AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly polls: ಸ್ಪರ್ಧಿಸಿಯೇ ತೀರುವೆ ಅಂತ ಸವಾಲೆಸೆದು ಕುಮಾರಸ್ವಾಮಿಯನ್ನು ತೊಳಲಾಟಕ್ಕೆ ದೂಡಿರುವ ಭವಾನಿ ರೇವಣ್ಣ

ಆದರೆ, ಅವರಿಗೆ ಅಡ್ಡಗಾಲು ಹಾಕುತ್ತಿರೋದು ಕುಮಾರಸ್ವಾಮಿ. ಅವರನ್ನೂ ಕರೆತಂದರೆ ಕುಟುಂಬ ರಾಜಕಾರಣ ಕುರಿತು ಪಕ್ಷದ ನಾಯಕರು ಜನ ಮತ್ತು ವಿರೋಧಿಗಳು ಇನ್ನಷ್ಟು ಮಾತಾಡಿಕೊಳ್ಳುತ್ತಾರೆ ಅಂತ ಅವರು ಅಂದುಕೊಳ್ಳುತ್ತಿರಬಹುದು. ಅಥವಾ ಅವರು ಆರಿಸಿ ಬಂದರೆ ತಮ್ಮ ಜನಪ್ರಿಯತೆ ಮೇಲೆ ಪರಿಣಾಮ ಬೀರುವ ಅಳುಕು ಸಹ ಅವರಿಗಿರಬಹುದು.

Assembly polls: ಸ್ಪರ್ಧಿಸಿಯೇ ತೀರುವೆ ಅಂತ ಸವಾಲೆಸೆದು ಕುಮಾರಸ್ವಾಮಿಯನ್ನು ತೊಳಲಾಟಕ್ಕೆ ದೂಡಿರುವ ಭವಾನಿ ರೇವಣ್ಣ
ಭವಾನಿ ರೇವಣ್ಣ ಜನಪ್ರಿಯತೆ ಅಗಾಧವಾದದ್ದು
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jan 29, 2023 | 7:58 AM

Share

ಭವಾನಿ ರೇವಣ್ಣ (Bhavani Revanna) ಹಾಸನ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯೆಯಾಗಿದ್ದರೂ ರಾಜ್ಯದ ರಾಜಕೀಯ ವಲಯಗಳಲ್ಲಿ ಪ್ರಾಯಶಃ ಉಳಿದೆಲ್ಲ ನಾಯಕರಿಗಿಂತ ಹೆಚ್ಚು ಚರ್ಚೆಯಲ್ಲಿದ್ದಾರೆ. ಅವರೀಗ ಜಿಲ್ಲಾಮಟ್ಟದ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಧುಮುಕುವ ತುಡಿತ ಮತ್ತು ತವಕದಲ್ಲಿದ್ದಾರೆ. ಆದರೆ ಅವರಿಗೆ ಟಿಕೆಟ್ ನೀಡುವುದು ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಸುತಾರಾಂ ಇಷ್ಟವಿಲ್ಲ. ಹೆಚ್ ಡಿ ದೇವೇಗೌಡರ (HD Devegowda) ಫ್ಯಾಮಿಲಿ ಈಗಾಗಲೇ ಕುಟುಂಬದ ರಾಜಕಾರಣ ನಡೆಸುತ್ತಿರುವ ಅಪಖ್ಯಾತಿಯನ್ನು ಹೊತ್ತಿದೆ. ಮಾಜಿ ಪ್ರಧಾನಿಗಳು, ಹೆಚ್ ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ ಮೊದಲಾದವರೆಲ್ಲ ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕುಮಾರಸ್ವಾಮಿಯವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ರಾಮನಗರದಿಂದ ತಮ್ಮ ಪತ್ನಿಯ ಬದಲು ಮಗ ನಿಖಿಲ್ ನನ್ನು ಕಣಕ್ಕಿಳಿಸುವ ನಿರ್ಧಾರ ಈಗಾಗಲೇ ಪ್ರಕಟಿಸಿದ್ದಾರೆ.

