Yogini Ekadashi 2024: ಯೋಗಿನಿ ಏಕಾದಶಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.. ಪೂಜೆಗೆ ಶುಭ ಸಮಯ ಯಾವಾಗ ತಿಳಿಯಿರಿ

Yogini Ekadashi: ಹಿಂದೂ ಪಂಚಾಂಗದ ಪ್ರಕಾರ ದೇವಶಯನಿ ಏಕಾದಶಿ ಉಪವಾಸವನ್ನು ಆಷಾಢ ಮಾಸದ ( Ashada Masa) ಶುಕ್ಲ ಪಕ್ಷದ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ದೇವಶಯನಿ ಏಕಾದಶಿಯ ದಿನದಿಂದ ಭಗವಾನ್ ವಿಷ್ಣುವು ಯೋಗ ನಿದ್ರೆಗೆ ಒಳಗಾದನೆಂದು ನಂಬಲಾಗಿದೆ. ಆದ್ದರಿಂದಲೇ ಇದನ್ನು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ.

Yogini Ekadashi 2024: ಯೋಗಿನಿ ಏಕಾದಶಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.. ಪೂಜೆಗೆ ಶುಭ ಸಮಯ ಯಾವಾಗ ತಿಳಿಯಿರಿ
ಯೋಗಿನಿ ಏಕಾದಶಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ
Follow us
|

Updated on: Jun 26, 2024 | 7:07 AM

ಹಿಂದೂ ಧರ್ಮದಲ್ಲಿ ತ್ರಯೋದಶಿ ತಿಥಿಯನ್ನು ಭಗವಾನ್ ಶಿವನಿಗೆ ಸಮರ್ಪಿಸುವಂತೆ, ಪ್ರತಿ ಏಕಾದಶಿ ತಿಥಿ ಉಪವಾಸವೂ ಸಹ ಸೃಷ್ಟಿಯ ಪೋಷಕನಾದ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಏಕಾದಶಿಯ ದಿನದಂದು ಉಪವಾಸವಿದ್ದು ವಿಷ್ಣುವನ್ನು ಪೂಜಿಸುವುದರಿಂದ ಹರಿಯ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ. ಏಕಾದಶಿ ಉಪವಾಸವನ್ನು ಪ್ರತಿ ತಿಂಗಳು ಎರಡು ಬಾರಿ ಆಚರಿಸಲಾಗುತ್ತದೆ. ಮೊದಲು ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು.. ಎರಡನೆಯದು ಶುಕ್ಲ ಪಕ್ಷದ ಏಕಾದಶಿ ತಿಥಿಯಂದು. ಪ್ರತಿ ತಿಂಗಳ ಏಕಾದಶಿ ವ್ರತಕ್ಕೆ ಬೇರೆ ಬೇರೆ ಹೆಸರು.. ಬೇರೆ ಬೇರೆ ಮಹತ್ವವಿದೆ. ಹೀಗಿರುವಾಗ ಪೂಜೆಯ ಸಮಯ, ಶುಭ ಮುಹೂರ್ತ ಇತ್ಯಾದಿ ವಿವರಗಳನ್ನು ಇಂದು ತಿಳಿಯೋಣ.

Yogini Ekadashi 2024 – ಯೋಗಿನಿ ಏಕಾದಶಿ 2024 ಯಾವಾಗ?

ಯೋಗಿನಿ ಏಕಾದಶಿ ಉಪವಾಸವನ್ನು ನಿರ್ಜಲ ಏಕಾದಶಿ ನಂತರ ಆಚರಿಸಲಾಗುತ್ತದೆ .. ದೇವಶಯನಿ ಏಕಾದಶಿ ಅಂದರೆ ಮೊದಲ ಏಕಾದಶಿ ಮೊದಲು ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಜೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನದಂದು ಯೋಗಿನಿ ಏಕಾದಶಿ ಉಪವಾಸವನ್ನು ಆಚರಿಸುತ್ತಾರೆ. ಈ ವರ್ಷ ಜುಲೈ 2 ರಂದು ಯೋಗಿನಿ ಏಕಾದಶಿ ಬರುತ್ತದೆ. ಈ ದಿನ ಏಕಾದಶಿ ವ್ರತವನ್ನು ಆಚರಿಸುವುದರಿಂದ ತಿಳಿದೋ ತಿಳಿಯದೆಯೋ ಮಾಡುವ ಪಾಪಗಳಿಂದ ಮುಕ್ತಿ ಹೊಂದಿ ಜೀವನದಲ್ಲಿ ಸುಖ-ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ.

Yogini Ekadashi 2024 – ಯೋಗಿನಿ ಏಕಾದಶಿ 2024 ರ ಶುಭ ಸಮಯ ಯಾವಾಗ?

