ಇತ್ತ ಪ್ರವಾಹ ಪರಿಸ್ಥಿತಿಗೆ ನಲುಗಿದ ಜನ, ಅತ್ತ ಗೋವಾ ರೆಸಾರ್ಟ್ನಲ್ಲಿ ಬಿಜೆಪಿ ಮುಖಂಡರ ಮೋಜು ಮಸ್ತಿ
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಿಂದ ಪ್ರವಾಹ ಭೀತಿ ಎದುರಾಗಿದೆ. ಆದ್ರೆ ಇಂತಹ ಪ್ರವಾಹ ಪರಿಸ್ಥಿತಿ ವೇಳೆ ಮುಖಂಡರು ಮೋಜು ಮಸ್ತಿ ಮಾಡುತ್ತ ಎಂಜಾಯ್ ಮಾಡುತ್ತಿದ್ದಾರೆ. ಬಾಗಲಕೋಟೆಯಲ್ಲಿ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಚುನಾವಣೆಗಾಗಿ ರೆಸಾರ್ಟ್ ರಾಜಕಾರಣ ನಡೆಯುತ್ತಿದೆ.
ಬಾಗಲಕೋಟೆ: ರಾಜ್ಯದಲ್ಲಿ ಭೀಕರ ಮಳೆಯಾಗುತ್ತಿದೆ(Karnataka Rains). ಮಳೆಯಿಂದಾಗಿ ಅನೇಕ ಕಡೆ ಊರುಗಳಿಗೆ ನೀರು ನುಗ್ಗಿದೆ. ಜನ ಆಚೆ ಬರಲೂ ಆಗದೆ ಪರದಾಡುತ್ತಿದ್ದಾರೆ. ಸೇತುವೆಗಳು ಕಾಣ್ತಿಲ್ಲ. ಹೊಲಗದ್ದೆಗಳಲೆಲ್ಲ ನೀರು ನಿಂತು ಕೆರೆಯಂತಾಗಿವೆ. ದೇಗುಲಗಳು ಮುಳುಗಿವೆ. ಕೆಲವೆಡೆ ಗುಡ್ಡ ಕುಸಿದು ಸಂಚಾರ ನಿರ್ಬಂಧಿಸಲಾಗಿದೆ. ಇಂತಹ ಭೀಕರ ಪರಿಸ್ಥಿತಿಯ ನಡುವೆ ಮುಖಂಡರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಿಂದ ಪ್ರವಾಹ ಭೀತಿ ಎದುರಾಗಿದೆ. ಆದ್ರೆ ಇಂತಹ ಪ್ರವಾಹ ಪರಿಸ್ಥಿತಿ ವೇಳೆ ಮುಖಂಡರು ಮೋಜು ಮಸ್ತಿ ಮಾಡುತ್ತ ಎಂಜಾಯ್ ಮಾಡುತ್ತಿದ್ದಾರೆ. ಬಾಗಲಕೋಟೆಯಲ್ಲಿ ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಚುನಾವಣೆಗಾಗಿ ರೆಸಾರ್ಟ್ ರಾಜಕಾರಣ ನಡೆಯುತ್ತಿದೆ. ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ಇದೆ. ಹೀಗಾಗಿ ಗೋವಾ, ದಾಂಡೇಲಿಯಲ್ಲಿ ಪುರಸಭೆ ಸದಸ್ಯರ ಜೊತೆ ಬಾಗಲಕೋಟೆ ಜಿಲ್ಲೆ ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಪುರಸಭೆಯ ಬಿಜೆಪಿ ಸದಸ್ಯರು ಗೋವಾ ರೆಸಾರ್ಟ್ಗೆ ತೆರಳಿದ್ದು ಇಂದು ಬಿಜೆಪಿ ಶಾಸಕ ಸಿದ್ದು ಸವದಿ ಸದಸ್ಯರ ಜೊತೆಗೂಡಿದ್ದಾರೆ.
ಇಲ್ಲಿ ನಿರಂತರ ಮಳೆಯಿಂದ ಕೃಷ್ಣಾ ನದಿ ಪ್ರವಾಹದ ಭೀತಿ ಇದೆ. ಆದ್ರೆ ಗೋವಾಗೆ ಹೋಗಿ ಮುಖಂಡರು ಎಂಜಾಯ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಮೋಜಿನಲ್ಲಿ ತೊಡಗಿರುವ ಸಿದ್ದು ಸವದಿ ಫೋಟೋ ಹಾಕಿ ವ್ಯಂಗ್ಯ ಮಾಡಲಾಗುತ್ತಿದೆ. ಜಿಲ್ಲೆಯ ಪ್ರವಾಹ ಸ್ಥಿತಿಗತಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವ ಸಿ.ಸಿ.ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಆದ್ರೆ ಸಭೆಗೆ ಗೈರಾಗಿ ಬಿಜೆಪಿ ಶಾಸಕ ಸಿದ್ದು ಸವದಿ ಗೋವಾದಲ್ಲಿದ್ದಾರೆ. ಈ ಹಿಂದೆ ಪುರಸಭೆ ಅಧ್ಯಕ್ಷರ ಚುನಾವಣೆ ವೇಳೆ ಗಲಾಟೆ ಆಗಿತ್ತು. ಆ ವೇಳೆ ಸಿದ್ದು ಸವದಿ ಮಹಿಳಾ ಸದಸ್ಯರನ್ನು ಎಳೆದಾಡಿ ಟೀಕೆಗೆ ಗುರಿಯಾಗಿದ್ದರು. ಈಗ ಮತ್ತೆ ಅಧ್ಯಕ್ಷರ ಆಯ್ಕೆಗಾಗಿ ಗೋವಾದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.
Published On - 6:25 pm, Thu, 14 July 22