ಹೊರದೇಶದ ಆಸ್ತಿ ಹೋಗಿದ್ದರೂ ಭಾರತದ ಆಸ್ತಿ ಸುರಕ್ಷಿತವಾಗಿದೆ, I Will Come Back Again ಎಂದ ಬಿ.ಆರ್​.ಶೆಟ್ಟಿ!

| Updated By: ganapathi bhat

Updated on: Mar 01, 2021 | 3:35 PM

B.R.Shetty: ನನ್ನ ಆಸ್ತಿಯ ಅರ್ಧಭಾಗವನ್ನು ಮಿಲಿಂದಾ ಗೇಟ್ ಫೌಂಡೇಶನ್​ಗೆ ದಾನ ಮಾಡಿದ್ದೇನೆ. ಅಲ್ಲಿ ಪಾರ್ಕಿನ್ಸನ್ ಅಮ್ನೇಶಿಯಾ ಸೇರಿದಂತೆ ಮೊದಲಾದ ಕಾಯಿಲೆಗಳ ಬಗ್ಗೆ ಅಧ್ಯಯನ ಆಗುತ್ತಿದೆ. ಆದರೆ, ಇಲ್ಲಿ ಬಿ.ಆರ್.ಶೆಟ್ಟಿ ಸಾಮ್ರಾಜ್ಯ ಮುಳುಗಿಹೋಯಿತು ಎಂಬ ಸುದ್ದಿಗಳು ಬರುತ್ತಿರುವುದನ್ನು ನೋಡಿ ಬೇಸತ್ತು ಹೋಗಿದ್ದೇನೆ.

ಹೊರದೇಶದ ಆಸ್ತಿ ಹೋಗಿದ್ದರೂ ಭಾರತದ ಆಸ್ತಿ ಸುರಕ್ಷಿತವಾಗಿದೆ, I Will Come Back Again ಎಂದ ಬಿ.ಆರ್​.ಶೆಟ್ಟಿ!
ಉದ್ಯಮಿ ಬಿ.ಆರ್​.ಶೆಟ್ಟಿ
Follow us on

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ. ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದ ಒಬ್ಬನನ್ನು ಸಿಎಫ್ಓ ಮಾಡಿದೆ. ಆದರೆ, ಅವನೇ ನನ್ನ ಬೆನ್ನಿಗೆ ಚೂರಿ ಹಾಕಿದ. ನನಗೇ ತಿಳಿಯದ ಹಾಗೆ ಬೆನ್ನಹಿಂದಿನಿಂದ ಆರ್ಥಿಕ ವಂಚನೆ ಮಾಡಲಾಗಿದೆ. ಅಷ್ಟಾದರೂ ಆ ವ್ಯಕ್ತಿಯನ್ನು ಆರೋಪಿ ಎಂದು ನಾನು ಹೇಳಲಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಆರೋಪ ಇನ್ನೂ ಸಾಬೀತಾಗಿಲ್ಲದ ಕಾರಣ ಹೆಚ್ಚೇನು ಹೇಳಲಾರೆ. ಪಟ್ಟಭದ್ರ ಹಿತಾಸಕ್ತಿಗಳು ಸೇರಿ ನನಗೆ ವಂಚನೆ ಮಾಡಿರುವರಾದರೂ ಜನರ ಆಶೀರ್ವಾದದಿಂದ ಈ ಎಲ್ಲಾ ಸಮಸ್ಯೆಗಳಿಂದ ನಾನು ಹೊರ ಬರುತ್ತೇನೆ ಎಂಬ ನಂಬಿಕೆ ಇದೆ ಎಂದು ಉದ್ಯಮಿ ಬಿ.ಆರ್.ಶೆಟ್ಟಿ ಉಡುಪಿಯಲ್ಲಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿದವನು ನಾನು. ಅಮೆರಿಕಾದಲ್ಲಿ ಟ್ರಂಪ್​ಗೆ ಒಂದು ಕ್ರೆಡಿಟ್ ಕಾರ್ಡ್ ಕೂಡ ಕೊಡಲು ಬ್ಯಾಂಕ್​ಗಳು ಹಿಂದೆ ಮುಂದೆ ನೋಡುತ್ತಿದ್ದವು. ಆ ಮಟ್ಟದಲ್ಲಿ ದಿವಾಳಿ ಆಗಿದ್ದ ಮನುಷ್ಯ ಬಳಿಕ ಅಮೆರಿಕದ ಅಧ್ಯಕ್ಷ ಆಗಲಿಲ್ಲವೇ? ನಾನು ಯಾರಿಗೂ ವಂಚನೆ ಮಾಡಿಲ್ಲ ಎಂಬ ಆತ್ಮವಿಶ್ವಾಸವಿದೆ. ಇದೊಂದು ನನಗೆ ಗ್ರಹಚಾರ ಬಂದಿದೆಯಷ್ಟೇ, ಅದನ್ನು ಅನುಭವಿಸುವ ಹೊರತಾಗಿ ಏನು ಮಾಡಲು ಸಾಧ್ಯ? ಆದರೆ, ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ನೀವು ಯಾರು ಊಹಿಸಿರದ ಮಟ್ಟಕ್ಕೆ ಸಕ್ಷಮವಾಗಿದ್ದೇನೆ ಎಂದು ಹೇಳಿದ್ದಾರೆ.

