ಬೆಂಗಳೂರು, ಆಗಸ್ಟ್ 08: ಮಂಗಳೂರಿನ ಕಿಮ್ಸ್ನಲ್ಲಿ ಎಂಡಿ ಎಮರ್ಜೆನ್ಸಿ ಮೆಡಿಸಿನ್ ಓದುತ್ತಿರುವ ಡಾ: ಅಫೀಫಾ ಹಕೀಂ (Afifa Hakeem) ಅವರು ಇತ್ತೀಚೆಗೆ ಮೇಲೆಷಿಯಾದ ಕೌಲಲಾಂಪೂರನಲ್ಲಿ ಜರುಗಿದ ಏಷ್ಯಾ ಯುಥ್ ಮಾಡೆಲ್ ಯುನೈಟೆಡ್ ನೇಷನ್ (Asia Youth Model United Nations), ಡಬ್ಲುಹೆಚ್ಓ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಗೊಂಡಿದ್ದರು. ಭಾರತವನ್ನು ಪ್ರತಿನಿಧಿಸುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಆಧುನಿಕ ಯುಗದಲ್ಲಿ ವೈದ್ಯಕೀಯ ಸವಾಲುಗಳ ಕುರಿತು ಪ್ರಬಂಧ ಮಂಡಿಸಿದ್ದಾರೆ. ಸದರಿ ಅಂತರಾಷ್ಟ್ರಿಯ ವೇದಿಕೆಯಲ್ಲಿ ಜರುಗಿದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದ ಪರಂಪರೆಯ ಸಂಕೇತವಾದ ಭರತನಾಟ್ಯವನ್ನು ಪ್ರದರ್ಶಿಸುವ ಮೂಲಕ ಎರಡನೇ ಸ್ಥಾನ ಪಡೆದು ಭಾರತಕ್ಕೆ ಗೌರವ ತರುವ ಜೊತೆಗೆ ಕರ್ನಾಟಕದ ಹೆಮ್ಮೆ ಪುತ್ರಿಯಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: ಗ್ರೀನ್ ಕ್ಯಾಂಪಸ್ ಹೊಂದಿರುವ ಧಾರವಾಡ ಐಐಟಿ ಆವರಣ; ಇನ್ಮುಂದೆ ಪರಶುರಾಮ-ಬಸವೇಶ್ವರ ಅಕ್ಷಯ ಕ್ಷೇತ್ರ
ಮುಖ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಆಯುಷ್ ಇಲಾಖೆಯ ಡಾ. ಮೊಹಮ್ಮದ್ ರಫಿ ಹಕೀಂ ಅವರ ಪುತ್ರಿ. ಡಾ. ಅಫೀಫಾ ಇವರಿಗೆ ರಾಜ್ಯದ ವಿವಿಧ ಸಂಘ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಅಪಾರ ಬಂಧು ಬಳಗದಿಂದ ಅಭಿನಂದನೆ ಸಲ್ಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:02 pm, Thu, 8 August 24