆದುಕೊಳ್ಳಲು‌ ಸಿಎಂ ಸುತ್ತಾಡುತ್ತಿದ್ದಾರೆ. ಅಂತಹ ಪರಿಸ್ಥಿತಿ ಬಂದರೆ ಸಿಬಿಐ ಎಂಟ್ರಿಯಾಗುತ್ತೆ ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆಗೆ ವಿರುದ್ಧ ವಾಗ್ದಾಳಿ 

ತಪ್ಪು ಮಾಡಿ ಮೈಪರಚಿಕೊಳ್ಳೋದು ಪ್ರಿಯಾಂಕ್ ಖರ್ಗೆಗೆ ಗೊತ್ತಿದೆ. ಎಲ್ಲದಕ್ಕೂ ನನ್ನನ್ನು ಬಿಟ್ಟರೆ ಪ್ರವೀಣರೇ ಇಲ್ಲ ಅಂದುಕೊಂಡಿದ್ದಾರೆ. ನಾವೆಲ್ಲ ಗ್ರಾಸ್ ರೂಟ್​​ನಿಂದ ಬಂದಂತಹವರು. ತೊಡೆ ತಟ್ಟಿದ್ರೆ ಈಗ ಆಗಿರುವ ಪರಿಸ್ಥಿತಿಯೇ ಆಗುವುದು. ಆನೆ ನಡೆದುಕೊಂಡು ಹೋಗುವಾಗ ನಾಯಿ ಬೊಗಳಿದ್ರೆ ಭಯ ಪಡುತ್ತಾ? ಈಗಲೇ ಪ್ರಿಯಾಂಕ್ ಖರ್ಗೆ ಸಿಎಂ‌ ರೀತಿ‌ ಆಡುವುದು ಬೇಡ. ಮಾತಾಡೋದನ್ನು ಮೈಗೂಡಿಸಿಕೊಂಡರೆ ಒಳ್ಳೇ ನಾಯಕ ಆಗಬಹುದು ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.