ಕರ್ನಾಟಕದಲ್ಲಿ ಬರೋಬ್ಬರಿ 1.77 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ; ಮಲೆನಾಡಿನಲ್ಲೇ ಹೆಚ್ಚು ಭೂ ಕಬಳಿಕೆ

ರಾಜ್ಯದ ಅರಣ್ಯ ಇಲಾಖೆ ವರದಿ ಪ್ರಕಾರ ಕರ್ನಾಟಕದಾದ್ಯಂತ 1,77,997 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಅತಿಕ್ರಮಣಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬೇಸರದ ಸಂಗತಿ.

ಕರ್ನಾಟಕದಲ್ಲಿ ಬರೋಬ್ಬರಿ 1.77 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ; ಮಲೆನಾಡಿನಲ್ಲೇ ಹೆಚ್ಚು ಭೂ ಕಬಳಿಕೆ
ಅರಣ್ಯ ಭೂಮಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 09, 2021 | 3:18 PM

ಬೆಂಗಳೂರು: ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವ ಕರ್ನಾಟಕದಲ್ಲಿ ಬಹುಪಾಲು ಅರಣ್ಯವೇ ತುಂಬಿಕೊಂಡಿದೆ. ರಾಜ್ಯದ ಅರಣ್ಯ ಇಲಾಖೆ ವರದಿ ಪ್ರಕಾರ ಕರ್ನಾಟಕದಾದ್ಯಂತ 1,77,997 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿಯಾಗಿದೆ. ಒತ್ತುವರಿಯಾದ ಭೂಮಿಯನ್ನು ಮೂರು ಎಕರೆಗಿಂತ ಕೆಳಗಿನವರು ಮತ್ತು ಮೂರು ಎಕರೆ ಮೇಲಿನವರು ಎಂಬ ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಈ ಅತಿಕ್ರಮಣಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬೇಸರದ ಸಂಗತಿ. ರಾಜಕೀಯ ಒತ್ತಡಕ್ಕೆ ಮಣಿದು ವರ್ಷ ಕಳೆದರೂ ಒಂದು ಇಂಚು ಭೂಮಿಯನ್ನೂ ಅತಿಕ್ರಮಣದಾರರಿಂದ ವಶಪಡಿಸಿಕೊಂಡಿಲ್ಲ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದ್ದು, ರಾಜ್ಯದಲ್ಲಿ 1,01,017 ಅರಣ್ಯ ಭೂಮಿ ಅತಿಕ್ರಮಣವಾದ ನಿದರ್ಶನಗಳಿವೆ ಎಂದು ಹೇಳಿದೆ. ಸಾಗರ ಅರಣ್ಯ ವಿಭಾಗದ ಶಿವಮೊಗ್ಗ ವೃತ್ತದಲ್ಲಿ ಮೂರು ಎಕರೆಗಿಂತ ಕಡಿಮೆ ಇರುವ ಅರಣ್ಯ ಭೂಮಿ (50,579.53 ಎಕರೆ) ಒತ್ತುವರಿ ಕುರಿತು 38,012 ಪ್ರಕರಣಗಳು ದಾಖಲಾಗಿದ್ದು, ಈ ವಲಯದಲ್ಲಿ 34,030.25 ಎಕರೆ ಭೂಮಿ ಒತ್ತುವರಿಯಾಗಿದೆ. ಕೆನರಾ ಅರಣ್ಯ ವೃತ್ತದಲ್ಲಿ 18,334.8 ಎಕರೆ ಒತ್ತುವರಿಯಾಗಿದ್ದು, ಚಿಕ್ಕಮಗಳೂರಿನಲ್ಲಿ 10,688 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ.

ಮೂರು ಎಕರೆಗಿಂತ ಹೆಚ್ಚಿನ ಒತ್ತುವರಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಚಿಕ್ಕಮಗಳೂರು ಅರಣ್ಯ ವೃತ್ತದಲ್ಲಿ 14,016.62 ಎಕರೆ, ಶಿವಮೊಗ್ಗ ವೃತ್ತದಲ್ಲಿ 27,918.06 ಎಕರೆ ಮತ್ತು ಕೆನರಾ ಅರಣ್ಯ ವೃತ್ತದಲ್ಲಿ 9,287.17 ಎಕರೆ ಒತ್ತುವರಿಯಾಗಿದೆ ಎಂದು ವರದಿಯಾಗಿದೆ. ಬೆಂಗಳೂರು ಅರಣ್ಯ ವಲಯದಲ್ಲಿ ಮೂರು ಎಕರೆಗಿಂತ ಕೆಳಗಿನ ಒತ್ತುವರಿ ಪ್ರಕರಣಗಳಲ್ಲಿ 7,928.52 ಎಕರೆ ಹಾಗೂ ಮೂರು ಎಕರೆಗಿಂತ ಹೆಚ್ಚಿನ ಪ್ರಕರಣಗಳಲ್ಲಿ 5,087.77 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ.

2015ರಲ್ಲಿ ಕರ್ನಾಟಕ ಸರ್ಕಾರವು ಮೂರು ಎಕರೆಗಿಂತ ಕಡಿಮೆ ಒತ್ತುವರಿಯಾಗಿರುವ ಭೂಮಿಯನ್ನು ತೆರವು ಮಾಡದಂತೆ ಅರಣ್ಯ ಇಲಾಖೆಗೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ತನ್ನ 1998ರ ತೀರ್ಪಿನಲ್ಲಿ ಟಿಎನ್ ಗೋದಾವರ್ಮನ್ ತಿರುಮುಲ್ಪಾಡ್ ವರ್ಸಸ್ ಯೂನಿಯನ್ ಆಫ್ ಇಂಡಿಯಾದಲ್ಲಿ ಏಪ್ರಿಲ್ 1978ರ ನಂತರ ನಡೆದ ಭೂಮಿ ಒತ್ತುವರಿಯನ್ನು ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಇದನ್ನೂ ಓದಿ: ತುಮಕೂರು: ಎಸಿಬಿ ದಾಳಿ ವೇಳೆ ತಪ್ಪಿಸಿಕೊಂಡಿದ್ದ ಪಿಎಸ್​ಐ ಜನ್ನೇನಹಳ್ಳಿ ಅರಣ್ಯದ ಬಳಿ ವಶಕ್ಕೆ

ಪಾರ್ಕ್ ಒತ್ತುವರಿ ತೆರವುಗೊಳಿಸದ ಬಿಡಿಎಗೆ ಹೈಕೋರ್ಟ್ ತರಾಟೆ