ಶಿರೂರು ಗುಡ್ಡ ಕುಸಿತ; 24 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ನದಿಗೆ ಬಿದ್ದಿದ್ದ ಟ್ಯಾಂಕರ್​ನಿಂದ ಗ್ಯಾಸ್ ಹೊರಕ್ಕೆ

ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ನಡೆದು ಇಂದಿಗೆ ನಾಲ್ಕು ದಿನ ಆಗಿದೆ. ನಿರಂತರವಾಗಿ ನಾಲ್ಕು ದಿನದಿಂದ ಶಿರೂರು ಬಳಿ ಹೆದ್ದಾರಿಯಲ್ಲಿ ತೆರುವು ಕಾರ್ಯಾಚರಣೆ ನಡೆಯುತ್ತಿದೆ. ಅದರಂತೆ ನದಿಯಲ್ಲಿ ತೇಲಿ  ಹೋಗಿದ್ದ ಟ್ಯಾಂಕರ್​ನಿಂದ ಎಲ್​ಪಿಜಿ ಗ್ಯಾಸ್​ನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. 

ಶಿರೂರು ಗುಡ್ಡ ಕುಸಿತ; 24 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ನದಿಗೆ ಬಿದ್ದಿದ್ದ ಟ್ಯಾಂಕರ್​ನಿಂದ ಗ್ಯಾಸ್ ಹೊರಕ್ಕೆ
ನದಿಗೆ ಬಿದ್ದಿದ್ದ ಟ್ಯಾಂಕರ್​ನಿಂದ ಗ್ಯಾಸ್ ಹೊರಕ್ಕೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 19, 2024 | 7:29 PM

ಉತ್ತರ ಕನ್ನಡ, ಜು.19: ಅಂಕೋಲಾ(Ankola) ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತದಲ್ಲಿ ನದಿಗೆ ತೇಲಿ ಹೋಗಿದ್ದ ಗ್ಯಾಸ್​ ಟ್ಯಾಂಕರ್(Gas tanker) ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಟ್ಯಾಂಕರ್​ನಿಂದ ಎಲ್​ಪಿಜಿ ಗ್ಯಾಸ್​ನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಸುಮಾರು 24 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಟ್ಯಾಂಕರ್​ನಲ್ಲಿದ್ದ ಪೂರ್ತಿ ಗ್ಯಾಸ್​ನ್ನು ಗಂಗಾವಳಿ ನದಿಗೆ ಬಿಡಲಾಗಿದೆ.

10 ಗ್ರಾಮಗಳಿಗಿದ್ದ ಆತಂಕ ದೂರ

ಇನ್ನು ಸುಮಾರು 100 ಕ್ಕೂ ಹೆಚ್ಚು ಜನರ ನಿರಂತರ ಶ್ರಮದಿಂದ ಯಾವುದೇ ಅಪಾಯ ಸಂಭವಿಸಿದಂತೆ ಗ್ಯಾಸ್​ನ್ನು ಯಶಸ್ವಿಯಾಗಿ ನದಿಗೆ ಬಿಡಲಾಗಿದೆ. ಇದರಿಂದ​ ಸುಮಾರು 10 ಗ್ರಾಮಗಳಿಗಿದ್ದ ಆತಂಕ ದೂರವಾಗಿದೆ. ಕುಮಟಾ ಎಸಿ ಕಲ್ಯಾಣಿ ಕಾಂಬ್ಳೆ, ಗೋಕರ್ಣ ಪಿಎಸ್​ಐ ಖಾದರ್, ಅಂಕೋಲಾ ತಾಲೂಕು ಪಂಚಾಯತಿ ಎಇಒ ಸೇರಿದಂತೆ ಅಧಿಕಾರಿಗಳು, ತಜ್ಞರು ಹಾಗೂ ಕ್ರೇನ್ ಸಿಬ್ಬಂಧಿಗಳಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಕಳೆದ ನಾಲ್ಕು ದಿನದಿಂದ ಆತಂಕದಲ್ಲೆ ಜನರು, ಗ್ರಾಮದಿಂದ ಬೇರೆ ಕಡೆ ಶಿಫ್ಟ್ ಆಗಿದ್ದರು. ಜೊತೆಗೆ ವಿದ್ಯುತ್ ಸಂಪರ್ಕ ಕೂಡ ಕಡಿತ ಮಾಡಲಾಗಿತ್ತು. ಸದ್ಯ ದೊಡ್ಡ ಆತಂಕದಿಂದ ಗ್ರಾಮಸ್ಥರನ್ನು ಪಾರುಮಾಡಲಾಗಿದೆ.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ ಸ್ಥಳದಲ್ಲೇ ಲಾರಿ ಚಾಲಕನ ಮೊಬೈಲ್ ಲೊಕೇಶನ್ ಪತ್ತೆ: ಕಾರ್ಯಾಚರಣೆ ಚುರುಕು

ಇನ್ನು ನಿನ್ನೆ ಮುನ್ನೆಚ್ಚರಿಕಾ ಕ್ರಮವಾಗಿ ಸಗಡಗೇರಿ ಗ್ರಾಮದ 34 ಕುಟುಂಬಗಳನ್ನು ಜಿಲ್ಲಾಡಳಿತ ಬೇರೆಡೆ ಸ್ಥಳಾಂತರಿಸಿತ್ತು. ಜೊತೆಗೆ ಹೆಚ್.ಪಿ ಕಂಪನಿ ಅವರು ‘ಮೀಟರ್ ಮಾಪನದ ಮೂಲಕ ಅಳೆದು ಟ್ಯಾಂಕರ್​ನಲ್ಲಿದ್ದ ಶೇ.30ರಷ್ಟು ಗ್ಯಾಸ್​ನ್ನು ನದಿ ನೀರಿಗೆ ಬಿಟ್ಟಿದ್ದರು. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್, ಎಸ್.ಡಿ.ಆರ್.ಎಫ್, NDRF , ಹೆಚ್.ಪಿ ಕಂಪನಿಯ ಸಿಬ್ಬಂದಿ, ವೈದ್ಯಕೀಯ ತಂಡ ಮೊಕ್ಕಾಮ್ ಹೊಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Fri, 19 July 24