AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಕೋಲಾ ಶಿರೂರು ಹೆದ್ದಾರಿ ಬಂದ್​: ಮಡಗಾಂವ್ ಜಂಕ್ಷನ್-ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ವ್ಯವಸ್ಥೆ

ಮಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ರೈಲು ಸೇವೆ ವ್ಯವಸ್ಥೆ ಮಾಡಲಾಗಿದ್ದು, ಜುಲೈ 20, 21, 22 ರಂದು 2 ಕೇಂದ್ರಗಳ ನಡುವೆ ಮೂರು ದಿನಗಳ ಕಾಲ ರೈಲು ಸಂಚರಿಸಲಿದೆ. ಬೆಳಿಗ್ಗೆ ಮಡಗಾಂವ್ ಜಂಕ್ಷನ್​ನಿಂದ 6 ಗಂಟೆಗೆ ವಿಶೇಷ ಕೊಂಕಣ ರೈಲು ಹೊರಡಲಿದ್ದು, ಮಧ್ಯಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. 

ಅಂಕೋಲಾ ಶಿರೂರು ಹೆದ್ದಾರಿ ಬಂದ್​: ಮಡಗಾಂವ್ ಜಂಕ್ಷನ್-ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ವ್ಯವಸ್ಥೆ
ಅಂಕೋಲಾ ಶಿರೂರು ಹೆದ್ದಾರಿ ಬಂದ್​: ಮಡಗಾಂವ್ ಜಂಕ್ಷನ್-ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ವ್ಯವಸ್ಥೆ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 20, 2024 | 3:46 PM

Share

ಉಡುಪಿ, ಜುಲೈ 20: ಅಂಕೋಲಾ ಶಿರೂರು (Shiroor) ಗುಡ್ಡ ಕುಸಿದು ನಿನ್ನೆಗೆ ಐದು ದಿನ ಕಳೆದಿದೆ. ನಿರಂತರವಾಗಿ ಕುಡ್ಡ ಕುಸಿತ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಹೆದ್ದಾರಿಯ ಮೇಲೆ ಗುಡ್ಡ ಕುಸಿತದಿಂದಾಗಿ ಹೆದ್ದಾರಿ ಬಂದ್ ಆಗಿದೆ. ಹೀಗಾಗಿ ಹೆಚ್ಚುವರಿ ಕೊಂಕಣ ರೈಲು (train) ವ್ಯವಸ್ಥೆ ಮಾಡಲಾಗಿದೆ. ಗೋವಾಕ್ಕೆ ತೆರಳುವ ಮುಖ್ಯ ಮಾರ್ಗ ಬಂದಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಮೂರು ದಿನಗಳ ಕಾಲ ಹೆಚ್ಚುವರಿ ರೈಲು ಸೇವೆ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಕೊಂಕಣ ರೈಲು ವ್ಯವಸ್ಥೆ 

ಮಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ರೈಲು ಸೇವೆ ವ್ಯವಸ್ಥೆ ಮಾಡಲಾಗಿದ್ದು, ಜುಲೈ 20, 21, 22 ರಂದು 2 ಕೇಂದ್ರಗಳ ನಡುವೆ ಮೂರು ದಿನಗಳ ಕಾಲ ರೈಲು ಸಂಚರಿಸಲಿದೆ. ಬೆಳಿಗ್ಗೆ ಮಡಗಾಂವ್ ಜಂಕ್ಷನ್​ನಿಂದ 6 ಗಂಟೆಗೆ ವಿಶೇಷ ಕೊಂಕಣ ರೈಲು ಹೊರಡಲಿದ್ದು, ಮಧ್ಯಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಇದನ್ನೂ ಓದಿ: KSRTC Package Tour: ಜೋಗ ಜಲಪಾತ ವೀಕ್ಷಣೆಗೆ ಕೆಎಸ್​ಆರ್​ಟಿಸಿಯಿಂದ ಊಟ ಸಹಿತ ಟೂರ್​ ಪ್ಯಾಕೇಜ್​, ಇಲ್ಲಿದೆ ಸಮಯ, ದರ ವಿವರ

ಮರು ಪ್ರಯಾಣದಲ್ಲಿ ಮಧ್ಯಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್​ನಿಂದ ಹೊರಟು 7 ಗಂಟೆಗೆ ಮಡಗಾಂವ್ ಕಾರವಾರ, ಹರ್ವಾಡ, ಅಂಕೋಲ ಜೊತೆ ಬಹುತೇಕ ಎಲ್ಲಾ ಸ್ಟೇಷನ್​​ಗಳಲ್ಲೂ ನಿಲುಗಡೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಗೋವಾದ ಕೊಂಕಣ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದು ಜುಲೈ 10ರಂದು ಹಲವು ರೈಲುಗಳ ಸಂಚಾರದಲ್ಲಿ ಇತ್ತೀಚೆಗಷ್ಟೇ ವ್ಯತ್ಯಯ ಉಂಟಾಗಿತ್ತು. ಬಳಿಕ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಸೇರಿದಂತೆ ಕೊಂಕಣದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಸಮಸ್ಯೆ ಎದುರಾದ ಪರಿಣಾಮ 14 ಗಂಟೆಗಳ ಕಾಲ ಹಲವು ರೈಲು ಸೇವೆ ರದ್ದಾಗಿದ್ದವು. ಹಾಗಾಗಿ ಸಾಕಷ್ಟು ಪ್ರಯಾಣಿಕರು ಬೇರೆ ಬೇರೆ ಕಡೆಗಳಿಗೆ ತೆರಳಲಾಗದೆ ಪರದಾಡಿದ್ದರು.

ಇದನ್ನೂ ಓದಿ: ಭಾರೀ ಮಳೆ ಕೊಂಕಣ ರೈಲ್ವೆ ಸೇವೆ ಸ್ಥಗಿತ; ಮಂಗಳೂರು ಎಕ್ಸ್‌ಪ್ರೆಸ್, ಮತ್ಸ್ಯ ಗಂಧ ರೈಲು ಸಂಚಾರ ಬಂದ್

ಶಿರಾಡಿ ಫಾಟಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ್ದಾಗಿ ಮಂಗಳೂರು ಮತ್ತು ಬೆಂಗಳೂರು ಸಂಪರ್ಕ ರಸ್ತೆ ಕಡಿತಗೊಂಡಿದೆ. ಹೀಗಾಗಿ ಮಂಗಳೂರು ಬೆಂಗಳೂರು ಮಧ್ಯೆ ಎರಡು ವಿಶೇಷ ರೈಲು ಸೇವೆಯನ್ನು ಇತ್ತೀಚೆಗೆ ಘೋಷಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:45 pm, Sat, 20 July 24