ಸಚಿವ ಉಮೇಶ್​ ಕತ್ತಿ ವಿಶೇಷಾಧಿಕಾರಿ ಪ್ರಸನ್ನ ಸುಬೇದಾರ್ ವಿರುದ್ಧ ಮತ್ತೊಂದು ಆರೋಪ

ಅಭಿವೃದ್ಧಿ ಕಾಮಗಾರಿ, ಮರಗಳ್ಳರ ರಕ್ಷಿಸಿದ ಆರೋಪದಲ್ಲಿ ಆರ್​ಎಫ್​ಓ ಪ್ರಸನ್ನ ಸುಬೇದಾರ್ ವಿರುದ್ಧ ವಿಚಕ್ಷಣ ದಳದಿಂದ ತನಿಖೆ ‌ನಡೆದು ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಅಂತಿಮ ವರದಿ ಸಲ್ಲಿಕೆಯಾಗಿದ್ದರೂ ಕ್ರಮ ಕೈಗೊಂಡಿಲ್ಲ.

ಸಚಿವ ಉಮೇಶ್​ ಕತ್ತಿ ವಿಶೇಷಾಧಿಕಾರಿ ಪ್ರಸನ್ನ ಸುಬೇದಾರ್ ವಿರುದ್ಧ ಮತ್ತೊಂದು ಆರೋಪ
ಉಮೇಶ್ ಕತ್ತಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 11, 2021 | 5:27 PM

ಹುಬ್ಬಳ್ಳಿ: ಅರಣ್ಯ ಉಮೇಶ್ ಕತ್ತಿ ಅವರ ವಿಶೇಷಾಧಿಕಾರಿಯಾಗಿರುವ RFO ಪ್ರಸನ್ನ ಸುಬೇದಾರ್ ವಿರುದ್ಧ ಭ್ರಷ್ಟಾಚಾರ ಆರೋಪದ ಜೊತೆಗೆ ಮತ್ತೊಂದು ಆರೋಪ ಕೇಳಿಬಂದಿದೆ. ಅಭಿವೃದ್ಧಿ ಕಾಮಗಾರಿ, ಮರಗಳ್ಳರ ರಕ್ಷಿಸಿದ ಆರೋಪದಲ್ಲಿ ಅವರ ವಿರುದ್ಧ ವಿಚಕ್ಷಣ ದಳದಿಂದ ತನಿಖೆ ‌ನಡೆದು ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಅಂತಿಮ ವರದಿ ಸಲ್ಲಿಕೆಯಾಗಿದ್ದರೂ ಕ್ರಮ ಕೈಗೊಂಡಿಲ್ಲ. ಪ್ರಕರಣಗಳಿಂದ ಪಾರಾಗಲು ಪ್ರಸನ್ನ ಸುಬೇದಾರ್ ತಂತ್ರ ರೂಪಿಸಿದ್ದು, ವಿಶೇಷಾಧಿಕಾರಿ ಹುದ್ದೆಯಿಂದ ತನಿಖೆಯ ಮೇಲೆ ಪ್ರಭಾವ ಬೀರಿ, ಪ್ರಕರಣ‌ ಮುಚ್ಚಿಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಾಂಡೇಲಿಯ ದೂರುದಾರ ಡಿ. ಶ್ಯಾಮ್​ ಸನ್ ಈ ಬಗ್ಗೆ ಆರೋಪ ಮಾಡಿದ್ದಾರೆ.

