ಬಾಗಲಕೋಟೆ: ವಕೀಲೆ (Lawyer) ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದೆ. ವಕೀಲೆ ಸಂಗೀತಾ ಮೇಲೆ ಹಲ್ಲೆ ಮಾಡಿದ್ದ ಮಹಾಂತೇಶ್ ಚೊಳಚಗುಡ್ಡ ಗೆ ವಕೀಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಬಹಿರಂಗಗೊಂಡಿದೆ. ಮೇ 14 ರಂದು ವೀರಭದ್ರೇಶ್ವರ ಗಿಪ್ಟ್ ಸೆಂಟರ್ ಮಾಲಿಕ ಮಹಾಂತೇಶ್ ಚೊಳಚಗುಡ್ಡ, ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ಮಾಡಿದ್ದರು.
ಮಹಾಂತೇಶ್ ಚೊಳಚಗುಡ್ಡ, ವಕೀಲೆ ಮೇಲೆ ಹಲ್ಲೆ ಮಾಡುವುದಕ್ಕಿಂತ ಮುಂಚೆ ಅದೇ ದಿನ (ಮೇ 14) ರಂದು ವಕೀಲೆ ಸಂಗೀತಾ, ಮಹಾಂತೇಶ್ ಚೊಳಚಗುಡ್ಡ ಅವರ ಗಿಪ್ಟ್ ಸೆಂಟರ್ ಗೆ ಹೋಗಿದ್ದರು. ಗಿಪ್ಟ್ ಸೆಂಟರ್ ಎದುರು ವಕೀಲೆ ಮಹಾಂತೇಶ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿದ ಹೊಡೆದಿದ್ದರು. ಬಾಗಲಕೋಟೆಯ ಕೆರೂಡಿ ಆಸ್ಪತ್ರೆ ಬಡಾವಣೆಯಲ್ಲಿರುವ ಮಹಾಂತೇಶ್ ಗಿಪ್ಟ್ ಸೆಂಟರ್ ಗೆ ಗಂಡ ನವೀನ ಜೊತೆ ವಕೀಲೆ ಸಂಗೀತಾ ಶಿಕ್ಕೇರಿ ಹೋಗಿ ಮಹಾಂತೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಮಹಾಂತೇಶ್ ವಕೀಲೆ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸರಿಗೆ (Police) ಮನೆ ತೋರಿಸಿದರು ಎಂಬ ಕಾರಣಕ್ಕೆ ಪಕ್ಕದ ಮನೆಯವರ ಜೊತೆ ವಕೀಲೆ (Lawyer) ಜಗಳವಾಡಿದ್ದಳು. ಜಗಳದಲ್ಲಿ ವಕೀಲೆ, ಕುಟುಂಬಸ್ಥರು ಹಾಗೂ ಇನ್ನೋರ್ವ ವ್ಯಕ್ತಿ ಮಧ್ಯೆ ಮಾರಾಮಾರಿ ನಡೆದಿದೆ. ಈ ವೇಳೆ ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಂತೇಶ ಚೊಳಚಗುಡ್ಡ ಎಂಬ ವ್ಯಕ್ತಿ ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ನಡೆಸಿದ್ದರು.
ಸದ್ಯ ಪಕ್ರಕರಣ ತಿರುವು ಪಡೆದುಕೊಂಡಿದ್ದು, ವಕೀಲೆ ಮಹಾಂತೇಶ್ ಚೊಳಚಗುಡ್ಡ ಮೇಲೆ ಹಲ್ಲೆ ಮಅಡಿರುವ ವಿಡಿಯೋ ಬಹಿರಂಗಗೊಂಡಿದೆ.
ವಿವಾದದಲ್ಲಿ ಇದ್ದ ಮನೆ: ಬಾಗಲಕೋಟೆಯ ವಿನಾಯಕ ನಗರದ 3 ನೇ ಕ್ರಾಸ್ನಲ್ಲಿರುವ ವಕೀಲೆ ಸಂಗೀತಾ ಶಿಕ್ಕೇರಿ ಮನೆಯ ಕಂಪೌಂಡ್ನ ಜೆಸಿಬಿಯಿಂದ ಬೆಳಗಿನ ಜಾವ ಧ್ವಂಸ ಮಾಡಲಾಗಿದೆ. ಸಂಗೀತಾ ದೊಡ್ಡಪ್ಪ ಹನುಮಂತ ಶಿಕ್ಕೇರಿ ಅವರಿಂದ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಬಂದಿದೆ. ಸಂಗೀತಾ ಶಿಕ್ಕೇರಿ ತಾಯಿ ಶಾರದಾ ಶಿಕ್ಕೇರಿ, ಶುವಿತಾ ಶಿಕ್ಕೇರಿ ಹಾಗೂ ಹನುಮಂತ ಶಿಕ್ಕೇರಿ ಎಂಬುವರ ಮಧ್ಯೆ ವಿವಾದ ಇತ್ತು. ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಹಾಗೂ ದೆಹಲಿ ಸುಪ್ರೀಮ್ ಕೋರ್ಟ್ನಲ್ಲಿ ಮನೆ ವಿವಾದ ವಿಚಾರಣಾ ಹಂತದಲ್ಲಿತ್ತು. ಬಾಗಲಕೋಟೆ ಹಿರಿಯ ನ್ಯಾಯಾಧೀಶರು ಯಥಾ ಸ್ಥಿತಿ ಕಾಪಾಡುವಂತೆ ಸ್ಟೇ ಇದೆ. ಸ್ಟೇ ಇದ್ದಾಗಲೂ ಕೃತ ಎಸಗಿದ್ದಾರೆ ಎಂದ ಎಂದು ಸಂಗೀತಾ ಆರೋಪಿಸಿದ್ದಾರೆ. ವಿದ್ಯುತ್ ಕಟ್ ಮಾಡಿಸಿ ನೀರು ಸರಬರಾಜು ಬಂದ್ ಮಾಡಿಸಿ ಮನೆ ಕಂಪೌಂಡ್ ಕೆಡವಿದ್ದಾರೆ ಎಂದು ದೊಡ್ಡಪ್ಪ ಹನುಮಂತ ಶಿಕ್ಕೇರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:31 am, Tue, 17 May 22