ಟೇಕ್ ಆಫ್ಗೂ ಮುನ್ನ ಹತ್ತಾರು ವಿಮಾನಗಳ ಸಂಚಾರ ಕ್ಯಾನ್ಸಲ್ ಆದವು ಯಾಕೆ?
ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ನಿಂದ ಸುಮಾರು 2 ತಿಂಗಳು ಸ್ಥಗಿತವಾಗಿದ್ದ ದೇಶೀಯ ವಿಮಾನ ಸಂಚಾರ ಇಂದಿನಿಂದ ಆರಂಭವಾಗಿದೆ. ಆದ್ರೆ ವಿಮಾನಯಾನ ಆರಂಭದ ಮೊದಲ ದಿನವೇ ಸಾಕಷ್ಟು ವಿಮಾನಗಳ ಸಂಚಾರ ರದ್ದಾಗಿದೆ. ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳ ಹಾರಾಟ ರದ್ದಾಗಿದೆ. ಹೈದರಾಬಾದ್, ವಿಜಯವಾಡ, ಇಂದೋರ್, ಮುಂಬೈ, ಗೋವಾ, ವಿಶಾಖಪಟ್ಟಣಂ, ಅಹಮದಾಬಾದ್ ಮತ್ತು ಮಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ವಿಮಾನಗಳು ಕ್ಯಾನ್ಸಲ್ ಆಗಿವೆ. ಕೆಐಎಎಲ್‌ನಿಂದ ತೆರಳಬೇಕಿದ್ದ ಕೆಲ ವಿಮಾನಗಳ ಹಾರಾಟವೂ ಕ್ಯಾನ್ಸಲ್ ಆಗಿದೆ. ಸುಮಾರು 30ಕ್ಕೂ […]
ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ನಿಂದ ಸುಮಾರು 2 ತಿಂಗಳು ಸ್ಥಗಿತವಾಗಿದ್ದ ದೇಶೀಯ ವಿಮಾನ ಸಂಚಾರ ಇಂದಿನಿಂದ ಆರಂಭವಾಗಿದೆ. ಆದ್ರೆ ವಿಮಾನಯಾನ ಆರಂಭದ ಮೊದಲ ದಿನವೇ ಸಾಕಷ್ಟು ವಿಮಾನಗಳ ಸಂಚಾರ ರದ್ದಾಗಿದೆ.
ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳ ಹಾರಾಟ ರದ್ದಾಗಿದೆ. ಹೈದರಾಬಾದ್, ವಿಜಯವಾಡ, ಇಂದೋರ್, ಮುಂಬೈ, ಗೋವಾ, ವಿಶಾಖಪಟ್ಟಣಂ, ಅಹಮದಾಬಾದ್ ಮತ್ತು ಮಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ವಿಮಾನಗಳು ಕ್ಯಾನ್ಸಲ್ ಆಗಿವೆ. ಕೆಐಎಎಲ್‌ನಿಂದ ತೆರಳಬೇಕಿದ್ದ ಕೆಲ ವಿಮಾನಗಳ ಹಾರಾಟವೂ ಕ್ಯಾನ್ಸಲ್ ಆಗಿದೆ. ಸುಮಾರು 30ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ.
ಹೈದರಾಬಾದ್‌ಗೆ ತೆರಳಬೇಕಾಗಿದ್ದ ವಿಮಾನ ಕ್ಯಾನ್ಸಲ್: ತೆಲಂಗಾಣ ಸರ್ಕಾರದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಕೆಐಎಎಲ್‌ನಿಂದ ತೆರಳಬೇಕಿದ್ದ ವಿಮಾನ ಕೊನೇ ಕ್ಷಣದಲ್ಲಿ ಕ್ಯಾನ್ಸಲ್ ಆಗಿದೆ. ಏಕಾಏಕಿ ವಿಮಾನ ಹಾರಾಟವನ್ನು ರದ್ದು ಮಾಡಿದ ಕಾರಣ ಏರ್‌ಪೋರ್ಟ್ ಸಿಬ್ಬಂದಿಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲೂ ಪ್ರಯಾಣಿಕರ ಅಲಭ್ಯತೆ: ಪ್ರಯಾಣಿಕರ ಅಲಭ್ಯತೆ ಮತ್ತು ತಾಂತ್ರಿಕ ಕಾರಣಗಳಿಂದ ಮಂಗಳೂರು ಏರ್ಪೋರ್ಟ್ನಿಂದ ಮುಂಬೈ ಮತ್ತು ಚೆನ್ನೈಗೆ ವಿಮಾನ ಹಾರಾಟ ರದ್ದಾಗಿದೆ. ಹಗಲು ಹೊತ್ತಿನಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ವಿಮಾನ ಹಾರಾಟವಿಲ್ಲ. ರಾತ್ರಿ 7.35ಕ್ಕೆ ಬೆಂಗಳೂರಿಗೆ ಇಂಡಿಗೋ ವಿಮಾನ ತೆರಳಲಿದೆ. ರಾತ್ರಿ 9.50ಕ್ಕೆ ಬೆಂಗಳೂರಿಗೆ ಮತ್ತೊಂದು ಸ್ಪೈಸ್ ಜೆಟ್ ವಿಮಾನ ಪ್ರಯಾಣಿಸಲಿದೆ. ಇಂದು ನಿಗದಿಯಾಗಿದ್ದ 6 ವಿಮಾನಗಳ ಪೈಕಿ ನಾಲ್ಕು ವಿಮಾನ ಹಾರಾಟ ರದ್ದಾಗಿದೆ. ಇಂದು ಕೇವಲ ಬೆಂಗಳೂರು ಮಧ್ಯೆ 2 ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿದೆ.
ಹಾರುವ ಮೊದಲೇ ವಿಮಾನ ರದ್ದು: ಹಾರುವ ಮೊದಲೇ ಮೈಸೂರಿಗೆ ಆಗಮಿಸಬೇಕಿದ್ದ ಬೆಳಗಾವಿ ವಿಮಾನ ರದ್ದಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಿಂದ TruJet ವಿಮಾನ ಹೊರಟು, ಸಂಜೆ 4.20ಕ್ಕೆ ಮೈಸೂರಿಗೆ ತಲುಪಬೇಕಿತ್ತು. ಮತ್ತೆ ಮೈಸೂರಿನಿಂದ ಬೆಳಗಾವಿಗೆ ಹಾರಾಟ ಮಾಡಬೇಕಿತ್ತು. ನಿಗದಿತ ಪ್ರಯಾಣಿಕರ ಸಂಖ್ಯೆಗಿಂತ ಕಡಿಮೆಯಾದ ಹಿನ್ನೆಲೆಯಲ್ಲಿ ವಿಮಾನ ಹಾರಟ ರದ್ದು ಮಾಡಿರುವುದಾಗಿ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.
80 ವಿಮಾನಗಳ ಹಾರಾಟ ರದ್ದು: ಯಾವುದೇ ಮುನ್ಸೂಚನೆ ನೀಡದೆ ದೆಹಲಿಯಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ 80 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ವಿಮಾನ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published On - 10:45 am, Mon, 25 May 20