ಲೋಕಸಭೆ ಜೊತೆಗೆ ವಿಧಾನಸಭೆ ಬೈ ಎಲೆಕ್ಷನ್, ಪವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 21, 2024 | 11:01 PM

ಒಟ್ಟು 17 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್​ ಗುರುವಾರ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಜೊತೆ ಒಂದು ವಿಧಾನಸಭಾ ಉಪಚುನಾವಣೆ ಮತ್ತು ನೈರುತ್ಯ ಪದವೀಧರ ಕ್ಷೇತ್ರ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ.

ಲೋಕಸಭೆ ಜೊತೆಗೆ ವಿಧಾನಸಭೆ ಬೈ ಎಲೆಕ್ಷನ್, ಪವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ
ಪ್ರಾತಿನಿಧಕ ಚಿತ್ರ
Follow us on

ಬೆಂಗಳೂರು, ಮಾರ್ಚ್​ 21: ಒಟ್ಟು 17 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ (Congress)​ ಗುರುವಾರ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಜೊತೆ ಒಂದು ವಿಧಾನಸಭಾ ಉಪಚುನಾವಣೆ ಮತ್ತು ನೈರುತ್ಯ ಪದವೀಧರ ಕ್ಷೇತ್ರ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಆಯನೂರು ಮಂಜುನಾಥ್‌ಗೆ ಎಐಸಿಸಿ ಟಿಕೆಟ್ ಘೋಷಿಸಿದೆ.

ಸುರಪುರ ಕ್ಷೇತ್ರ ಕಾಂಗ್ರೆಸ್ ಶಾಸಕ ವೆಂಕಟಪ್ಪ ನಾಯಕ್ ಅಕಾಲಿಕ ನಿಧನದಿಂದಾಗಿ ಇದೀಗ ಉಪಚುನಾವಣೆ ಎದುರಾಗಿದ್ದು, ಕಾಂಗ್ರೆಸ್ ಸುರಪುರ ಬೈ ಎಲೆಕ್ಷನ್​ಗೆ ದಿವಂಗತ ವೆಂಕಟಪ್ಪ ನಾಯಕ್ ಪುತ್ರನಿಗೆ ಟಿಕೆಟ್ ನೀಡಿದೆ. ಈ ಮೂಲಕ ಅನುಕಂಪದ ಆಧಾರದ ಮೇಲೆ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವ ಪ್ಲ್ಯಾನ್ ಮಾಡಿದೆ. ಫೆ.25ರಂದು ಶಾಸಕ ರಾಜಾ ವೆಂಕಟಪ್ಪ ನಾಯಕ ವಿಧಿವಶರಾಗಿದ್ದರು. ಅವರ ನಿಧನದಿಂದ ಸುರಪುರ ಕ್ಷೇತ್ರ ತೆರವಾಗಿತ್ತು.

ಇದನ್ನೂ ಓದಿ: ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ, ಸಚಿವರ ಮಕ್ಕಳಿಗೆ ಮಣೆ

ರಾಜಾ ವೆಂಕಟಪ್ಪ ನಾಯಕ್ 1999ರಿಂದ ಸ್ಪರ್ಧಿಸುತ್ತಾ ಬಂದಿದ್ದರು. 2023 ವಿಧಾನಸಭಾ ಚುನಾವಣೆಗಿಂತ ಮೊದಲು ಎರಡು ಬಾರಿ ಸೋತು ಎರಡು ಬಾರಿ ಗೆದ್ದಿದ್ದರು. ಎರಡೂ ಬಾರಿ ಬಿಜೆಪಿಯ ನರಸಿಂಹ ನಾಯಕ್ ಅವರನ್ನು ಸೋಲಿಸಿದ್ದರು. ಈ ಭಾಗದಲ್ಲಿ ರಾಜೂಗೌಡ ಎಂದೇ ಹೆಚ್ಚು ಜನಪ್ರಿಯರಾಗಿರುವ ನರಸಿಂಹ ನಾಯಕ್ 2004 ರಲ್ಲಿ ಕೆಎನ್ ಡಿಪಿ ಪಕ್ಷದಿಂದ ಸ್ಪರ್ಧಿಸಿ ವೆಂಕಟಪ್ಪ ನಾಯಕರನ್ನು ಸೋಲಿಸಿದ್ದರು. 45-ವರ್ಷದ ರಾಜೂಗೌಡ ಯುವಕರ ನಡುವೆ ಹೆಚ್ಚು ಜನಪ್ರಿಯರೆಂದರೆ ತಪ್ಪಾಗಲಿಕ್ಕಿಲ್ಲ.

ಇದನ್ನೂ ಓದಿ: ಲೋಕಸಭಾ ಟಿಕೆಟ್ ಹಂಚಿಕೆಯಲ್ಲಿ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದ ಕಾಂಗ್ರೆಸ್, ಕರ್ನಾಟಕದ ಐವರು ಸಚಿವರ ಮಕ್ಕಳಿಗೆ ಟಿಕೆಟ್!

ಇನ್ನು ಬಿಜೆಪಿಯಿಂದ ರಾಜುಗೌಡ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜುಗೌಡ ವೆಂಕಟಪ್ಪ ನಾಯಕ್ ಅವರನ್ನು ಸೋಲಿಸಿದ್ದರು. ಆದ್ರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ವೆಂಕಟಪ್ಪ ನಾಯಕ್ ಅವರು ರಾಜುಗೌಡ ಅವರನ್ನು ಸೋಲಿಸಿ ಸೇಡುತೀರಿಸಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.