ಚಿಕಿತ್ಸಾ ದರಗಳ ಪರಿಷ್ಕರಣೆಗೆ ಮುಂದಾದ ಆರೋಗ್ಯ ಇಲಾಖೆ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಆರು ವರ್ಷಗಳಾರೂ ಬಡವರಿಗೆ ಸೂಕ್ತ ಆರೋಗ್ಯ ಸೇವೆ ಸಿಗುತ್ತಿಲ್ಲ. ಚಿಕಿತ್ಸಾ ದರಗಳು ಕಡಿಮೆ ಇರುವುದು ಮತ್ತು ಚಿಕಿತ್ಸಾ ವಿಧಾನಗಳ ಸೀಮಿತತೆಯಿಂದಾಗಿ ಬಡ ರೋಗಿಗಳು ಪರದಾಡುವಂತಾಗಿದೆ. ಸರ್ಕಾರ ಈಗ ಚಿಕಿತ್ಸಾ ದರಗಳ ಪರಿಷ್ಕರಣೆಗೆ ಮುಂದಾಗಿದೆ, ಆದರೆ ಇದರ ಪರಿಣಾಮಕಾರಿತ್ವವನ್ನು ಕಾದು ನೋಡಬೇಕಿದೆ. ಯೋಜನೆಯ ವ್ಯಾಪ್ತಿ ವಿಸ್ತರಿಸುವ ಅಗತ್ಯವಿದೆ.
ಬೆಂಗಳೂರು, ಜನವರಿ 21: ಬಡ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದುಗಿಸುವಲ್ಲಿ ರೂಪಗೊಂಡ ಆಯುಷ್ಮಾನ್ ಭಾರತ್ (Ayushman Bharath) ಆರೋಗ್ಯ ಕರ್ನಾಟಕ ಯೊಜನೆ ಜಾರಿಯಾಗಿ ಆರು ವರ್ಷಗಳು ಕಳೆದರೂ ಕೂಡ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ. ತುರ್ತ ಸಂದರ್ಭದಲ್ಲಿ ಬಡ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ವಿಸ್ತರಣೆಯ ಕೊರತೆಯಿದ ರಾಜ್ಯದಲ್ಲಿ ಬಡ ಜನರ ಪರದಾಟ ಶುರುವಾಗಿದೆ. ಬಡರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ನೀಡುವ ಉದ್ದೇಶದಿಂದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆ ಜಾರಿ ಮಾಡಿ ಆರು ವರ್ಷ ಕಳೆದರೂ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆಗಾಗಿ ಬಡರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಿದೆ. ಹೀಗಾಗಿ ಆರೋಗ್ಯ ಇಲಾಖೆ ಈಗ ಚಿಕಿತ್ಸಾ ದರಗಳ ಪರಿಷ್ಕರಣೆ ಮಾಡಲು ಮುಂದಾಗಿದೆ.
ಈ ಆಯುಷ್ಮಾನ್ ಯೋಜನೆಯಲ್ಲಿ ಸದ್ಯ 539 ಖಾಸಗಿ ಆಸ್ಪತ್ರೆಗಳಿದ್ದು, ಇಲ್ಲಿ ಮಾತ್ರ ಸೇವೆ ಲಭ್ಯ ಇದರ. ಇನ್ನು ಹಲವು ಚಿಕಿತ್ಸಾ ವಿಧಾನಗಳನ್ನ ಈ ಯೋಜನೆ ಅಡಿಯಲ್ಲಿ ತಂದಿಲ್ಲ. ಈ ಯೋಜನೆಯಡಿ ಕುಟುಂಬದರಿಗೆ ಐದು ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ಸಿಗುತ್ತಿದೆ. ಆದರೆ, ಕಟುಂಬದಲ್ಲಿ ಒಂದೇ ಸಮಯದಲ್ಲಿ ಇಬ್ಬರಿಗೆ ಅಥವಾ ಹೆಚ್ಚಿನವರಿಗೆ ಸಮಸ್ಯೆಯಾದರೆ ಐದು ಲಕ್ಷದವರೆಗೆ ಮಾತ್ರ ಇದು ಅನ್ವಯವಾಗ್ತೀದೆ.
