
ಬೆಳಗಾವಿ, (ಜೂನ್ 13): ಅಹಮದಾಬಾದ್ ನಲ್ಲಿ ಸಂಭವಿಸಿದೆ ಏರ್ ಇಂಡಿಯಾ ವಿಮಾನ ದುರಂತದಲ್ಲಿ (Ahmedabad flight crash) 265 ಜನ ಮೃತಪಟ್ಟಿದ್ದಾರೆ. ಇನ್ನು ಈ ದುರಂತದಲ್ಲಿ ಪ್ರತೀಕ್ ಜೋಶಿ (Dr Pratik Joshi )ಇಡೀ ಕುಟುಂಬ ದುರಂತ ಅಂತ್ಯಕಂಡಿದೆ. ಇನ್ನು ಪ್ರತೀಕ್ ಜೋಶಿಗೆ ಬೆಳಗಾವಿ (Belagavi) ಹಾಗೂ ಕೋಲಾರಕ್ಕೂ (Kolar) ಅವಿನಾಭವ ಸಂಬಂಧ ಇದ್ದು, ಪ್ರತೀಕ್ ಸಾವಿಗೆ KLE ಕಾಲೇಜಿನ ವೈದ್ಯರು, ಸ್ನೇಹಿತರು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಯಾಕಂದ್ರೆ ಪ್ರತೀಕ್ ಬೆಳಗಾವಿ ಕೆಎಲ್ಇ ಹಳೇ ವಿದ್ಯಾರ್ಥಿಯಾಗಿದ್ದಾರೆ. ಹೌದು..ಪ್ರತೀಕ್ ಜೋಶಿ ಬೆಳಗಾವಿ ಕೆಎಲ್ಇ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. 2000ದಿಂದ 2005ನೇ ಬ್ಯಾಚ್‌ನಲ್ಲಿ ಎಂಬಿಬಿಎಸ್ ವ್ಯಾಸಾಂಗ ಮಾಡಿದ್ದರು.
2000ದಿಂದ 2005ನೇ ಬ್ಯಾಚ್‌ನಲ್ಲಿ ಕೆಎಲ್ಇ ವೈದ್ಯಕೀಯ ಕಾಲೇಜಿನಲ್ಲಿ ಪ್ರೀಕ್ ಎಂಬಿಬಿಎಸ್ ವ್ಯಾಸಾಂಗ ಮಾಡಿದ್ದರು. ಬಳಿಕ ಕೋಲಾರದ ಟಮಕ ಬಳಿ ಇರುವ ದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರತೀಕ್ ಜೋಶಿ,, 2005ರಲ್ಲಿ ರೇಡಿಯೋಲಜಿ ಪಿ.ಜಿ. ಕೋರ್ಸ್ ಮಾಡಿದ್ದರು. ಇದಿಘ ಅವರ ಅಗಲಿಕೆಯಿಂದ ಬೆಳಗಾವಿ ಹಾಗೂ ಕೋಲಾರದಲ್ಲಿ ಸಂತಾಪ ಸೂಚಿಸಿಲಾಗಿದೆ.
ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೂವರು ಮಕ್ಕಳ ಸಮೇತ ವೈದ್ಯ ದಂಪತಿ ದಾರುಣ ಅಂತ್ಯ ಕಂಡಿದ್ದಾರೆ. ರಾಜಸ್ಥಾನ ಮೂಲದ ಡಾ. ಪ್ರತೀಕ್ ಜೋಶಿ, ಪತ್ನಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ, ಡಾ. ಪ್ರತೀಕ್ ಜೋಶಿ ಬೆಳಗಾವಿ ಕೆಎಲ್ಇ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. 2000ದಿಂದ 2005ನೇ ಬ್ಯಾಚ್‌ನಲ್ಲಿ ಎಂಬಿಬಿಎಸ್ ವ್ಯಾಸಾಂಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು (ಜೂನ್ 13) ಬೆಳಗಾವಿಯ ಕೆಎಲ್ಇ ವೈದ್ಯಕೀಯ ಕಾಲೇಜಿನಲ್ಲಿ ಪ್ರತೀಕ್ ಜೋಶಿ ಸಹಪಾಠಿಗಳು, ವೈದ್ಯರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.