ಅರಣ್ಯ ಸಚಿವ ಉಮೇಶ ಕತ್ತಿ ವಿಶೇಷಾಧಿಕಾರಿ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ವಿಶೇಷಾಧಿಕಾರಿ ಆರ್ ಎಫ್ ಓ ಪ್ರಸನ್ನ ಸುಬೇದಾರ್ ವಿರುದ್ಧ ಸಿರಸಿಯ ಅರಣ್ಯ ಸಂಚಾರಿ ದಳದಿಂದ ತನಿಖೆ ನಡೆಸಲಾಗಿದೆ. ಉಪ ಅರಣ್ಯ ಸಂರಕ್ಷಾಧಿಕಾರಿ ಅಬ್ದುಲ್ ಅಜೀಜ್ ರಿಂದ ತನಿಖೆ ನಡೆಸಲಾಗಿದ್ದು, ದಾಂಡೇಲಿಯ ಡಿ ಶ್ಯಾಮಸನ್ ಅಲಿಯಾಸ್ ನಾಗರಾಜ ಎಂಬುವವರಿಂದ ದೂರು ದಾಖಲಾಗಿದೆ. 32,537 ಪೂರಕ ದಾಖಲೆಗಳೊಂದಿಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡು ತನಿಖಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ದೂರಿನ ಸಾರಾಂಶ: 1)2017 ರಿಂದ 2020 ರವರೆ ಹಳಿಯಾಳ ಅರಣ್ಯ ವಲಯದಲ್ಲಿ ಟೆಂಡರ್ ನಿಯಮ ಉಲ್ಲಂಘಿಸಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಳಪೆ ಕಾಮಗಾರಿ ನಡೆಸಿರುವ ಆರೋಪ 2) ತಂತಿ ಬೇಲಿ ನಿರ್ಮಾಣಕ್ಕಾಗಿ ನಿಯಮ ಉಲ್ಲಂಘಿಸಿ ತುಂಡು ಗುತ್ತಿಗೆ ನೀಡಿ ಕಳಪೆ ಕಾಮಗಾರಿ ನಡೆಸಿರುವದು ಹಾಗೂ ತಂತಿಬೇಲಿ ಹಾಗೂ ಸಿಮೆಂಟ್ ಕಂಬಗಳನ್ನು ಸ್ವಲಾಭಕ್ಕಾಗಿ ಬೇರೆಯವರಿಗೆ ಮಾರಾಟ ಮಾಡಿರುವ ಆರೋಪ. 3) ವಸತಿ ಗೃಹ ರಿಪೇರಿಯಲ್ಲಿ ಅಕ್ರಮ ಎಸಗಿರುವ ಆರೋಪ. 4) ಸಾಲುಮರದ ತಿಮ್ಮಕ್ಕ ಉದ್ಯಾನವನ ನಿರ್ಮಾಣದಲ್ಲಿ ಟೆಂಡರ್ ನಿಯಮ ಉಲ್ಲಂಘಿಸಿ ಕಳಪೆ ಕಾಮಗಾರಿ ನಡೆಸಿರುವ ಆರೋಪ. 5)ವಿವಿಧ ಅರಣ್ಯ ಶಾಖೆಗಳಲ್ಲಿ ಕ್ರಿಯಾಯೋಜನೆ ಹಾಗೂ ಅಂದಾಜು ಪತ್ರಿಕೆಯಂತೆ ಕಾಮಗಾರಿ ನಡೆಸದೇ ಅಕ್ರಮ ಕಾಮಗಾರಿ ಆರೋಪ. 6) ಬೆಂಕಿರೇಖೆ ನಿರ್ಮಾಣ ಸಿಪಿಟಿ ಹಾಗೂ ಪಿಪಿಟಿ ಮಾಡುವಾಗ ನಿಯಮ ಉಲ್ಲಂಘಿಸಿ ಅಕ್ರಮ ಎಸಗಿರಿರುವ ಆರೋಪ. 7) ಕಾಮಗಾರಿಗಳ ಟೆಂಡರ್ ಕರೆಯದೇ ಕೆಲವೇ ಕೆಲವು ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡಿರುವದು 8)ಮಾಹಿತಿ ಹಕ್ಕಿನಡಿ ಸರಿಯಾದ ಮಾಹಿತಿ ಪೊರೈಸದೇ ಆರೋಪಿತ ಪ್ರಸನ್ನ ಸುಬೇದಾರ್ ಜೊತೆ ಮೇಲಾಧಿಕಾರಿಗಳು ಮಿಲಾಪಿಯಾಗಿರುವ ಆರೋಪ. 9) ಯರಗಟ್ಟಿ ಹಾಗೂ ನಾಯ್ಕೋಜಿ ಎಂಬ ಅರಣ್ಯ ಗುತ್ತಿಗೆದಾರರ ಬ್ಯಾಂಕ್ ಅಕೌಂಟ್ ನಿಂದ ಸರಕಾರಿ ವೈದ್ಯರೊಬ್ಬರ ಅಕೌಂಟ್ ಗೆ ಲಕ್ಷಾಂತರ ರೂಪಾಯಿ ವರ್ಗಾವಣೆಯ ಹಿಂದೆ ಪ್ರಸನ್ನ ಸುಬೇದಾರ್ ಕೈವಾಡ ಆರೋಪ. 10) ಅರಣ್ಯ ಇಲಾಖೆಯ ಸಿಬ್ಬಂಧಿಯ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಅಕ್ರಮ ವಹಿವಾಟು ಆರೋಪ.

ಗಂಭೀರ ಪ್ರಕರಣಗಳ ತನಿಖಾ ಹಂತದಲ್ಲೇ ಪ್ರಸನ್ನ ಸುಬೇದಾರ್ ವಿಶೇಷಾಧಿಕಾರಿಯಾಗಿ ನೇಮಕವಾಗಿದ್ದಾರೆ. ಈಗಾಗಲೇ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದೆ. ವಿಶೇಷಾಧಿಕಾರಿ ಹುದ್ದೆಯಿಂದ ಕೂಡಲೇ ಸುಬೇದಾರ್ ರನ್ನು ವಜಾಗೊಳಿಸಲು ಆಗ್ರಹ ಮಾಡಲಾಗಿದೆ. ಕಳೆದ ಡಿಸೆಂಬರ್ 3 ರಂದು ವಿಶೇಷಾಧಿಕಾರಿಯಾಗಿ ಪ್ರಸನ್ನ ಸುಬೇದಾರ್ ನೇಮಕಗೊಂಡಿದ್ದರು.