ನಾನು ಉಡುಪಿಯಲ್ಲಿದ್ದಾಗ ನನ್ನ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡು ಇರುತ್ತಿರಲಿಲ್ಲ. ಸಾಲ ಮಾಡಿ ಬೈಕಿಗೆ ಪೆಟ್ರೋಲ್ ಹಾಕಿ ಓಡಾಡುತ್ತಿದ್ದೆ. ಆದರೆ, ಯಾರಿಂದೆಲ್ಲಾ ಸಾಲ ಪಡೆದಿದ್ದೇನೆ ಎಲ್ಲವನ್ನೂ ವಾಪಾಸು ಮಾಡಿಯೇ ಮುಂದೆ ಬಂದಿದ್ದೇನೆ. ಈಗಲೂ ನಾನು ಕಷ್ಟಪಟ್ಟು ದುಡಿದ ಹಣವನ್ನು ಮರು ಗಳಿಸುತ್ತೇನೆ ಹಾಗೂ ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸಮಾಜ ಸೇವೆಗಳನ್ನು ಮುಂದುವರಿಸುತ್ತೇನೆ. ಐ ವಿಲ್ ಕಮ್ ಬ್ಯಾಕ್ ಅಗೈನ್ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ನನ್ನ ಆಸ್ತಿಯ ಅರ್ಧ ಭಾಗ ದಾನ ಮಾಡಿದ್ದೇನೆ
ನನ್ನ ಆಸ್ತಿಯ ಅರ್ಧ ಭಾಗವನ್ನು ಮಿಲಿಂದಾ ಗೇಟ್ ಫೌಂಡೇಶನ್​ಗೆ ದಾನ ಮಾಡಿದ್ದೇನೆ. ಅಲ್ಲಿ ಪಾರ್ಕಿನ್ಸನ್ ಅಮ್ನೇಶಿಯಾ ಮೊದಲಾದ ಕಾಯಿಲೆಗಳ ಬಗ್ಗೆ ಅಧ್ಯಯನ ಆಗುತ್ತಿದೆ. ಆದರೆ, ಇಲ್ಲಿ ಬಿ.ಆರ್.ಶೆಟ್ಟಿ ಸಾಮ್ರಾಜ್ಯ ಮುಳುಗಿಹೋಯಿತು ಎಂಬ ಸುದ್ದಿಗಳು ಬರುತ್ತಿರುವುದನ್ನು ನೋಡಿ ಬೇಸತ್ತು ಹೋಗಿದ್ದೇನೆ. ಹೊರದೇಶದಲ್ಲಿರುವ ನನ್ನ ಸಾಮ್ರಾಜ್ಯ ಹೋಗಿರಬಹುದು. ಆದರೆ ಭಾರತದ ಆಸ್ತಿ ಸುರಕ್ಷಿತವಾಗಿದೆ. ಯಾರಾದರೂ ಮೇಲೆ ಹೋಗುತ್ತಾರೆ ಎನ್ನುವಾಗ ಮತ್ಸರ ಪಡುವ ಜನರು ಇರುವುದು ಸಹಜ. ನನ್ನ ವಿಚಾರದಲ್ಲೂ ಹಾಗೆಯೇ ಆಗಿದೆಯಷ್ಟೇ. ಆದರೆ, ನಾನು ಮತ್ತೆ ಎದ್ದು ಬರುತ್ತೇನೆ. ಜನಸೇವೆ ಮಾಡಿರುವುದರಿಂದ ಅವರೆಲ್ಲರ ಆಶೀರ್ವಾದ ನನ್ನ ಮೇಲಿದೆ. ಹೀಗಾಗಿ ನನ್ನ ಪರಿಸ್ಥಿತಿ ಸರಿಹೋಗುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ನನಗೆ ಆತ್ಮೀಯರು, ಆದರೆ ಅವರ ಬಳಿ ಮಾತಾಡೋಕೆ ಹೋದರೆ ರಾಹುಲ್​ ಗಾಂಧಿ ಮಾತಿಗೆ ವಿಷಯ ಸಿಕ್ಕಂತಾಗುತ್ತೆ: ಬಿ.ಆರ್​.ಶೆ್ಟ್ಟಿ

Princess Latifa: ದುಬೈ ರಾಜಕುಮಾರಿ ಲತೀಫಾ ಯಾರು? ಅವಳು ಬದುಕಿರುವುದಕ್ಕೆ ವಿಶ್ವಸಂಸ್ಥೆ ಸಾಕ್ಷ್ಯ ಕೇಳುತ್ತಿರುವುದೇಕೆ?

Published On - 2:55 pm, Mon, 1 March 21