ಮೋದಿ ನನಗೆ ಆತ್ಮೀಯರು, ಆದರೆ ಅವರ ಬಳಿ ಮಾತಾಡೋಕೆ ಹೋದರೆ ರಾಹುಲ್ ಗಾಂಧಿ ಮಾತಿಗೆ ವಿಷಯ ಸಿಕ್ಕಂತಾಗುತ್ತೆ: ಬಿ.ಆರ್.ಶೆ್ಟ್ಟಿ
B.R.shetty: ಅಬುದಾಬಿಯಲ್ಲಿ ಅಲ್ಲಿಯ ದೊರೆ ಅರಮನೆ ಕಟ್ಟಿದಾಗ ಮೋದಿ ವಿಶೇಷ ಅತಿಥಿಯಾಗಿ ಬಂದಿದ್ದರು. ಆಗ ಮೋದಿ ಸಮ್ಮುಖದಲ್ಲಿ ಅಲ್ಲಿನ ಉದ್ಯಮಿಗಳ ಸಭೆ ನಡೆದಿತ್ತು. ಅಂದು ನಾನು ನನ್ನನ್ನು ಶೆಟ್ಟಿ ಎಂದು ಅವರಿಗೆ ಪರಿಚಯಿಸಿಕೊಂಡೆ. ನಿಮ್ಮ 5 ಟ್ರಿಲಿಯನ್ ಎಕಾನಮಿಗೆ ನನ್ನ 5 ಮಿಲಿಯನ್ ಡಾಲರ್ ಕೊಡುಗೆ ಇದೆ ಎಂದು ಹೇಳಿದ್ದೆ.
ಮೋದಿ ನನಗೆ ಆತ್ಮೀಯರು ಎನ್ನುವುದು ನಿಜ. ಆದರೆ, ನಾನು ಅವರಿಂದ ನೆರವು ಯಾಚಿಸಿಲ್ಲ. ನಾನು ಪ್ರಧಾನ ಮಂತ್ರಿ ಜೊತೆ ಮಾತನಾಡಲು ಹೋದರೆ ರಾಹುಲ್ ಗಾಂಧಿಗೆ ಮಾತನಾಡಲು ವಿಷಯ ಸಿಗುತ್ತದೆ. ನೀರವ್ ಮೋದಿ, ವಿಜಯ್ ಮಲ್ಯ ಆಯ್ತು ಈಗ ಬಿ.ಆರ್.ಶೆಟ್ಟಿಯೂ ದಿವಾಳಿ ಎನ್ನುವ ಆರೋಪ ಹೊರಿಸಬಹುದು. ಹೀಗಾಗಿ ಯಾವ ಬಿಜೆಪಿ ಮುಖಂಡರನ್ನೂ ಮಾತನಾಡಿಸಲು ಹೋಗಿಲ್ಲ ಎಂದು ಉದ್ಯಮಿ ಬಿ.ಆರ್.ಶೆಟ್ಟಿ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಅಬು ಧಾಬಿಯಲ್ಲಿ ಅಲ್ಲಿಯ ದೊರೆ ಅರಮನೆ ಕಟ್ಟಿದಾಗ ಮೋದಿ ವಿಶೇಷ ಅತಿಥಿಯಾಗಿ ಬಂದಿದ್ದರು. ಆಗ ಮೋದಿ ಸಮ್ಮುಖದಲ್ಲಿ ಅಲ್ಲಿನ ಉದ್ಯಮಿಗಳ ಸಭೆ ನಡೆದಿತ್ತು. ಅಂದು ನಾನು ನನ್ನನ್ನು ಶೆಟ್ಟಿ ಎಂದು ಅವರಿಗೆ ಪರಿಚಯಿಸಿಕೊಂಡೆ. ನಿಮ್ಮ 5 ಟ್ರಿಲಿಯನ್ ಎಕಾನಮಿಗೆ ನನ್ನ 5 ಮಿಲಿಯನ್ ಡಾಲರ್ ಕೊಡುಗೆ ಇದೆ ಎಂದು ಹೇಳಿದ್ದೆ. ಅದನ್ನೆಲ್ಲಾ ಕೇಳಿದ ಅವರು ನನ್ನ ಪ್ರತಿಯೊಂದು ಮಾತಿನ ಮೇಲೂ ಭರವಸೆ ಇದೆ ಎಂದಿದ್ದರು. ಆದರೆ, ಈಗ ಮಾಧ್ಯಮಗಳು ಮಾಡುತ್ತಿರುವ ವರದಿಯನ್ನು ಕಂಡರೆ ಅವರು ಏನೆಂದುಕೊಂಡಾರು?
