ಕರ್ನಾಟಕ ಶಾಲಾ ಪಠ್ಯದಲ್ಲಿ ಟಿಪ್ಪು ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್! ಎರಡೇ ಸಾಲಿನಲ್ಲಿ ಪಾಠ ಮುಕ್ತಾಯ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂಬ ಬಿರುದು ಕಡಿತ ಮಾಡಲಾಗಿದೆ. ಪಠ್ಯದಲ್ಲಿ ಎಲ್ಲಿಯೂ ಮೈಸೂರು ಹುಲಿ ಟಿಪ್ಪು ಎಂಬ ಬಿರುದು ಬಳಸಿಲ್ಲ. ಈ ಹಿಂದೆ 6ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಮೈಸೂರು ಹುಲಿ ಟಿಪ್ಪು ಬಳಸಲಾಗಿತ್ತು.

ಕರ್ನಾಟಕ ಶಾಲಾ ಪಠ್ಯದಲ್ಲಿ ಟಿಪ್ಪು ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್! ಎರಡೇ ಸಾಲಿನಲ್ಲಿ ಪಾಠ ಮುಕ್ತಾಯ
ಟಿಪ್ಪು ಸುಲ್ತಾನ್
Follow us
| Updated By: sandhya thejappa

Updated on:May 17, 2022 | 11:08 AM

ಬೆಂಗಳೂರು: ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು (Tipu) ಪಠ್ಯ ಗೊಂದಲಕ್ಕೆ ಪಠ್ಯ ಪುಸ್ತಕ ಸಮಿತಿ (Karnataka School Syllabus Revision Committee) ತೆರೆ ಎಳೆದಿದೆ. ಶಾಲಾ ಪುಸ್ತಕದಲ್ಲಿ ಟಿಪ್ಪು ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, ಎರಡೇ ಎರಡು ಸಾಲಿನಲ್ಲಿ ಟಿಪ್ಪು ಕುರಿತ ಪಾಠ ಮುಕ್ತಾಯವಾಗುತ್ತದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂಬ ಬಿರುದು ಕೂಡಾ ಕಡಿತ ಮಾಡಲಾಗಿದೆ. ಪಠ್ಯದಲ್ಲಿ ಎಲ್ಲಿಯೂ ಮೈಸೂರು ಹುಲಿ ಟಿಪ್ಪು ಎಂಬ ಬಿರುದು ಬಳಸಿಲ್ಲ. ಈ ಹಿಂದೆ 6ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಮೈಸೂರು ಹುಲಿ ಟಿಪ್ಪು ಬಳಸಲಾಗಿತ್ತು. ಆದರೆ ಈ ಬಾರಿ ಮೈಸೂರು ವಿಭಾಗದ ಪಠ್ಯದಲ್ಲಿದ್ದ ಟಿಪ್ಪು ವೈಭವೀಕರಣಕ್ಕೆ ಕತ್ತರಿ ಬಿದ್ದಿದೆ.

ಪರಿಷ್ಕೃತ ಪಠ್ಯದಲ್ಲಿ ಸಾಧನೆ, ಟಿಪ್ಪು ಹೋರಾಟ, ಮೈಸೂರಿನ ಅಳ್ವಿಕೆ ಬಗೆಗಿನ ಮಾಹಿತಿಗೆ ಕತ್ತರಿ ಹಾಕಲಾಗಿದೆ. 10ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯದಲ್ಲೂ ಟಿಪ್ಪು ಬಗ್ಗೆ ಪಾಠವಿಲ್ಲ. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು ಸೇರಿದಂತೆ ಮೈಸೂರಿನ ಒಡೆಯರ ಎಂಬ ಪಾಠದಲ್ಲಿಯೂ ಟಿಪ್ಪು ಬಗ್ಗೆ ಮಾಹಿತಿ ಸಿಗಲ್ಲ.

ಜೊತೆಗೆ ಟಿಪ್ಪು ಹೆಸರು ಬಂದ ಕಡೆಗಳಲ್ಲಿ ಅವನು ಎಂದು ಏಕವಚನ ಬಳಕೆ ಮಾಡಲಾಗಿದೆ. ‘ಹೋರಾಡಿದವನು, ವಶಪಡಿಸಿಕೊಂಡ’ ಎಂಬ ಪದಗಳನ್ನ ಬಳಸಲಾಗಿದೆ. ಆದರೆ ಪಠ್ಯ ಪುಸ್ತಕ ಸಮಿತಿ ಮೈಸೂರಿನ ರಾಜರಿಗೆ ಗೌರವಯುತವಾದ ಪದ ಬಳಸಿದೆ.

