150 ಕೋಟಿ ಆಮಿಷ ವಿಚಾರ: ಮಾಣಿಪ್ಪಾಡಿ ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ? ಪ್ರಿಯಾಂಕ್ ಖರ್ಗೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2024 | 9:37 PM

ಕರ್ನಾಟಕ ರಾಜಕೀಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಪ್ರಕರಣವು ಸಂಚಲನ ಸೃಷ್ಟಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ 150 ಕೋಟಿ ರೂ. ಲಂಚ ಆರೋಪ ಕೇಳಿಬಂದಿದೆ. ಅನ್ವರ್ ಮಣಿಪ್ಪಾಡಿಯವರ ಹೇಳಿಕೆಯಲ್ಲಿನ ಬದಲಾವಣೆಯಿಂದಾಗಿ ಪ್ರಿಯಾಂಕ್ ಖರ್ಗೆ ಅವರು ದ್ವಿಪಾತ್ರಾಭಿನಯದ ಆರೋಪ ಹೊರಿಸಿದ್ದಾರೆ. ಮಣಿಪ್ಪಾಡಿಯವರು ಮೊದಲು ವಿಜಯೇಂದ್ರರ ವಿರುದ್ಧ ಆರೋಪ ಮಾಡಿದ್ದರು, ಆದರೆ ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

150 ಕೋಟಿ ಆಮಿಷ ವಿಚಾರ: ಮಾಣಿಪ್ಪಾಡಿ ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ? ಪ್ರಿಯಾಂಕ್ ಖರ್ಗೆ
150 ಕೋಟಿ ಆಮಿಷ ವಿಚಾರ: ಮಾಣಿಪ್ಪಾಡಿ ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ? ಪ್ರಿಯಾಂಕ್ ಖರ್ಗೆ
Follow us on

ಬೆಂಗಳೂರು, ಡಿಸೆಂಬರ್​​ 15: ವಕ್ಫ್‌ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು 150 ಕೋಟಿ ರೂ. ಆಮಿಷ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧದ ಆರೋಪ ಸುಳ್ಳು ಎಂದು ಮಾಣಿಪ್ಪಾಡಿ ಹೇಳಿದ್ದಾರೆ. ಸದ್ಯ ಈ ವಿಚಾರವಾಗಿ  ಮಾಣಿಪ್ಪಾಡಿ ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್​ ಖರ್ಗೆ, “ವಿಜಯೇಂದ್ರ ಮೇಲಿನ ಆರೋಪ ಸುಳ್ಳು” ಎನ್ನುತ್ತಿರುವ ಅನ್ವರ್ ಮಣಿಪ್ಪಾಡಿಯವರು ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ? ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಅವರ ಹೆಸರನ್ನ ಮೊದಲ ಬಾರಿಗೆ ಪ್ರಸ್ತಾಪಿಸಿದ್ದೇ ಅನ್ವರ್ ಮಣಿಪ್ಪಾಡಿಯವರು ಎಂದಿದ್ದಾರೆ.

ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ: ವಿಜಯೇಂದ್ರ ವಿರುದ್ಧದ ಆರೋಪಕ್ಕೆ ಟ್ವಿಸ್ಟ್, ಸುಳ್ಳು ಹೇಳಿದ್ರಾ ಸಿದ್ದರಾಮಯ್ಯ..?

ವಕ್ಫ್ ವರದಿಯನ್ನು ಮುಚ್ಚಿಹಾಕಲು ವಿಜಯೇಂದ್ರ ಕೋಟಿ ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಪ್ರತಿ ಮಾಧ್ಯಮಗಳಲ್ಲೂ ಘಂಟಾಘೋಷವಾಗಿ ಹೇಳಿದ್ದ ಮಣಪ್ಪಾಡಿಯವರು ಈಗ ವಿಜಯೇಂದ್ರರ ರಕ್ಷಣೆಗಾಗಿ ಮಾತು ಬದಲಿಸಲು ಎಷ್ಟು ‘ಆಫರ್’ ಬಂದಿದೆ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರ ಹೆಸರನ್ನು ಬಹಿರಂಗಪಡಿಸುವ ಬದಲು ಅವರು ವಿಜಯೇಂದ್ರ ಅವರ ಹೆಸರನ್ನು ಮಾತ್ರ ಏಕೆ ಹೇಳಿದರು? ಮಾಣಿಪ್ಪಾಡಿಯವರ ವಕ್ಫ್ ವರದಿಯನ್ನು ಮುಚ್ಚಿಹಾಕುವ ಪ್ರಯತ್ನದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದರು. ಆ ಪತ್ರವನ್ನು ಈಗ ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಕತ್ತಿದ್ದರೆ ನಿಮ್ಮ ವಿರುದ್ಧದ ಮುಡಾ ಹಗರಣದ ಸಿಬಿಐ ತನಿಖೆಗೆ ಸಹಕರಿಸಿ; ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

ಮಾಣಿಪ್ಪಾಡಿಯವರ ಮತ್ತು ಬಿಜೆಪಿ ಗೆಳೆಯರ ನೆನಪುಗಳನ್ನು ರಿಫ್ರೆಶ್ ಮಾಡಲು ದಯವಿಟ್ಟು ವಿಡಿಯೋಗಳು ಮತ್ತು ಪತ್ರಿಕಾ ಲೇಖನಗಳನ್ನು ಅತ್ಯಂತ ಗಮನ ಕೊಟ್ಟು ನೋಡಲಿ. ಬಿಜೆಪಿ ಪಕ್ಷ, ಅವರ ಮಾಜಿ ಮುಖ್ಯಮಂತ್ರಿಗಳ ಹಾಗೂ ಅವರ ಅಧ್ಯಕ್ಷರ ಮರ್ಯಾದೆ ಉಳಿಸಲು, ನಿನ್ನೆ ಇಡೀ ರಾತ್ರಿ ಮಾಣಿಪ್ಪಾಡಿಯವರ ಕೈ ಕಾಲು ಹಿಡಿದು ಗೋಳಾಡಿರಬಹುದೇ! ಸತ್ಯಕ್ಕಾಗಿ ಹಾಗೂ ಸಮುದಾಯಕ್ಕಾಗಿ ಹುತಾತ್ಮರಾಗಲು ಸಿದ್ಧನಿದ್ದೇನೆ ಎಂದಿದ್ದ ಮಣಿಪ್ಪಾಡಿಯವರಿಗೆ ಈಗ ಏನಾಯಿತು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:36 pm, Sun, 15 December 24