ಲಕ್ಷ್ಮೀ ಚಂಚಲೆ ಏನೂ ಮಾಡಲು ಸಾಧ್ಯವಿಲ್ಲ. ಸರಸ್ವತಿ ಮಾತ್ರ ಸ್ಥಿರವಾಗಿ ಇರುತ್ತಾಳೆ. ನನ್ನ ಒಟ್ಟಾರೆ ಆಸ್ತಿ ಕೇವಲ 36 ಸಾವಿರ ಕೋಟಿ ಆಗಿರಲಿಲ್ಲ. 2012ರಲ್ಲಿ ನನಗೆ 12.8 ಬಿಲಿಯನ್ ಡಾಲರ್ ಮಾರ್ಕೆಟ್ ಕ್ಯಾಪಿಟಲ್ ಇತ್ತು. 2017ರಿಂದ ನಾನು ನ್ಯೂ ಮೆಡಿಕಲ್ ಸಂಸ್ಥೆಯಿಂದ ಹೊರಬಂದೆ. ನಂತರ 2019ರಲ್ಲಿ ನನ್ನ ಎಲ್ಲಾ ಸಾಮ್ರಾಜ್ಯ ಕುಸಿದು ಹೋಯಿತು. ಇದೆಲ್ಲಾ ಆಗುತ್ತಿದ್ದಾಗ ನಾನು ಯಾವತ್ತೋ ಆನಂದಬಾಷ್ಪ ಸುರಿಸಿದ ಚಿತ್ರವನ್ನು ಮಾಧ್ಯಮಗಳು ಕಣ್ಣೀರು ಎಂದು ಬಿಂಬಿಸಿದವು. ಇದು ನನಗೆ ಬೇಸರ ತಂದಿದೆ ಎಂದು ಹೇಳಿಕೊಂಡಿದ್ದಾರೆ.
ಅಬು ಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅಲ್ಲಿಯ ದೊರೆಯೇ ಆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಅತಿ ದೊಡ್ಡದಾದ ದೇವಸ್ಥಾನವನ್ನು ಅಲ್ಲಿ ಕಟ್ಟಲಿದ್ದೇವೆ. ಅಂತೆಯೇ, ವಾರಣಾಸಿಯಲ್ಲಿ ಆಸ್ಪತ್ರೆ ಮಾಡಲು 5 ಎಕರೆಯಷ್ಟು ಜಾಗ ನೀಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಅಲ್ಲಿ ಶಿಲಾನ್ಯಾಸ ನಡೆಸಿದ್ದೇವೆ. ಅಯೋಧ್ಯೆಯಲ್ಲೂ ಆಸ್ಪತ್ರೆ ಮಾಡುವ ಚಿಂತನೆ ಇದೆ. ನನ್ನ ಮೂರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ನಾನು ಸಹ ಮತ್ತೆ ಎದ್ದು ಬರಲಿದ್ದೇನೆ. ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸಮಾಜ ಸೇವೆಗಳನ್ನು ಮುಂದುವರಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೊರದೇಶದ ಆಸ್ತಿ ಹೋಗಿದ್ದರೂ ಭಾರತದ ಆಸ್ತಿ ಸುರಕ್ಷಿತವಾಗಿದೆ, I Will Come Back Again ಎಂದ ಬಿ.ಆರ್.ಶೆಟ್ಟಿ!
Published On - 3:30 pm, Mon, 1 March 21