AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಕರಸಾ ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್: ಸ್ಥಳ, ದರ ಬಗ್ಗೆ ಇಲ್ಲಿದೆ ಮಾಹಿತಿ

ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯದೊಂದಿಗೆ ಹುಬ್ಬಳ್ಳಿ, ಧಾರವಾಡ, ಹಾವೇರಿ, ಚಿಕ್ಕೋಡಿ, ಬೆಳಗಾವಿ, ಗದಗ ವಿಭಾಗಗಳಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಲಾಗಿದೆ. ದರ ಮಾಹಿತಿ ಇಲ್ಲಿದೆ.

ವಾಕರಸಾ ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್: ಸ್ಥಳ, ದರ ಬಗ್ಗೆ ಇಲ್ಲಿದೆ ಮಾಹಿತಿ
ವಾಕರಸಾ ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್: ಸ್ಥಳ, ದರ ಬಗ್ಗೆ ಇಲ್ಲಿದೆ ಮಾಹಿತಿ
ಗಂಗಾಧರ​ ಬ. ಸಾಬೋಜಿ
|

Updated on: Jul 21, 2024 | 7:21 PM

Share

ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಚುರುಕುಗೊಂಡಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ನಿರಂತರ ಧಾರಾಕಾರ ಮಳೆಗೆ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಯ ಪ್ರವಾಸಿಗರ ಅನುಕೂಲ ದೃಷ್ಟಿಯಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (nwkrtc) ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್​ನ್ನು ಘೋಷಣೆ ಮಾಡಿದೆ.

ಈ ಬಗ್ಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶೇಷ ಸಾರಿಗೆ ಸೌಲಭ್ಯದೊಂದಿಗೆ ಹುಬ್ಬಳ್ಳಿ, ಧಾರವಾಡ, ಹಾವೇರಿ, ಚಿಕ್ಕೋಡಿ, ಬೆಳಗಾವಿ, ಗದಗ ವಿಭಾಗಗಳಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಸಂಸ್ಥೆಯಿಂದ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಲಾಗಿದೆ. ಆನ್‌ಲೈನ್ ಟಿಕೆಟ್ ಬುಕಿಂಗ್​ಗಾಗಿ http://ksrtc.in ಗೆ ಭೇಟಿ ನೀಡಬಹುದಾಗಿದೆ.

ಸಾರಿಗೆ ಸಂಸ್ಥೆ ಟ್ವೀಟ್​ 

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಹುಬ್ಬಳ್ಳಿ-ಜೋಗ ಫಾಲ್ಸ್​​ಗೆ 8ಗಂಟೆಗೆ ಐರಾವತ್ ಬಸ್​ ಹೊರಡಲಿದ್ದು, (ಹೋಗಿ ಬರುವುದಕ್ಕೆ) 600 ರೂ ಪ್ರಯಾಣ ದರ ನಿಗದಿಸಲಾಗಿದೆ. 7:30 ಗಂಟೆಗೆ ರಾಜಹಂಸ ಬಸ್​ ಹೊರಡಲಿದ್ದು (ಹೋಗಿ ಬರುವುದಕ್ಕೆ) 430 ರೂ. ದರ ನಿಗದಿಯಾಗಿದೆ. 8:10ಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು (ಹೋಗಿ ಬರುವುದಕ್ಕೆ) 350 ರೂ. ದರವಿದೆ.

ಇದನ್ನೂ ಓದಿ: ಅಂಕೋಲಾ ಶಿರೂರು ಹೆದ್ದಾರಿ ಬಂದ್​: ಮಡಗಾಂವ್ ಜಂಕ್ಷನ್-ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ವ್ಯವಸ್ಥೆ

ಧಾರವಾಡ ವಿಭಾಗದಿಂದ ಧಾರವಾಡ-ದಾಂಡೇಲಿಗೆ 7:30 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 340 ರೂ. ಹಾಗೂ ಧಾರವಾಡ-ಗೋಕಾಕ ಫಾಲ್ಸ್​​​ಗೆ 7:30 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 375 ರೂ. ದರ ನಿಗದಿಪಡಿಸಲಾಗಿದೆ.

ಹಾವೇರಿ ವಿಭಾಗದಿಂದ ಹಾವೇರಿ- ಜೋಗ ಫಾಲ್ಸ್​​ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 340 ರೂ. ಹಾಗೂ ರಾಣೇಬೆನ್ನೂರು-ಜೋಗ ಫಾಲ್ಸ್​​ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 320 ರೂ ದರ ನಿಗದಿಸಲಾಗಿದೆ.

ಚಿಕ್ಕೋಡಿ ವಿಭಾಗದಿಂದ ಚಿಕ್ಕೋಡಿ-ಗೋಗಾಕ ಫಾಲ್ಸ್​ಗೆ 9 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 220 ರೂ ಹಾಗೂ ಸಂಕೇಶ್ವರ-ಗೋಗಾಕ ಫಾಲ್ಸ್​ಗೆ 9:30ಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು, 160 ರೂ ಮತ್ತು ನಿಪ್ಪಾಣಿ- ಗೋಗಾಕ ಫಾಲ್ಸ್​ಗೆ ವಾಯವ್ಯ ಕರ್ನಾಟಕ ಸಾರಿಗೆ ಬಸ್​ ಹೊರಡಲಿದ್ದು, 220 ರೂ ಪ್ರಯಾಣ ದರವಿರಲಿದೆ.

ಇದನ್ನೂ ಓದಿ: ಮಂಗಳೂರು ಬೆಂಗಳೂರು ಮಧ್ಯೆ 2 ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ

ಬೆಳಗಾವಿ ವಿಭಾಗದಿಂದ ಬೆಳಗಾವಿ-ಗೋಗಾಕ ಫಾಲ್ಸ್​ಗೆ 9 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 190 ರೂ ದರ ನಿಗದಿಸಲಾಗಿದೆ.

ಗದಗ ವಿಭಾಗದಿಂದ ಗದಗ-ಜೋಗ ಫಾಲ್ಸ್​ಗೆ 7 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 500 ರೂ ಹಾಗೂ ಗದಗ-ಗೋಕಾಕ ಫಾಲ್ಸ್​ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 340 ರೂ. ನಿಗದಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು