ಅನ್ನಭಾಗ್ಯ ಯೋಜನೆಗೆ ಹಿಡಿದ ಗ್ರಹಣ: 3 ತಿಂಗಳಿನಿಂದ ಬರದ ಡಿಬಿಟಿ ಹಣ!

ಸಿದ್ದರಾಮಾಯ್ಯನವರ ಕನಸಿನ ಕೂಸಾದ ಅನ್ನಭಾಗ್ಯ ಯೋಜನೆಗೆ ಮತ್ತೆ ಗ್ರಹಣ ಹಿಡಿದಿದೆ. ಅಕ್ಕಿ‌ ಬದಲಾಗಿದೆ ಹಣ ಕೊಡುತ್ತಿದ್ದ ಡಿಬಿಟಿ ಹಣವು ಕಳೆದ ಮೂರು ತಿಂಗಳಿನಿಂದ ಕ್ಲೋಸ್ ಆಗಿದ್ದು, ಅನ್ನಭಾಗ್ಯ ಫಾಲಾನುಭವಿಗಳು ಸರ್ಕಾರದ ವಿರುದ್ದ ಪತ್ರ ಬರೆದು ಆಕ್ರೋಶ ಹೊರ ಹಾಕುತ್ತಿದ್ದಾರೆ.‌

ಅನ್ನಭಾಗ್ಯ ಯೋಜನೆಗೆ ಹಿಡಿದ ಗ್ರಹಣ: 3 ತಿಂಗಳಿನಿಂದ ಬರದ ಡಿಬಿಟಿ ಹಣ!
ಅನ್ನಭಾಗ್ಯ
Follow us
Poornima Agali Nagaraj
| Updated By: ರಮೇಶ್ ಬಿ. ಜವಳಗೇರಾ

Updated on: Oct 09, 2024 | 10:56 PM

ಬೆಂಗಳೂರು, (ಅಕ್ಟೋಬರ್ 09): ಕರ್ನಾಟಕ ಕಾಂಗ್ರೆಸ್​ ಸರ್ಕಾರ ಐದು ಮಹತ್ವ ಯೋಜನೆಗಳನ್ನ ಜಾರಿ ಮಾಡಿ ಅಧಿಕಾರಕ್ಕೆ ಬಂದಿದೆ. ಆದ್ರೆ ಅಧಿಕಾರಕ್ಕೆ ಬಂದು ವರ್ಷ ಆಗುತ್ತಿದ್ದಂತೆ ಒಂದೊಂದೆ ಯೋಜನೆಗಳಿಗೆ ಅದ್ಯಾಕೋ ಗ್ರಹಣ ಹಿಡಿದಂತಾಗುತ್ತಿದೆ. ಹೌದು, ಗೃಹಲಕ್ಷ್ಮಿ ಯೋಜನೆಯಲ್ಲಿ ನೀಡುತ್ತಿದ್ದ 2 ಸಾವಿರ ಹಣ ಕೊಂಚ ತಡವಾಗಿ ಬಿಡುಗಡೆಯಾಗುತ್ತಿದೆ. ಇದೀಗ ಅನ್ನಭಾಗ್ಯದ ಹಣಕ್ಕೂ ಗ್ರಹಣ ಹಿಡಿದಿದ್ದು, ಎರಡು ತಿಂಗಳಿನಿಂದ ಹಣ ಬಂದಿಲ್ಲ ಎಂದು ಬಿಪಿಎಲ್ ಫಲಾನುಭವಿಗಳು ಸರ್ಕಾರದ ವಿರುದ್ದ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಪಿಎಲ್‌ ಕಾರ್ಡ್‌ದಾರರ ಫಲಾನುಭವಿಗಳ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ ಸರಕಾರ ಫಲಾನುಭವಿಗಳ ಮುಖ್ಯಸ್ಥರ ಖಾತೆಗೆ ಹಣ ಹಾಕಲು ಮುಂದಾಗಿದೆ. ಅದರಂತೆ ಪ್ರತಿ ಕೆಜಿ ಅಕ್ಕಿಗೆ ತಲಾ 34ರೂನಂತೆ ಒಟ್ಟು 5 ಕೆಜಿ ಅಕ್ಕಿಗೆ 170ರೂ ನೀಡಲಾಗುತ್ತಿತ್ತು. ಅದರಂತೆ ಫಲಾನುಭವಿಗಳ ಖಾತೆಗೆ ಹಣ ಕೂಡ ಜಮಾವಣೆಯಾಗುತ್ತಿತ್ತು. ಆದ್ರೆ ಕಳೆದ ಎರಡು ತಿಂಗಳಿಂದ ಹಣ ಪಾವತಿಯಾಗಿಲ್ಲ. ಹೀಗಾಗಿ ಪ್ರತಿದಿನ ಬೆಂಗಳೂರು‌ ಒನ್ ಹಾಗೂ ಬ್ಯಾಂಕ್ ಗಳನ್ನ ಸುತ್ತುತ್ತಿದ್ದು, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಪಠ್ಯಕ್ರಮ ಫೈಟ್‌: ಶಿಕ್ಷಣ ಇಲಾಖೆ ವಿರುದ್ಧ ಸಿಎಂಗೆ ದೂರು ಕೊಡಲು ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ

