ಬೆಂಗಳೂರು, (ಆಗಸ್ಟ್ 07): ಶೀಘ್ರದಲ್ಲೇ ಮತ್ತೆ ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್‌ಗೆ((Ration Card)) ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮೊನ್ನೇ ಅಷ್ಟೇ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ(KH Muniyappa) ಅವರು ಘೋಷಣೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದಗಿನಿಂದ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸ್ವೀಕರಿಸುವುದನ್ನು ಆಹಾರ ಇಲಾಖೆ ಸ್ಥಗಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಹೊಸದಾಗಿ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಕಾಂಗ್ರೆಸ್ ಜಾರಿ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಪಡಿತರ ಚೀಟಿ (ರೇಷನ್ ಕಾರ್ಡ್) ಮುಖ್ಯವಾಗಿದ್ದು, ಜನರು ರೇಷನ್ ಕಾರ್ಡ್ಗಾಗಿ ಅಲೆಯುತ್ತಿದ್ದಾರೆ. ಹಾಗಾದ್ರೆ, ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಇರುವ ಮಾನದಂಡಗಳೇನು? ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಇದನ್ನೂ ಓದಿ: ಹೊಸ ಪಡಿತರ ಕಾರ್ಡ್ ವಿತರಣೆಗೆ ಕಾರ್ಯಾರಂಭ, ಆದಷ್ಟು ಬೇಗ ಹಣದ ಬದಲಿಗೆ ಅಕ್ಕಿ- ಕೆಎಚ್ ಮುನಿಯಪ್ಪ
ಆಹಾರ ಇಲಾಖೆಯ ಫೋರ್ಟಲ್ ಸದ್ಯ ಮೊಬೈಲ್ ಮಾತ್ರ ಒಪನ್ ಆಗಿದೆ. ಆದ್ರೆ ಇದರಲ್ಲಿ ಅರ್ಜಿ ಸಲ್ಲಿಕೆ ಮಾಡಲು ಆಗುವುದಿಲ್ಲ. ಇದರಿಂದ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲು ಹೊಸವೆಬ್ ಸೈಟ್ ಡೆವಲಪ್ ಮಾಡಬೇಕು. ತದನಂತರದಲ್ಲಿ ಅರ್ಜಿಸಲ್ಲಿಕೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಈಗಾಗಲೇ ಬಿಪಿಎಲ್ ಕಾರ್ಡ್ ಪಡೆಯಲು 3 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಕಾರ್ಡ್ ಗಳ ವಿಲೇವಾರಿಯೇ ಇನ್ನು ಬಾಕಿ ಇದೆ. ಈ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ.
ಇನ್ನು 2016ರಲ್ಲಿ ಆಹಾರ ಇಲಾಖೆ ನಿಗದಿ ಮಾಡಿದ್ದ ಮಾನದಂಡಗಳ ಪ್ರಕಾರ ಬಿಪಿಎಲ್ ಗೆ ಮಾನದಂಡಗಳೇನು ಎನ್ನುವುದು ಈ ಕೆಳಗಿನಂತಿದೆ ನೋಡಿ.
ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರು ಮೇಲೆ ತಿಳಿಸಲಾದ ಸರ್ಕಾರದ ಮಾನದಂಡಗಳನ್ನ ಮೀರಿ ಅರ್ಜಿಸಲ್ಲಿಕ ಮಾಡಿದ್ರೆ ಕಾರ್ಡ್ ಗಳು ರದ್ದಾಗಲಿವೆ.
ಇನ್ನಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:36 am, Mon, 7 August 23