ಭವಾನಿ ರೇವಣ್ಣಗೆ ರಾಜಕೀಯ ಮಹತ್ವಾಕಾಂಕ್ಷೆ

ಭವಾನಿ ಅವರು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿರುವುದು ಸ್ಪಷ್ಟವಾಗಿದೆ. ಕುಮಾರಸ್ವಾಮಿಯವರು ತಮ್ಮ ಪತ್ನಿಯನ್ನು ರಾಜಕೀಯಕ್ಕೆ ತರುವುದಾದರೆ ತಾನ್ಯಾಕೆ ಬೇಡ ಅನ್ನೋದು ಅವರ ವರಸೆಯಾಗಿರಬಹುದು. ಕೇವಲ ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಅನುಭವ ಹೊಂದಿದ್ದರೂ ಹಾಸನಲ್ಲಿ ಅವರು ಸಾಕಷ್ಟು ಜನಪ್ರಿಯರು ಅನ್ನೋದು ಸುಳ್ಳಲ್ಲ. ಸ್ಥಳೀಯರು ಹೇಳುವ ಪ್ರಕಾರ ಜೆಡಿಎಸ್ ಭವಾನಿ ಅವರನ್ನು ಬಿಟ್ಟು ಬೇರೆ ಯಾರನ್ನೇ ಕಣಕ್ಕಿಳಿಸಿದರೂ ಸೋಲು ಕಟ್ಟಿಟ್ಟ ಬುತ್ತಿ, ಕೇವಲ ಅವರು ಮಾತ್ರ ಸೀಟು ಗೆದ್ದು ಕೊಡಬಲ್ಲರು!

ಭವಾನಿ ಹಾಸನದಲ್ಲಿ ಬಹಳ ಜನಪ್ರಿಯ

ಭವಾನಿ ಅವರ ಚರಿಷ್ಮಾ ಹಾಗಿದೆ. ಒಬ್ಬ ನುರಿತ ರಾಜಕಾರಣಿಯಂತೆ ಅವರು ಜನರೊಂದಿಗೆ ಬೆರೆಯುತ್ತಾರೆ ಮತ್ತು ಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತಾರೆ, ರಾಜಕಾರಣಿಯಲ್ಲಿರಬೇಕಾದ ಮೂಲಭೂತ ಅಂಶವಿದು. ಅವರು ಹೋದೆಡೆಯೆಲ್ಲ ಜನ ಅದರಲ್ಲೂ ಯುವಕರು ಮತ್ತು ಮಹಿಳೆಯರು ಅವರನ್ನು ಹಿಂಬಾಲಿಸುತ್ತಾರೆ. ದಶಕಗಳಿಂದ ರಾಜಕಾರಣದಲ್ಲಿರುವ ರೇವಣ್ಣ ಅವರಿಗೆ ಇರದಷ್ಟು ಜನಪ್ರಿಯತೆ ಭವಾನಿ ಅವರಿಗಿದೆ.

ಇದನ್ನೂ ಓದಿ:  Taraka Ratna Health: ಹೆಲ್ತ್​ ಬುಲೆಟಿನ್ ರಿಲೀಸ್, ನಂದಮೂರಿ ತಾರಕ ರತ್ನ ಆರೋಗ್ಯ ಸ್ಥಿತಿ ಗಂಭೀರ

An enigma called Bhavani Revanna and the dilemma she has posed to HD Kumaraswamy

ಭವಾನಿ ರೇವಣ್ಣ ಮತ್ತು ಹೆಚ್ ಡಿ ಕುಮಾರಸ್ವಾಮಿ

ಈ ಹಿನ್ನೆಲೆಯಲ್ಲಿ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕೆನ್ನುವ ಕನಸಿಟ್ಟುಕೊಂಡಿದ್ದರೆ ಅದರಲ್ಲಿ ತಪ್ಪೇನೂ ಕಾಣಿಸದು. ಆದರೆ, ಅವರಿಗೆ ಅಡ್ಡಗಾಲು ಹಾಕುತ್ತಿರೋದು ಕುಮಾರಸ್ವಾಮಿ. ಅವರನ್ನೂ ಕರೆತಂದರೆ ಕುಟುಂಬ ರಾಜಕಾರಣ ಕುರಿತು ಪಕ್ಷದ ನಾಯಕರು ಜನ ಮತ್ತು ವಿರೋಧಿಗಳು ಇನ್ನಷ್ಟು ಮಾತಾಡಿಕೊಳ್ಳುತ್ತಾರೆ ಅಂತ ಅವರು ಅಂದುಕೊಳ್ಳುತ್ತಿರಬಹುದು. ಅಥವಾ ಅವರು ಆರಿಸಿ ಬಂದರೆ ತಮ್ಮ ಜನಪ್ರಿಯತೆ ಮೇಲೆ ಪರಿಣಾಮ ಬೀರುವ ಅಳುಕು ಸಹ ಅವರಿಗಿರಬಹುದು. ತಮ್ಮ ಆಪ್ತವಲಯದ ಮೂಲಕ ಭವಾನಿಯವರಿಗೆ ಟಿಕೆಟ್ ನೀಡಲಾಗದು ಅಂತ ಸಂದೇಶವನ್ನು ಅವರು ರೇವಣ್ಣ ಕುಟುಂಬಕ್ಕೆ ಕಳಿಸಿದ್ದಾರೆ.