ನಾವೇನೂ ಸಿದ್ದರಾಮಾಯ್ಯನವರನ್ನ ದುಡ್ಡು ಕೊಡಿ, ಅಕ್ಕಿಕೊಡಿ, ಫ್ರಿ ಬಸ್ ಕೊಡಿ ಅಂತ ಹೇಳ್ಲಿಲ್ಲ. ಆದ್ರೆ ಅಧಿಕಾರಕ್ಕೆ ಬರುವ ಆಸೆಗಾಗಿ ಯೋಜನೆ ಜಾರಿ ಮಾಡಿ, ಸ್ವಲ್ಪ ದಿನ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ.‌ ಸರ್ಕಾರ ಕೊಡುವ ದುಡ್ಡನ್ನ ನಂಬಿ ನಾವು ಜೀವನ ಮಾಡ್ತಿಲ್ಲ. ಆದ್ರೆ ಕೊಡ್ತಿವಿ ಅಂದುಬಿಟ್ಟು ಮೋಸ ಮಾಡಿದ್ದಾರೆ. ನಮಗೆ ದುಡ್ಡು ಬೇಡ. ದುಡ್ಡಿನ ಬದಲು ಅಕ್ಕಿಯನ್ನೆ ನಮಗೆ ಕೊಡಿ ಅಂತ ಸರ್ಕಾರಕ್ಕೆ ಪತ್ರಬರೆದು ರೇಷನ್ ವಿತರಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಮೂರು ತಿಂಗಳಿನಿಂದ ಅನ್ನಭಾಗ್ಯದ ಹಣಕ್ಕೆ ಕಾದು ಕಾದು ಸುಸ್ತಾದ ಜನ ಕಳೆದ ವಾರ ಪ್ರತಿಭಟನೆ ಮಾಡಿದ್ರು. ಇದಾದ ಮೇಲಾದ್ರು ಈ ತಿಂಗಳು ಡಿಬಿಟಿ ಹಣ ಬರುತ್ತೆ ಅಂದುಕೊಂಡಿದ್ರು‌. ಆದ್ರೆ ಪ್ರತಿಭಟನೆ ಮಾಡಿದ ಮೇಲೂ ಕೂಡ ಡಿಬಿಟಿ ಬರದ ಕಾರಣ ಸರ್ಕಾರಕ್ಕೆ ಪತ್ರ ಬರೆದು ಡಿಬಿಟಿ ಹಣದ ಬದಲು ಅಕ್ಕಿಯನ್ನೇ ಕೊಡಿ ಎಂದು ಬಿಪಿಲ್ ಫಾಲಾನುಭವಿಗಳು ಮನವಿ ಮಾಡುತ್ತಿದ್ದಾರೆ.