ಇದನ್ನೂ ಓದಿ
Image
LIC Stock Market Debut: 949 ರೂ.ಗೆ ಹಂಚಿದ್ದ ಎಲ್​ಐಸಿ ಷೇರು ಶೇ 9ರಷ್ಟು ಕಡಿಮೆಗೆ 867 ರೂಪಾಯಿಯಲ್ಲಿ ಮಾರುಕಟ್ಟೆ ಲಿಸ್ಟಿಂಗ್
Image
Russia Ukraine War: ಮರಿಯುಪೋಲ್ ಪ್ರತಿರೋಧ ಮುಕ್ತಾಯ ಎಂದ ಉಕ್ರೇನ್, ಭವಿಷ್ಯದ ಆಹಾರ ಬಿಕ್ಕಟ್ಟಿಗೆ G7 ಕಾರಣ ಎಂದ ರಷ್ಯಾ
Image
ಹೊಳೆನರಸೀಪುರ ತಾಲೂಕು ಕಚೇರಿಯಲ್ಲಿ ರೈತರ ಕಡತ ನಾಪತ್ತೆ: ತಹಸೀಲ್ದಾರ್‌ಗೆ ದೂರು ನೀಡಿದ ಗ್ರಾಮಸ್ಥರು
Image
ಸಂಡೇ ಮಂಡೇ ಲಾಯರ್, ನಿಮ್ಮಿಂದ ಕಾನೂನಿನ ಪಾಠ ಅಗತ್ಯವಿಲ್ಲ; ಸಿದ್ದರಾಮಯ್ಯ ವಿರುದ್ಧ ಶಾಸಕ ಬೋಪಯ್ಯ ವಾಗ್ದಾಳಿ

ಭಗತ್ ಸಿಂಗ್ ಪಠ್ಯ ಶಿಕ್ಷಣ ಇಲಾಖೆ: ಇನ್ನು ಶಿಕ್ಷಣ ಇಲಾಖೆ ಭಗತ್ ಸಿಂಗ್ ಪಠ್ಯಕ್ಕೂ ಬ್ರೇಕ್ ಬಿದ್ದಿದೆ. ಈ ಬಗ್ಗೆ ನಿನ್ನೆ ಮಾತನಾಡಿದ್ದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಭಗತ್ ಸಿಂಗ್ ಪಾಠ ಕೈಬಿಟ್ಟುದ್ದು ನಿಜಾ. ಭಗತ್ ಸಿಂಗ್ ಪಠ್ಯ ಪೂರಕ ಪಠ್ಯದಲ್ಲಿತ್ತು. ಭಗತ್ ಸಿಂಗ್ ಪಾಠ ಮುಖ್ಯ ಭಾಗದಲ್ಲಿ ಇರಲಿಲ್ಲ. ಭಗತ್ ಸಿಂಗ್ ಪಾಠ ತುಂಬಾ ಸಣ್ಣ ಪಾಠವಾಗಿತ್ತು. ಭಗತ್ ಸಿಂಗ್ ಪಾಠದಲ್ಲಿ ಹೆಚ್ಚಾಗಿ ಮಾಹಿತಿ ಇರಲಿಲ್ಲ. ಹೀಗಾಗಿ ಪುನರಾವರ್ತನೆ ಬೇಡಾ ಅಂತಾ ತೆಗೆದು ಹಾಕಲಾಗಿದೆ. ಕೇಸರೀಕರಣ ಉದ್ದೇಶದಿಂದ ಹೆಡ್ಗೆವಾರ್ ಗದ್ಯ ಪಾಠ ಸೇರಿಸಿಲ್ಲ. ಕೇಸರೀಕರಣ ಉದ್ದೇಶವಾಗಿದ್ರೆ ನಾವು ಭಗತ್ ಸಿಂಗ್ ಪಾಠ ಕೈಬಿಡ್ತಾ ಇರಲಿಲ್ಲ. ಭಗತ್ ಸಿಂಗ್ ಪಾಠ 2014ರಲ್ಲಿ ಇರಲಿಲ್ಲ. ಬರಗೂರು ರಾಮಚಂದ್ರಪ್ಪನವರು ಭಗತ್ ಸಿಂಗ್ ಪಾಠವನ್ನ ಸೇರಿಸಿದ್ದಾರೆ. ಬರಗೂರುವರು ಭಗತ್ ಸಿಂಗ್ ಪಾಠವನ್ನ ಪೂರಕ ಭಾಗಕ್ಕೆ ಸೇರಿಸಿದ್ರು ಮುಖ್ಯ ಭಾಗಕ್ಕೆ ಅಲ್ಲ. ಪೂರಕ ಭಾಗದಲ್ಲಿ ಇದ್ದ ಕಾರಣಕ್ಕೆ ನಾವು ಕೈಬಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Tue, 17 May 22