ಬೆಳಗಾವಿಯ ಶಿರಸಂಗಿ ದೇವಸ್ಥಾನದ ಟ್ರಸ್ಟ್ ಬಗ್ಗೆ ಅವಹೇಳನಕಾರಿ ಪೋಸ್ಟ್:

ಹುಬ್ಬಳ್ಳಿ: ದೇವಸ್ಥಾನದ ಟ್ರಸ್ಟ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಿನ್ನೆಲೆ ಹುಬ್ಬಳ್ಳಿಯ ಸೈಬರ್ ಕ್ರೈಮ್​ ಠಾಣೆಗೆ ದೂರು ನೀಡಲು ನಿರ್ಧಾರ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿಯ ಕಾಳಿಕಾ ದೇವಸ್ಥಾನದ ಬಗ್ಗೆ ವಾಟ್ಸಾಪ್​​ನಲ್ಲಿ ಪೋಸ್ಟ್ ಮಾಡಲಾಗಿತ್ತು. ದೇವಸ್ಥಾನಕ್ಕೆ ಯಾವುದೇ ರೀತಿಯ ದೇಣಿಗೆ, ದೇವಿಗೆ ಸೀರೆ ಸೇರಿದಂತೆ ದವಸ ಧಾನ್ಯ ನೀಡದಂತೆ ವಾಟ್ಸಾಪ್​​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪ್ರಕರಣದ ಕುರಿತು ನಗರಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ವಿರುದ್ಧ ಆರೋಪ ಕೇಳಿಬಂದಿದ್ದು, ರಾಮಣ್ಣ ವಿರುದ್ಧ ಟ್ರಸ್ಟ್ ಸಿಬ್ಬಂದಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಸೀಜ್ ಆಗಿದ್ದ ಅಕ್ಕಿ ಕಳ್ಳ ಸಾಗಣೆ ಮಾಡಿದ ಪೊಲೀಸರ ವಿರುದ್ಧ ದೂರು ದಾಖಲು:

ಮಂಡ್ಯ: ವಶಪಡಿಸಿಕೊಂಡಿದ್ದ ಅಕ್ಕಿಯನ್ನು ರಾತ್ರೋರಾತ್ರಿ ಸಾಗಣೆ ಮಾಡಿದ ಆರೋಪದಲ್ಲಿ ಮಂಡ್ಯದ ಪೂರ್ವ ಠಾಣೆ ಪೊಲೀಸರ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಡಿ. 8ರಂದು ರಾತ್ರಿ ರೈಸ್ ಮಿಲ್ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಆಗ 50 ಕೆಜಿ ತೂಕದ 525 ಮೂಟೆ ಪಡಿತರ ಅಕ್ಕಿ ಪತ್ತೆಯಾಗಿತ್ತು. ಭಾರತ ಆಹಾರ ನಿಗಮದ ಹೆಸರಿನ ಪಂಜಾಬ್ ಪಡಿತರ ಅಕ್ಕಿ ಪತ್ತೆಯಾಗಿತ್ತು. ಬಳಿಕ ರೈಸ್ ಮಿಲ್ ಸೀಜ್ ಮಾಡಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಅಕ್ಕಿ ಕಾವಲಿಗೆ ತಹಶೀಲ್ದಾರ್ ಪೊಲೀಸರನ್ನು ನಿಯೋಜಿಸಿದ್ದರು. ಆದರೆ, ರಾತ್ರಿ ಸೀಜ್ ಮಾಡಿದ್ದ ಅಕ್ಕಿ ರಾತ್ರೋರಾತ್ರಿ ಕಳ್ಳ ಸಾಗಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿ ಸೌಮ್ಯಾ ದೂರು ಆಧರಿಸಿ ಮಂಡ್ಯ ಪೂರ್ವ ಠಾಣೆ ಪೊಲೀಸರ ವಿರುದ್ಧ FIR ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇಕಡಾ 30ರಷ್ಟು ಅರಣ್ಯ ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ

ಕರ್ನಾಟಕದಲ್ಲಿ ಬರೋಬ್ಬರಿ 1.77 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ; ಮಲೆನಾಡಿನಲ್ಲೇ ಹೆಚ್ಚು ಭೂ ಕಬಳಿಕೆ