ಭವಾನಿ ಮಕ್ಕಳು ಭುಸುಗುಡುತ್ತಿದ್ದಾರೆ!

ಕುಮಾರಸ್ವಾಮಿ ಅವರ ವರಸೆ ಭವಾನಿ, ರೇವಣ್ಣ ಮತ್ತು ಅವರ ಮಕ್ಕಳು-ಸೂರಜ್ ಹಾಗೂ ಪ್ರಜ್ವಲ್ ರೇವಣ್ಣ ಅವರಿಗೆ ಕೋಪ ತರಿಸಿದೆ. ವಿಧಾನ ಪರಿಷತ್ ಸದಸ್ಯ ಸೂರಜ್ ಶನಿವಾರದಂದು ಅರಕಲಗೂಡು ತಾಲ್ಲೂಕಿನ ಹರದೂರನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ, ಹಾಸನ ರಾಜಕಾರಣದ ಬಗ್ಗೆ ರೇವಣ್ಣ ಅವರಿಗಿರುವಷ್ಟು ಜ್ಞಾನ ಯಾರಿಗೂ ಇಲ್ಲ ಅಂತ ಹೇಳಿದರು. ಒಬ್ಬ ಸಾಧಾರಣ ಕಾರ್ಯಕರ್ತನನ್ನು ಹಾಸನದಿಂದ ಸ್ಪರ್ಧೆಗಿಳಿಸಿ ಗೆಲ್ಲಿಸಿತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸೂರಜ್, ‘ದೇವೇಗೌಡ ಮತ್ತು ರೇವಣ್ಣ ಹಾಸನ ಮತಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತಾರೆ. ಭವಾನಿ ರೇವಣ್ಣ ಅವರು ಅತ್ಯಂತ ಯೋಗ್ಯ ಅಭ್ಯರ್ಥಿಯಾಗಿದ್ದಾರೆ. ಯಾವುದೋ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುವುದು ಆರ್ಥವಿಲ್ಲದ ಮಾತು. ಅಂಥ ಮಾತುಗಳಿಗೆ ಪೂರ್ಣವಿರಾಮ ಹಾಕಬೇಕು,’ ಎಂದರು.

ಅಮ್ಮನ ಬೆಂಬಲಕ್ಕೆ ಮಕ್ಕಳು

ಸೂರಜ್ ಮಾತಿನ ಅರ್ಥ ಸ್ಪಷ್ಟ. ಟಿಕೆಟ್ ನೀಡಲು ಅಥವಾ ನಿರಾಕರಿಸಲು ಕುಮಾರಸ್ವಾಮಿ ಯಾರು ಅಂತ ಅವರು ಹೇಳುತ್ತಿದ್ದಾರೆ. ಸೂರಜ್ ಮತ್ತು ಪ್ರಜ್ವಲ್ ತಮ್ಮ ತಾಯಿಯ ಬೆಂಬಲಕ್ಕೆ ಬಂಡೆಯಂತೆ ನಿಂತಿದ್ದಾರೆ. ಭವಾನಿಯವರು ಸಹ ಕುಮಾರಸ್ವಾಮಿ ಕುಟುಂಬವನ್ನು ಅಕ್ಷರಶಃ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಾಸನದ ದೇವಸ್ಥಾನದಲ್ಲಿ ಶುಕ್ರವಾರ ಅರ್ಚನೆ ಮಾಡಿಸುವಾಗ ಅವರು ವಾರಿಗಿತ್ತಿ ಅನಿತಾ ಹೆಸರು ಹೇಳಲಿಲ್ಲ. ಶನಿವಾರ ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತಾಡುವಾಗ ದೇವೇಗೌಡರ ಹೆಸರು ಹೇಳಿ ಅವರಿಗೆ ನಮಸ್ಕರಿಸಿದರೇ ಹೊರತು ಕುಮಾರಸ್ವಾಮಿಯವರ ಹೆಸರು ಹೇಳಲಿಲ್ಲ. ಅವರು ಹಿರಿಸಾವೆ ಮಠಾಧೀಶರಾದ ಶ್ರೀಶ್ರೀಶ್ರೀ ಕುಮಾರಸ್ವಾಮಿಗಳ ಪಾದಗಳಿಗೆ ನಮಸ್ಕಾರ ಅನ್ನುತ್ತಾರೆ ಆದರೆ ತಮ್ಮ ಮೈದುನನ ಹೆಸರು ಹೇಳುವುದಿಲ್ಲ.

