ಅಮೃತ್ ಮಹಲ್ ಹಸುಗಳ ನರಳಾಟ: ವೈದ್ಯ ಸೋಮಶೇಖರ್ ಮನೆಗೆ

ಅಮೃತ್ ಮಹಲ್ ಹಸುಗಳ ನರಳಾಟ: ವೈದ್ಯ ಸೋಮಶೇಖರ್ ಮನೆಗೆ

ಹಾಸನ: ಅಮೃತ್ ಮಹಲ್ ಕಾವಲ್​ನಲ್ಲಿ 230 ಹಸುಗಳು ಕೆಸರಿನಲ್ಲಿ ಸಿಲುಕಿ ನರಳಾಟ ಪ್ರಕರಣ ಸಂಬಂಧ ಮುಖ್ಯ ಪಶು ವೈದ್ಯಾಧಿಕಾರಿ ಅಮಾನತಾಗಿದ್ದಾರೆ.

ಚನ್ನರಾಯ ಪಟ್ಟಣ ತಾಲೂಕಿನ ರಾಯಸಂದ್ರದಲ್ಲಿನ ಅಮೃತ್ ಮಹಲ್​ನಲ್ಲಿ ಮಳೆಯಿಂದ ಕೆಸರಿನಲ್ಲಿ ಸಿಲುಕಿ 230 ಹಸುಗಳು ಸಾವಿನಂಚಿನಲ್ಲಿದ್ದವು. ನ.8ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಪಶುಸಂಗೊಪನಾ ಇಲಾಖೆ ಸಚಿವ ಪ್ರಭು ಚೌವ್ಹಾಣ್ ಭೇಟಿ ನೀಡಿದ್ದರು.

ಈ ವೇಳೆ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ಕರ್ತವ್ಯ ಲೋಪ ಆರೋಪದ ಮೇಲೆ ನುಗ್ಗೆಹಳ್ಳಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಲ್.ಜಿ.ಸೋಮಶೇಖರ್ ಅವರನ್ನ ಇಲಾಖೆ ಅಧಿಕಾರಿಗಳು ಅಮಾನತು ಮಾಡಿದ್ದಾರೆ.

Published On - 12:22 pm, Tue, 12 November 19

Click on your DTH Provider to Add TV9 Kannada