ಟಿವಿ9 ಮುಂದೆ ಗೆಳೆಯನ ಅಗಲಿಕೆ ನೋವು ಬಿಚ್ಚಿಟ್ಟಿದ್ದಾರೆ. ಸ್ನೇಹಿತರಾದ ಡಾ.ಆನಂದ ಪುರಾಣಿಕಮಠ, ಡಾ.ಜ್ಯೋತಿ ಬೆನ್ನಿ, ಡಾ.ಮಾನಸಿ ಗೋಸಾವಿ, ಡಾ.ಅಶ್ವಿನಿ ರತ್ನಾಕರ್ ಟಿವಿ9 ಪ್ರತಿಕ್ರಿಯಿಸಿ, ನಮ್ಮ ಗೆಳೆಯನ ಸಾವು ನಮಗೆ ನಂಬಲು ಆಗುತ್ತಿಲ್ಲ. ಮೊನ್ನೆಯಷ್ಟೇ ಲಂಡನ್ ಗೆ ಹೋಗುವ ಕುರಿತು ಮಾತನಾಡಿದ್ದ. ನಿನ್ನೆ ಮಧ್ಯಾಹ್ನ ನಮಗೆ ವಿಚಾರ ಗೊತ್ತಾಯಿತು. ಮೊನ್ನೆಯಷ್ಟೇ ಲಂಡನ್ ಗೆ ಹೋಗುವ ಕುರಿತು ಮಾತನಾಡಿದ್ದ.ನಿನ್ನೆ ಮಧ್ಯಾಹ್ನ ನಮಗೆ ವಿಚಾರ ಗೊತ್ತಾಯಿತು. ಲಂಡನ್ ನಲ್ಲಿ ಸೆಟ್ಲ್ ಆಗಲು ಕುಟುಂಬ ಸಮೇತ ಹೋಗುತ್ತಿದ್ದ. ಈ ವೇಳೆ ದುರ್ಘಟನೆ ನಡೆದಿದೆ, ನಂಬಲಾಗ್ತಿಲ್ಲ.ಒಳ್ಳೆಯ ಸ್ನೇಹಿತನನ್ನ ನಾವು ಕಳೆದುಕೊಂಡಿದ್ದೇವೆ. ಎರಡು ದಿನದ ಹಿಂದೆ ಹೆಂಡತಿ ಕೂಡ ಕೆಲಸ ಮಾಡುವ ಸ್ಥಳದಲ್ಲಿ ರಾಜೀನಾಮೆ ನೀಡಿದ್ದರು. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಬೇಕು ಅಂತಾ ಕನಸು ಕಂಡಿದ್ದ ಎಂದು ನೋವು ತೋಡಿಕೊಂಡರು.
ಕೋಲಾರದ ಟಮಕ ಬಳಿ ಇರುವ ದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರತೀಕ್ ಜೋಶಿ,
2005ರಲ್ಲಿ ರೇಡಿಯೋಲಜಿ ಪಿ.ಜಿ. ಕೋರ್ಸ್ ಮಾಡಿದ್ದರು. ಆದ್ರೆ, ಇದೀಗ ಪ್ರತೀಕ್ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಶ್ರದ್ಧಾಂಜಲಿ ಸಲ್ಲಿಸಿದೆ. ಪ್ರತೀಕ್ ಅವರ ಫೋಟೋಗೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಇದೇ ವೇಳೆ 2005ರಲ್ಲಿ ರೇಡಿಯಾಲಜಿ ಪಿ.ಜಿ. ಕೋರ್ಸ್ ಮಾಡಿದ್ದನ್ನು ನೆನಪಿಸಿಕೊಂಡರು.
ಗುರುವಾರ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸುವವರೆಗೂ, ಡಾ. ಕೋನಿ ವ್ಯಾಸ್ ಅವರ ಕುಟುಂಬವು ಹೊಸ ಜೀವನದ ಕನಸು ಕಾಣುತ್ತಿತ್ತು. ರಾಜಸ್ಥಾನದ ಬನ್ಸ್ವಾರಾದ ಖಾಸಗಿ ಆಸ್ಪತ್ರೆಯಲ್ಲಿ ರೋಗಶಾಸ್ತ್ರಜ್ಞರಾಗಿದ್ದ ಡಾ. ಕೋನಿ, ಲಂಡನ್ ನಲ್ಲಿ ವೈದ್ಯರಾಗಿರುವ ತಮ್ಮ ಪತಿ ಪ್ರತೀಕ್ ಜೋಶಿ ಮತ್ತು ಅವರ ಮೂವರು ಮಕ್ಕಳ ಜೊತೆ ಪಯಣ ಬೆಳೆಸಿದ್ದರು.ಐದು ವರ್ಷದ ಅವಳಿ ಗಂಡು ಮಕ್ಕಳಾದ ಪ್ರದ್ಯುತ್ ಮತ್ತು ನಕುಲ್ ಮತ್ತು ಎಂಟು ವರ್ಷದ ಮಗಳು ಮಿರಾಯಾ ಅವರೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಲು ಡಾ. ಕೋನಿ ಕಳೆದ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ವಿಮಾನ ಹಾರುವ ಮೊದಲು ಕುಟುಂಬವು ಸೆಲ್ಫಿ ಕ್ಲಿಕ್ಕಿಸಿಕೊಂಡಿತ್ತು. ಒಂದು ಬದಿಯಲ್ಲಿ ಪೋಷಕರು ಮತ್ತು ಇನ್ನೊಂದು ಬದಿಯಲ್ಲಿ ಮಕ್ಕಳು ಕೂತಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ದುರಂತ ಸಂಭವಿಸಿದ್ದು, ನಗು ನಗುತ್ತಾ ವಿಮಾನ ಪ್ರಯಾಣದಲ್ಲಿದ್ದವರು ಕ್ಷಣಾರ್ಧದ್ಲಲೇ ಇಡೀ ಕುಟುಂಬ ದುರಂತ ಅಂತ್ಯ ಕಂಡಿದೆ. ಸದ್ಯ ಈ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರು ಮಮ್ಮಲ ಮರಗುತ್ತಿದ್ದಾರೆ.