ಕೋಲಾರದಲ್ಲಿದೆ ಏಷ್ಯಾದ ಅತಿ ದೊಡ್ಡ ಹಲಸಿನ ತೋಟ: ಒಂದೇ ಕಡೆ ಸಿಗುತ್ತೆ 42ಕ್ಕೂ ಹೆಚ್ಚು ತಳಿಯ ಹಣ್ಣು - Kannada News | Asia's largest jackfruit plantation in Kolar: more than 42 known fruits can be found in one place | TV9 Kannada

ಕೋಲಾರದಲ್ಲಿದೆ ಏಷ್ಯಾದ ಅತಿ ದೊಡ್ಡ ಹಲಸಿನ ತೋಟ: ಒಂದೇ ಕಡೆ ಸಿಗುತ್ತೆ 42ಕ್ಕೂ ಹೆಚ್ಚು ತಳಿಯ ಹಣ್ಣು

ಕೋಲಾರ ನಗರಕ್ಕೆ ಹೊಂದಿಕೊಂಡಂತೆ ಟಮಕದಲ್ಲಿರುವ ತೋಟಗಾರಿಕಾ ಮಹಾವಿಶ್ವವಿದ್ಯಾಲಯದ 32 ಎಕರೆ ಪ್ರದೇಶದಲ್ಲಿ ಬೃಹತ್ತಾದ ಹಲಸಿನ ತೋಟವಿದೆ. ಏಷ್ಯಾದಲ್ಲಿಯೇ ಅತಿ ದೊಡ್ಡ ಹಲಸಿನ ತೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಲಸಿನ ತೋಟದಲ್ಲಿ 1500 ಕ್ಕೂ ಹೆಚ್ಚಿನ ಹಲಸಿನ ಮರಗಳಿವೆ. ಇದರಲ್ಲಿ ವಿಶೇಷ ಅಂದ್ರೆ ಏಷ್ಯಾದಲ್ಲೇ ಒಂದೇ ಸ್ಥಳದಲ್ಲಿ ಅತಿಹೆಚ್ಚು ಹಲಸಿನ ಮರಗಳನ್ನು ಹೊಂದಿರುವ ತೋಟ ಎಂಬ ಹೆಗ್ಗಳಿಕೆ ಇದೆ.

ಕೋಲಾರದಲ್ಲಿದೆ ಏಷ್ಯಾದ ಅತಿ ದೊಡ್ಡ ಹಲಸಿನ ತೋಟ: ಒಂದೇ ಕಡೆ ಸಿಗುತ್ತೆ 42ಕ್ಕೂ ಹೆಚ್ಚು ತಳಿಯ ಹಣ್ಣು
ಕೋಲಾರದಲ್ಲಿದೆ ಏಷ್ಯಾದ ಅತಿ ದೊಡ್ಡ ಹಲಸಿನ ತೋಟ: ಒಂದೇ ಕಡೆ ಸಿಗುತ್ತೆ 42ಕ್ಕೂ ಹೆಚ್ಚು ತಿಳಿಯ ಹಣ್ಣು
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on:May 29, 2024 | 8:42 PM

ಕೋಲಾರ, ಮೇ 29: ಹಲಸು (jackfruit) ಹಳ್ಳಿಯ ಜನರ ನೆಚ್ಚಿನ ಹಣ್ಣು. ಈಗ ನಗರ ಪ್ರದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯ ಹಣ್ಣು. ಮೈತುಂಬಾ ಮುಳ್ಳುಗಲೇ ಇದ್ರು ಅದರ ಹೃದಯದಲ್ಲಿ ಮಾತ್ರ ಸಿಹಿಯಾದ ಸ್ವಾದದಿಂದ ಎಲ್ಲರನ್ನು ಸೆಳೆಯುವ ಹಣ್ಣು, ಹೊಸ ಯುಗದ ನವಕಲ್ಪವೃಕ್ಷ ಎಂದೇ ಕೆರಯಲಾಗುತ್ತದೆ. ಕೋಲಾರ (Kolar) ನಗರಕ್ಕೆ ಹೊಂದಿಕೊಂಡಂತೆ ಟಮಕದಲ್ಲಿರುವ ತೋಟಗಾರಿಕಾ ಮಹಾವಿಶ್ವವಿದ್ಯಾಲಯದ 32 ಎಕರೆ ಪ್ರದೇಶದಲ್ಲಿ ಬೃಹತ್ತಾದ ಹಲಸಿನ ತೋಟವಿದೆ. ಏಷ್ಯಾದಲ್ಲಿಯೇ ಅತಿ ದೊಡ್ಡ ಹಲಸಿನ ತೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಲಸಿನ ತೋಟದಲ್ಲಿ 1500 ಕ್ಕೂ ಹೆಚ್ಚಿನ ಹಲಸಿನ ಮರಗಳಿವೆ.

ಇದರಲ್ಲಿ ವಿಶೇಷ ಅಂದ್ರೆ ಏಷ್ಯಾದಲ್ಲೇ ಒಂದೇ ಸ್ಥಳದಲ್ಲಿ ಅತಿಹೆಚ್ಚು ಹಲಸಿನ ಮರಗಳನ್ನು ಹೊಂದಿರುವ ತೋಟ ಎಂಬ ಹೆಗ್ಗಳಿಕೆ ಒಂದೆಡೆಯಾದ್ರೆ ಈ ಒಂದೇ ಪ್ರದೇಶದಲ್ಲಿ ಸುಮಾರು 42 ವಿವಿಧ ರೀತಿಯ ಅಂದ್ರೆ ಜಾಣಗೆರೆ, ತೂಗುಗೆರೆ, ಸಿಂಗಾಪುರ ಹಸಲು, ಚಂದ್ರಹಲಸು, ಅಂಟಿಲ್ಲದ ಹಲಸು ಸೇರಿದಂತೆ ವಿವಿಧ ತಳಿಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ ಅನ್ನೋದು ಮತ್ತೊಂದು ವಿಶೇಷ.