ಬೆಂಗಳೂರು ಅಷ್ಟೇ ಅಲ್ಲದೇ ವಿವಿಧ ಜಿಲ್ಲೆಗಳಿಂದ ಪತ್ರ ಬರೆದು ಮನವಿ ಸಲ್ಲಿಸುತ್ತಿದ್ದಾರೆ. ಸಧ್ಯ ಮೂರು ತಿಂಗಳಿನಿಂದ ಡಿಬಿಟಿ ಹಣ ಬಂದಿಲ್ಲ. ಇದರ ಬದಲು ಅಕ್ಕಿಯನ್ನು ಸಹ ಕೊಡುತ್ತಿಲ್ಲ. ಹೀಗಾಗಿ ಅಕ್ಕಿಯನ್ನ ಸಿಗದಿದ್ರೆ ಬೇಳೆ, ಸಕ್ಕರೆ ಎಣ್ಣೆ ಕೊಟ್ಟರೆ ಅನುಕೂಲವಾಗಲಿದೆ. ಬಡವರು ಬೆಲೆ ಏರಿಕೆಯ ಮಧ್ಯೆ ಜೀವನ‌ ಮಾಡುವುದು ತುಂಬ ಕಷ್ಟವಾಗಿ ಹೋಗಿದೆ.‌ ಮುಂದಿನ ದಿನಗಳಲ್ಲಿ ಅಕ್ಕಿಯನ್ನ ಕೊಡಲಿಲ್ಲ ಅಂದರೆ ಪ್ರತಿಭಟನೆ ಮಾಡ್ಬೇಕಾಗುತ್ತೆ ಎಂದು ಬಿಪಿಎಲ್‌ ಫಾಲಾನುಭವಿಗಳು ಎಚ್ಚರಿಕೆ ನೀಡಿದ್ದಾರೆ.

ದುಡ್ಡ ಬರುತ್ತೆ ಎಂದು ಇಕೆ ವೈಸಿ ಮಾಡಿ, ಪಾನ್ ಲಿಂಕ್ ಮಾಡ್ಸಿ, ಆಧಾರ್ ಲಿಂಕ್ ಮಾಡ್ಸಿ ಎಂದು ಬೆಂಗಳೂರು ಒನ್ ಕೇಂದ್ರಗಳಲ್ಲಿ ವಾರಗಟ್ಟಲೆ ನಿಂತು ಸರ್ಜಿಸಲ್ಲಿಕೆ ಮಾಡಿದ್ವಿ. ಈಗ ನೋಡಿದ್ರೆ ದುಡ್ಡು‌ ಇಲ್ಲ.‌ ಅಕ್ಕಿನೂ ಇಲ್ಲ ಅನ್ನೊತರ ಮಾಡಿದ್ದಾರೆ. ನಮಗೆ ದುಡ್ಡು ಕೊಡದೇ ಇದ್ದರೂ ಪರವಾಗಿಲ್ಲ. ಆದ್ರೆ ಅಕ್ಕಿಯನ್ನಾದರೂ ಕೊಡಿ ಎಷ್ಟೋ‌ ಬಡ ಜನರು ಬದುಕಿಕೊಳ್ತಾರೆ ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಇನ್ನು, ಕುರಿತಾಗಿ ಆಹಾರ ನಾಗರೀಕ ಸರಬರಾಜು ಇಲಾಖೆಯ ಸಚಿವರ ಕೆಹೆಚ್​ ಮುನಿಯಪ್ಪ ಅವರನ್ನು ಪ್ರಶ್ನಿಸಿದ್ರೆ ಸದ್ಯದಲ್ಲೇ ಹಾಕುತ್ತೇವೆ ಎಂದು ಹೇಳಿ ನುಣುಚಿ ಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