ಬಾಗಲಕೋಟೆ: ಒಂದು ವರ್ಷದ ಮಗುವನ್ನು ಹಿಡಿದುಕೊಂಡೇ ಬಾವಿಗೆ ಜಿಗಿದ ತಾಯಿ

ಈಕೆ ಹೆರಿಗೆಗಾಗಿ ತನ್ನ ಅಜ್ಜಿಯ ಊರು ರಾಘಾಪುರಕ್ಕೆ ಬಂದಿದ್ದಳು. ಹೆರಿಗೆ ಬಳಿಕ ಇಂದು ಗಂಡನ ಮನೆಯವರು ಕರೆದುಕೊಂಡು ಈಕೆಯನ್ನು ಮರಳಿ ಕರೆದೊಯ್ಯಲು ಬಂದಿದ್ದರು.

ಬಾಗಲಕೋಟೆ: ಒಂದು ವರ್ಷದ ಮಗುವನ್ನು ಹಿಡಿದುಕೊಂಡೇ ಬಾವಿಗೆ ಜಿಗಿದ ತಾಯಿ
ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯ


ಬಾಗಲಕೋಟೆ: ತನ್ನ ಒಂದು ವರ್ಷದ ಮಗುವನ್ನು ಹಿಡಿದುಕೊಂಡು ತಾಯಿಯೋರ್ವಳು ಬಾವಿಗೆ ಹಾರಿದ ವಿಷಾದಕರ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ರಾಘಾಪುರದಲ್ಲಿ ನಡೆದಿದೆ. ಒಂದು ವರ್ಷದ ಮಗುಶಿವಾನಿ ಸಾವನ್ನಪ್ಪಿದ್ದು, ಮಗುವಿನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ತಾಯಿ ಫಕೀರವ್ವಳಿಗಾಗಿ ಬಾವಿಯಲ್ಲಿ ಹುಡುಕಾಟ ಮುಂದುವರೆದಿದೆ. ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಫಕೀರವ್ವ(26) ಎಂಬ ತಾಯಿಯೇ ತನ್ನ ಒಂದು ವರ್ಷದ ಮಗುವಿನೊಂದಿಗೆ ಬಾವಿಗೆ ಜಿಗಿದ ಮಹಿಳೆ.

ಈಕೆ ಹೆರಿಗೆಗಾಗಿ ತನ್ನ ಅಜ್ಜಿಯ ಊರು ರಾಘಾಪುರಕ್ಕೆ ಬಂದಿದ್ದಳು. ಹೆರಿಗೆ ಬಳಿಕ ಇಂದು ಗಂಡನ ಮನೆಯವರು ಕರೆದುಕೊಂಡು ಈಕೆಯನ್ನು ಮರಳಿ ಕರೆದೊಯ್ಯಲು ಬಂದಿದ್ದರು. ಆದರೆ ಫಕೀರವ್ವ ದಿಢೀರನೇ ತನ್ನ ಅಜ್ಜಿಯ ಜಮೀನಿನಲ್ಲಿ ಇರುವ ಬಾವಿಗೆ ಮಗುವಿನ ಜತೆಗೆ ಹಾರಿದ್ದಾಳೆ. ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುಳೇದಗುಡ್ಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ
ರೈಲಿಗೆ ತಲೆ ಕೊಟ್ಟು ಅಪರಿಚಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಹೊಯ್ಸಳನಗರ ಬಡಾವಣೆ ಬಳಿ ನಡೆದಿದೆ.  ಈಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

Obitury: ಕಾಂಗ್ರೆಸ್​ ಪಕ್ಷದ ಆಪದ್ಬಾಂಧವ, ಸೋನಿಯಾ ಗಾಂಧಿಯ ಆಪ್ತ ಆಸ್ಕರ್ ಫರ್ನಾಂಡಿಸ್

ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದ ಬಾಗಲಕೋಟೆ ಜಿಲ್ಲಾಡಳಿತ; ಕಲಾವಿದರ ಮೊಗದಲ್ಲಿ ಮಂದಹಾಸ

(Bagalakote a mother jumped to well with her 1 year child)

Read Full Article

Click on your DTH Provider to Add TV9 Kannada