ಆತ್ಮಹತ್ಯೆಗೆ ಶರಣಾಗುವುದಾಗಿ ವಾಟ್ಸಾಪ್ ಗ್ರೂಪ್ನಲ್ಲಿ ಪೋಸ್ಟ್! ತಪ್ಪು ನಿರ್ಧಾರ ಕೈಗೊಳ್ಳಬೇಡಿ ಎಂದು ಡಿವೈಎಸ್ಪಿ ಮೆಸೇಜ್
ನನ್ನ ಕರೆ ಸ್ವೀಕರಿಸಿ ಅಥವಾ ನೀವೇ ನನಗೆ ಕರೆ ಮಾಡಿ. ತಪ್ಪು ನಿರ್ಧಾರ ಕೈಗೊಳ್ಳಬೇಡಿ ಅಂತ ಶ್ರೀಧರ್ ಪೋಸ್ಟ್ಗೆ ಡಿವೈಎಸ್ಪಿ ಮೆಸೇಜ್ ಮಾಡಿದ್ದಾರೆ. ಶಿವಪ್ಪ ಎಂಬುವರು ಬೇಕರಿಗಾಗಿ ಕಟ್ಟಡ ಬಾಡಿಗೆ ಪಡೆದಿದ್ದರು.
ಚಿತ್ರದುರ್ಗ: ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಅಂತ ಆರ್ಟಿಐ ಕಾರ್ಯಕರ್ತರೊಬ್ಬರು ವಾಟ್ಸಾಪ್ ಗ್ರೂಪ್ನಲ್ಲಿ ಪೋಸ್ಟ್ ಮಾಡಿ, ನನ್ನ ಸಾವಿಗೆ ಚಿತ್ರಹಳ್ಳಿ ಠಾಣೆ ಪೊಲೀಸರು, ಪಿಎಸ್ಐ ಕಾರಣ ಅಂತ ತಿಳಿಸಿದ್ದಾರೆ. ನಮ್ಮ ಚಿತ್ರದುರ್ಗ ಎಂಬ ಗ್ರೂಪ್ನಲ್ಲಿ ಆರ್ಟಿಐ ಕಾರ್ಯಕರ್ತ ಶ್ರೀಧರ್ ಪೋಸ್ಟ್ ಮಾಡಿದ್ದಾರೆ. ಶ್ರೀಧರ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ನಿವಾಸಿ. ಶ್ರೀಧರ್ ಪೋಸ್ಟ್ಗೆ ವಾಟ್ಸಾಪ್ ಗ್ರೂಪ್ನಲ್ಲಿ ಡಿವೈಎಸ್ಪಿ ಪಾಂಡುರಂಗ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಕರೆ ಸ್ವೀಕರಿಸಿ ಅಥವಾ ನೀವೇ ನನಗೆ ಕರೆ ಮಾಡಿ. ತಪ್ಪು ನಿರ್ಧಾರ ಕೈಗೊಳ್ಳಬೇಡಿ ಅಂತ ಶ್ರೀಧರ್ ಪೋಸ್ಟ್ಗೆ ಡಿವೈಎಸ್ಪಿ ಮೆಸೇಜ್ ಮಾಡಿದ್ದಾರೆ. ಶಿವಪ್ಪ ಎಂಬುವರು ಬೇಕರಿಗಾಗಿ ಕಟ್ಟಡ ಬಾಡಿಗೆ ಪಡೆದಿದ್ದರು. ಬಾಡಿಗೆ ಹಣ ನೀಡದೆ ಮೋಸ ಮಾಡಿದ್ದಾರೆಂದು ಶ್ರೀಧರ್ ಆರೋಪ ಮಾಡುತ್ತಿದ್ದಾರೆ. ಪೊಲೀಸರು ನ್ಯಾಯ ಒದಗಿಸಿಲ್ಲ ಎಂಬರ್ಥದಲ್ಲಿ ಆರೋಪ ಮಾಡುತ್ತಿದ್ದಾರೆ.
ಬೆತ್ತಲೆ ಮಾಡಿ ಯುವತಿಗೆ ಚಿತ್ರಹಿಂಸೆ ಚಿಕ್ಕಬಳ್ಳಾಪುರ: ಮದುವೆ ನೆಪದಲ್ಲಿ ಬೆತ್ತಲೆ ಮಾಡಿ ಯುವತಿಗೆ ಚಿತ್ರಹಿಂಸೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದಲ್ಲಿ ನಡೆದಿದೆ. ವಿವಾಹಿತ ವ್ಯಕ್ತಿಯಿಂದ ಕೃತ್ಯ ನಡೆದಿದ್ದು, ಪಾತಪಾಳ್ಯ ಗ್ರಾಮದ ರಘುನಾಥ್ ರೆಡ್ಡಿ ವಿರುದ್ಧ ಆರೋಪ ಕೇಳಿಬಂದಿದೆ. ಬಾಗೇಪಲ್ಲಿ ಮೂಲದ ಯುವತಿಯನ್ನು ಪ್ರೀತಿಸಿ, ಬೆತ್ತಲೆಗೊಳಿಸಿ ಹಲ್ಲೆ ನಡೆಸಿ ವಿಕೃತ ವರ್ತನೆ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಸದ್ಯ ಈ ಪ್ರಕರಣ ದಾಖಲಾಗಿದೆ.
ಪೊಲೀಸರ ಕಣ್ತಪ್ಪಿಸಲು ಹೋಗಿ ಅಪಘಾತ ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಲು ಹೋಗಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯವಾಗಿದೆ. ಬೈಕ್ ಸವಾರ ಕೌಶಿಕ್(19) ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯಲ್ಲಿ ಈ ಘಟನೆ ನಡೆದಿದೆ. ವಿಜಯನಗರ ಟ್ರಾಫಿಕ್ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೆಲ್ಮೆಟ್ ಹಾಕದೇ ಬೈಕ್ನಲ್ಲಿ ಕೌಶಿಕ್ ಬರುತ್ತಿದ್ದ. ಪೊಲೀಸರನ್ನು ಕಂಡು ಬೈಕ್ ಸವಾರ ಯೂ ಟರ್ನ್ ತೆಗೆದುಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದ. ಈ ವೇಳೆ ಡಿವೈಡರ್ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯವಾಗಿದೆ. ಕೌಶಿಕ್ ಬ್ರೈನ್ ಡೆತ್ ಆಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಸ್ವಿಫ್ಟ್ ಕಾರಿಗೆ ಟಿಟಿ ವಾಹನ ಡಿಕ್ಕಿ ಶಿಕಾರಿಪುರದಿಂದ ಚಿಕ್ಕಮಗಳೂರಿಗೆ ಬಾಡಿಗೆ ಹೋಗುತ್ತಿದ್ದ ಟಿಟಿ ವಾಹನ ಸ್ವಿಫ್ಟ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನ ಹಿಂಭಾಗ ಸ್ವಲ್ಪ ಜಖಂ ಆಗಿದೆ. ಈ ಹಿನ್ನೆಲೆಯಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರು ಟಿಟಿ ವಾಹನ ಚಾಲಕ ಸುಮಂತ್ (34) ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇದನ್ನೂ ಓದಿ
ಸೈಬರ್ ಸುರಕ್ಷಿತ ಕರ್ನಾಟಕ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
KCET 2021: ಕರ್ನಾಟಕ ಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟ; ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Sat, 11 December 21