ಜೇಷ್ಠ ಮಾಸದ ಕೃಷ್ಣ ಪಕ್ಷ ಏಕಾದಶಿ ದಿನಾಂಕ – 1 ಜುಲೈ 2024 ರಂದು ಬೆಳಿಗ್ಗೆ 10:26 ರಿಂದ. ಕೃಷ್ಣ ಪಕ್ಷ ಏಕಾದಶಿ ತಿಥಿಯ ಅಂತ್ಯ – ಜುಲೈ 2 ರಂದು ಬೆಳಿಗ್ಗೆ 8:42 ಕ್ಕೆ ಯೋಗಿನಿ ಏಕಾದಶಿ ಉಪವಾಸದ ದಿನಾಂಕ – 2ನೇ ಜುಲೈ 2024 ಮಂಗಳವಾರ.

Also Read: ಶಿವನ ಕಣ್ಣೀರಿನಿಂದ ರೂಪುಗೊಂಡ ಕೊಳ, ಕೃಷ್ಣ ಪ್ರತಿಷ್ಠಾಪಿಸಿದ ಶಿವಲಿಂಗ: ನೆರೆಯ ಪಾಕಿಸ್ತಾನದಲ್ಲಿದೆ ವೈಭವದ ಸ್ಥಳ!

Yogini Ekadashi 2024 – ಆರೋಗ್ಯಕ್ಕಾಗಿ ಯೋಗಿನಿ ಏಕಾದಶಿ:

ಯೋಗಿನಿ ಏಕಾದಶಿ ವ್ರತವನ್ನು ಯುವಕರು ಅಥವಾ ಹಿರಿಯರು ಯಾರು ಬೇಕಾದರೂ ಆಚರಿಸಬಹುದು. ರೋಗ ಅಥವಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕೆಂದರೆ ಈ ಏಕಾದಶಿ ಪೂಜೆ ವಿಶೇಷ ಫಲ ನೀಡುತ್ತದೆ. ಕುಷ್ಠರೋಗ ಸೇರಿದಂತೆ ಯಾವುದೇ ಚರ್ಮ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಈ ಉಪವಾಸವನ್ನು ಆಚರಿಸುವ ಮೂಲಕ ಫಲಿತಾಂಶವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಇತರ ಅನೇಕ ಏಕಾದಶಿ ಉಪವಾಸಗಳಂತೆ, ಈ ಉಪವಾಸವು ಬಹಳ ಲಾಭದಾಯಕವಾಗಿದೆ, ಹಿಂದಿನ ಜನ್ಮದ ಎಲ್ಲಾ ಪಾಪಗಳನ್ನು ಮತ್ತು ಕೆಟ್ಟ ಕಾರ್ಯಗಳಿಂದ ಉಂಟಾಗುವ ದೋಷಗಳನ್ನು ತೆಗೆದುಹಾಕುತ್ತದೆ. ಉತ್ತಮ ಆರೋಗ್ಯವನ್ನು ನೀಡುತ್ತದೆ.

Also Read: ಈ ವರ್ಷ ಆಷಾಢ ಮಾಸ ಯಾವಾಗ ಆರಂಭ? ಶೂನ್ಯ ಮಾಸ, ಅನಾರೋಗ್ಯ ಮಾಸ ಎಂದೂ ಕರೆಯುತ್ತಾರೆ ಏಕೆ ಗೊತ್ತಾ!?

Yogini Ekadashi 2024 – ದೇವಶಯನಿ ಏಕಾದಶಿ 2024 ಯಾವಾಗ?

ಹಿಂದೂ ಪಂಚಾಂಗದ ಪ್ರಕಾರ ದೇವಶಯನಿ ಏಕಾದಶಿ ಉಪವಾಸವನ್ನು ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ದೇವಶಯನಿ ಏಕಾದಶಿಯ ದಿನದಿಂದ ಭಗವಾನ್ ವಿಷ್ಣುವು ಯೋಗ ನಿದ್ರೆಗೆ ಒಳಗಾದನೆಂದು ನಂಬಲಾಗಿದೆ. ಆದ್ದರಿಂದಲೇ ಇದನ್ನು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ. ಶ್ರೀ ಹರಿ ದೇವಶಯನಿ ಏಕಾದಶಿ ದಿನದಿಂದ ನಾಲ್ಕು ತಿಂಗಳು ನಿದ್ರಿಸುತ್ತಾರೆ. ನಂತರ ದೇವುತ್ಥನಿ ಏಕಾದಶಿಯಂದು ಭಗವಾನ್ ವಿಷ್ಣುವು ಎಚ್ಚರಗೊಳ್ಳುತ್ತಾನೆ. ಈ ವರ್ಷ ದೇವಶಯನಿ ಏಕಾದಶಿಯನ್ನು 17 ಜುಲೈ 2024 ರಂದು ಆಚರಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!