ಇದನ್ನೂ ಓದಿ: ಏಷ್ಯಾದ ಅತಿ ದೊಡ್ಡ ಮಾವು ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ ಆರಂಭ; ಪ್ರತಿ ದಿನ ಸಾವಿರಾರು ಟನ್‌ ವಹಿವಾಟು

ಇತ್ತೀಚಿನ ದಿನಗಳಲ್ಲಿ ಹಲಸಿನ ಮೂರು ತಳಿಗಳನ್ನು‌ ಬಿಡುಗಡೆ ಮಾಡಲಾಗಿದೆ. ಮರೀಗೌಡ ಆರಂಜೆ, ಗಮ್ಮ ಲೇಸ್ ಮತ್ತು ಸೂಪರ್ ಇವು‌ಗಳಲ್ಲಿ ಹೆಚ್ಚಿನ ಸಿಹಿ ಅಂಶ ಇರುವುದರಿಂದ ಹೆಚ್ಚಿನ ಬೇಡಿಕೆ ಇದೆ. ‌ಇನ್ನು ಹಲಸಿನ ಹಣ್ಣುನ್ನು ಸಂಸ್ಕರಣೆ ಮಾಡಿ ಅಂತರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸುವಂತೆ ಮಾಡುವ ನಿಟ್ಟಿನಲ್ಲಿ ತೋಟಗಾರಿಕಾ ಸಂಶೋದನಾ ಕೇಂದ್ರ ಮುಂದಾಗಿದೆ. ಆರೋಗ್ಯ ದೃಷ್ಟಿಯಿಂದಲೂ ಇದು ಹಲಸು ಬಹಳ ಉಪಯುಕ್ತ ವಾಗಿರುವ ಕಾರಣ ಹಲಸಿನ ಹಣ್ಣು, ಬೀಜ, ಮರದ ತೊಗಟೆ ಕೂಡಾ ಉಪಯುಕ್ತ ಎನ್ನುವ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಹಲಸನ್ನು ನವಕಲ್ಪವೃಕ್ಷ ಎಂದೇ ಬಿಂಬಿಸಲಾಗುತ್ತಿದೆ.

ಇನ್ನು 32ಎಕರೆ ಪ್ರದೇಶದಲ್ಲಿ ಸುಮಾರು 1500 ಕ್ಕೂ ಹೆಚ್ಚು ಹಲಸಿನ ಮರಗಳನ್ನು ಬೆಳೆಸಲಾಗಿದೆ, ಈ ಪೈಕಿ 42 ವಿವಿಧ ದೇಶೀಯ ತಳಿಗಳನ್ನು ಇನ್ನು ಅಭಿವೃದ್ದಿ ಪಡಿಸಲಾಗಿದೆ. ಹಾಗಾಗಿ ಇಷ್ಟು ವರ್ಷಗಳಲ್ಲಿ ಇಲ್ಲಿ ಬೆಳೆಯಲಾಗುತ್ತಿದ್ದ ಹಲಸನ್ನು ಮಾರಾಟ ಮಾಡಲಾಗುತ್ತಿತ್ತು, ಆದರೆ ಈ ವರ್ಷದಿಂದ ವಿಶೇಷವಾಗಿ ಹಲಸು ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ, ಹಲಸಿನ ವಿವಿದ ಖಾದ್ಯಗಳನ್ನು ಮಾಡಲಾಗುತ್ತಿದೆ.

ಇನ್ನು ಈ ವರ್ಷ ಮಳೆ ಮತ್ತು ಬಿಸಲಿನ ತಾಪದಿಂದ ಫಸಲು ಸಹ ಕಡಿಮೆಯಾಗಿದೆ. ಕಳೆದ ವರ್ಷ ಸುಮಾರು 15 ಟನ್ ಹಲಸನ್ನು ಮಾರಾಟ ಮಾಡಲಾಗಿತ್ತು. ಆದರೆ ಈ ಬಾರಿ ಬಿಸಲಿನ ತಾಪಕ್ಕೆ ಫಸಲು ಕಡಿಮೆ ಯಾಗಿರುವ ಜೊತೆಗೆ ಕೆಲ ಮರಗಳ ಸಹ ಒಳಗಿ ಹೋಗಿದೆ. ಈ ನಿಟ್ಟಿನಲ್ಲಿ ಈ ವರ್ಷ 12 ಟನ್ ನಷ್ಟು ಮಾತ್ರ ಫಸಲು ಸಿಗಲಿದೆ. ಇನ್ನು ಆರೋಗ್ಯಗೂ ಹಲಸಿನ ಹಣ್ಣು ಸಹಕಾರಿ ಆಗುವುದರಿಂದ ಹಲಸಿಗೆ ಉತ್ತಮ ಬೇಡಿಕೆ ಸಿಗುತ್ತಿದೆ.

ಇದನ್ನೂ ಓದಿ: ಕಳಪೆ ಟೊಮೇಟೊ ಸಸಿ ಮಾರಾಟ! ಬರಗಾಲದ ನಡುವೆ ಬೆಳೆದಿದ್ದ ಬೆಳೆ ಸಂಪೂರ್ಣ ಹಾಳು

ಕ್ಯಾನ್ಸರ್ ‌ನಂತಹ ಮಾರಕ ರೋಗಗಳ ನಿವಾರಣೆಗೂ ಸಹ ಹಲಸು ಉತ್ತಮ ಹಣ್ಣಾಗಿದೆ. ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಹಲಸಿಗೆ, ಇನ್ನು ಮುಂದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:30 pm, Wed, 29 May 24

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