ಭವಾನಿಯನ್ನು ಆಹ್ವಾನಿಸುತ್ತಿದೆ ಬಿಜೆಪಿ!

ಇನ್ನೊಂದು ಗಮನಾರ್ಹ ಬೆಳವಣಿಗೆಯೆಂದರೆ, ಭವಾನಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡು ಹಾಸನ ಇಲ್ಲವೇ ಹೊಳೆನರಸೀಪುರ ಕ್ಷೇತ್ರದ ಟಿಕೆಟ್ ನೀಡಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಸಿಟಿ ರವಿ ಮತ್ತು ಸಚಿವ ಡಾ ಸಿ ಎನ್ ಆಶ್ವಥ್ ನಾರಾಯಣ ಬಹಿರಂಗವಾಗೇ ಭವಾನಿಯವರನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ.

ಇದನ್ನೂ ಓದಿ: ವಿಜಯಪುರ: ದೇಶದಲ್ಲೇ ಅತೀ ಎತ್ತರದ ಶಿವಲಿಂಗ ಮೂರ್ತಿ ನಿರ್ಮಾಣ ಹಿನ್ನಲೆ, ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಕಾರ್ಯಕ್ರಮ ಆಯೋಜನೆ, ಅದರ ಝಲಕ್​ ಇಲ್ಲಿದೆ ನೋಡಿ

ಭವಾನಿಯವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡರೂ ಅಚ್ಚರಿಯಿಲ್ಲ. ಮಾಧ್ಯಮದವರು ಅವರಿಗೆ ಬಿಜೆಪಿಯಿಂದ ಬರುತ್ತಿರುವ ಆಹ್ವಾನದ ಬಗ್ಗೆ ಹೇಳಿ ಆ ಪಕ್ಷ ಸೇರುತ್ತೀರಾ ಅಂತ ಕೇಳಿದಾಗ ಭವಾನಿಯವರು ನಗುತ್ತಾ ಸದ್ಯಕ್ಕೆ ಏನೂ ಹೇಳಲಾರೆ ಅಂದಿದ್ದರು. ಅಂದರೆ ಆ ಪರ್ಯಾಯವನ್ನು ಅವರು ಇಟ್ಟುಕೊಂಡಿದ್ದಾರೆ.

ದೊಡ್ಡಗೌಡರ ನಿರ್ಧಾರದ ಮೇಲೆ ಎಲ್ಲರ ಕಣ್ಣು!

ರಾಜ್ಯ ರಾಜಕಾರಣ ಒಂದೆಡೆಯಾದರೆ ದೊಡ್ಡಗೌಡರ ಕುಟುಂಬದ ರಾಜಕಾರಣ ಮತ್ತೊದೆಡೆ. ಭವಾನಿ ರೇವಣ್ಣ ಅವರು ತಮ್ಮ ನಿರ್ಧಾರದ ಬಗ್ಗೆ ಅಚಲರಾಗಿದ್ದಾರೆ- ಜೆಡಿಎಸ್ ಇಲ್ಲದಿದ್ದರೆ ಬಿಜೆಪಿ! ಹಾಗೇನಾದರೂ ಅವರು ಬಿಜೆಪಿಯಿಂದ ಸ್ಪರ್ಧಿಸಿದರೆ ಕುಮಾರಸ್ವಾಮಿಗೆ ತೀವ್ರ ಸ್ವರೂಪದ ಮುಖಭಂಗವಾಗಲಿದೆ. ಎಲ್ಲರ ದೃಷ್ಟಿ ದೇವೇಗೌಡರು ತೆಗೆದುಕೊಳ್ಳುವ ನಿರ್ಧಾರ ಮೇಲೆ ನೆಟ್ಟಿದೆ.

ಮತ್ತಷ್ಟು ಕರ್ನಾಟಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