ಇದನ್ನೂ ಓದಿ: ಆಯುಷ್ಮಾನ್ ಭಾರತ್: ಕೇವಲ 40 ದಿನದಲ್ಲಿ 25 ಲಕ್ಷ ಹಿರಿಯ ನಾಗರಿಕರಿಗೆ ಹೆಲ್ತ್ ಇನ್ಷೂರೆನ್ಸ್ ಕಾರ್ಡ್
ಈ ಯೋಜನೆಯಡಿ 5 ಲಕ್ಷ ಕುಟುಂಬದ ಪ್ಯಾಕೇಜ್ ಆಗಿದ್ದು ಈಡಿ ಕುಟುಂಬಕ್ಕೆ ಇದು ಅನ್ವಯಾಗ್ತೀದೆ. ಈ ಯೋಜನೆಯಲ್ಲಿ ಚಿಕಿತ್ಸೆಯ ಪ್ಯಾಕೇಜ್ ದರ ಕುಡಾ ಕಡಿಮೆ ಇರುವುದರಿಂದ ಕೆಲವು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲವಂತೆ. ಸರ್ಜರಿ ದರಗಳು ಕಡಿಮೆ ನಿಗಧಿಯಾಗಿರುವ ಹಿನ್ನಲೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಣೆ ಮಾಡ್ತೀವೆ. ಜೊತೆಗೆ ಕೆಲವು ಶಸ್ತ್ರಚಿಕಿತ್ಸೆಗಳು ಈ ಯೋಜನೆಯಡಿ ಇಲ್ಲದೆ ಇರುವುದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಸದ್ಯ 2950 ಸರ್ಕಾರಿ ಆಸ್ಪತ್ರೆಗಳು ಹಾಗೂ 539 ಖಾಸಗಿ ಆಸ್ಪತ್ರೆಗಳು ಮಾತ್ರ ಈ ಯೋಜನೆಯಡಿ ಚಿಕಿತ್ಸೆ ನೀಡುತ್ತದ್ದು 1650 ಒಟ್ಟು ಚಿಕಿತ್ಸಾ ವಿಧಾನಗಳಿವೆ ಉಳಿದ ಚಿಕಿತ್ಸೆಗೆ ರೋಗಿಗಳು ಹಣ ನೀಡಬೇಕಿದೆ. ಹೀಗಾಗಿ ಚಿಕಿತ್ಸಾ ದರಗಳನ್ನ ಪರಿಷ್ಕರಣೆ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಹಾಗು ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿನ ಚಿಕಿತ್ಸಾ ದರಗಳ
ಪರಿಷ್ಕರಣೆ ಆರೋಗ್ಯ ಇಲಾಖೆ ಮುಂದು
ಬಡವರ್ಗದ ಎಲ್ಲರಿಗೂ ಉತ್ತಮ ಹಾಗೂ ಉಚಿತ ಚಿಕಿತ್ಸೆಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಈ ಯೋಜನೆಯಲ್ಲಿ ಕಾಲ ಕಾಲಕ್ಕೆ ಮಾಡಬೇಕಾದ ಪರಿಷ್ಕರಣೆ ಹಾಗೂ ಮೇಲ್ದರ್ಜೆಗೆ ಏರಿಸದೇ ಇರುವುದು ಬರ ರೋಗಿಗಳ ಪರದಾಟಕ್ಕೆ ಕಾರಣವಾಗಿತ್ತು. ಈಗ ಸರ್ಕಾರ ಮನಸ್ಸು ಮಾಡಿ ದರ ಪರಿಷ್ಕರಣೆಗೆ ಮುಂದಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ಅಂತಾ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:41 am, Tue, 21 January 25