ಸಾಧನೆಗೆ ಅಡ್ಡಿಯಾಗದ ಬಡತನ, ಚುಮಣಿಯ ಬೆಳಕಿನಲ್ಲಿ ಗೋಚರಗೊಂಡ ಪ್ರತಿಭೆ | ಒಂದೇ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳ ಸಾಧನೆ

| Updated By: ವಿವೇಕ ಬಿರಾದಾರ

Updated on: May 23, 2022 | 12:17 PM

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗುಡ್ದಗಳ ಅಂಚಿನ ಪುಟ್ಟ ಮಣ್ಣಿನ ಮನೆಯಲ್ಲಿ ವಾಸವಿರುವ ಅತ್ಯಂತ ಹಿಂದುಳಿದ ದಕ್ಕಲಿಗ ಸಮುದಾಯದ ಕವಿತಾ ಎಮ್ ಸಾಲಿಮನಿ ೧೦ ನೇ ತರಗತಿಯ ಪರೀಕ್ಷೆಯಲ್ಲಿ 625 ಕ್ಕೆ 559 ಅಂಕ ಪಡೆದ್ದಾರೆ

ಸಾಧನೆಗೆ ಅಡ್ಡಿಯಾಗದ ಬಡತನ, ಚುಮಣಿಯ ಬೆಳಕಿನಲ್ಲಿ ಗೋಚರಗೊಂಡ ಪ್ರತಿಭೆ | ಒಂದೇ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳ ಸಾಧನೆ
ವಿದ್ಯಾರ್ಥಿನಿ ಅನುಷ್ಕಾ
Follow us on

ಬಾಗಲಕೋಟೆ: ಜಿಲ್ಲೆಯ ತೇರದಾಳ (Teradal) ಪಟ್ಟಣದ ರೈತನ ಮಗಳು ಅನುಷ್ಕಾ ಹಂದಿಗುಂದ ಎಸ್ಸೆಸ್ಸೆಲ್ಸಿಯಲ್ಲಿ (SSLC) 622 ಅಂಕ ಪಡೆದು ಮಾದರಿಯಾಗಿದ್ದಾರೆ. ಕುಟುಂಬ ಗುಡಿಸಿಲಿಲ್ಲಿ ವಾಸುತ್ತಿದ್ದು, ಮನೆಗೆ ವಿದ್ಯುತ್ ಸಂಪರ್ಕ ಇಲ್ಲ. ಹೀಗಾಗಿ ಅನುಷ್ಕ ಚಿಮಣಿ ಬೆಳಕಲ್ಲಿ ಓದಿ ಸಾಧನೆ ಮಾಡಿದ್ದಾರೆ. ಅನುಷ್ಕಾಳ ತಂದೆ ಭೂಪಾಲ ತಾಯಿ ಸುಜಾತಾ. ತಂದೆ ಅನಕ್ಷರಸ್ಥನಾಗಿದ್ದು, ತಾಯಿ ನಾಲ್ಕನೇ ತರಗತಿ ಓದಿದ್ದಾರೆ. ಅನುಷ್ಕಾಳ ತಂದೆ 11 ವರ್ಷಗಳ ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡು ಮನೆಯಲ್ಲೆ ಇದ್ದಾರೆ. ಈ ದಂಪತಿಗಳಿಗೆ ನಾಲ್ಕು ಹೆಣ್ಣುಮಕ್ಕಳಿದ್ದು , ಜೀವನ ನಿರ್ವಹಣೆಗೆ 30 ಗುಂಟೆ ಜಮೀನು ಮತ್ತು 6 ಎಮ್ಮೆ ಸಾಕಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ.

ಅನುಷ್ಕಾ ತೇರದಾಳದ ಎಸ್ ಜೆ ಹಣ್ಣುಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಇವಳ ಸಾಧನೆಗೆ ಶಾಲೆಯ ಶಿಕ್ಷಕ ವೃಂದ ಮತ್ತು ತಂದೆ-ತಾಯಿ ಅಭಿನಂದನೆ ಸಲ್ಲಿಸಿದ್ದಾರೆ. ನಾಲ್ಕು ಜನ ಹೆಣ್ಣುಮಕ್ಕಳಲ್ಲಿ ಮೊದಲ ಮಗಳಿಗೆ ಮದುವೆ ಮಾಡಿದ್ದಾರೆ. ಎರಡನೇ ಮಗಳ ಮದುವೆ ಆಗಿದ್ದು, ಆಕೆ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ತಾಯಿಯ ಮನೆಯಲ್ಲೆ ಉಳಿದಿದ್ದಾಳೆ. 3ನೇ ಮಗಳು ಬಿಕಾಂ ಓದುತ್ತಿದ್ದಾಳೆ. ನಾಲ್ಕನೇ ಮಗಳು ಅನುಷ್ಕಾ, ಎಮ್ಮೆ ಕಟ್ಟುವ ಶೆಡ್ ನಲ್ಲಿ ವಿದ್ಯುತ್ ಬೆಳಕು ಇಲ್ಲದೇ ಚಿಮಣಿ ಸಹಾಯದಿಂದ ರಾತ್ರಿಯಲ್ಲ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಪ್ರತಿಶತ 99.52 ಅಂಕ ಪಡೆದು ಗಮನ ಸೆಳೆದಿದ್ದಾಳೆ.ಬಾಲಕಿ ಸಾಧನೆಗೆ ಆಕೆಯ ತಂದೆಯ ಸ್ನೇಹಿತರು ಸನ್ಮಾನ ಮಾಡಿದ್ದಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಶಾಸಕರ ವಿರೋಧ: 714 ಕಟ್ಟಡಗಳ ಪಟ್ಟಿ ಸಿದ್ಧ

ಇದನ್ನೂ ಓದಿ
ರಾಜ್ಯ ಕಾಂಗ್ರೆಸ್‌ನಲ್ಲಿ ಪರಿಷತ್​ ಟಿಕೆಟ್​ಗಾಗಿ ಜೋರಾದ ಫೈಟ್: ಮತ್ತೆ ದೆಹಲಿಗೆ ಹಾರಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಅರಬ್ಬಿ ಸಮುದ್ರದಲ್ಲಿ ನೋಡ ನೋಡುತ್ತಿದ್ದಂತೆ ಮುಳುಗಿದ ದೋಣಿ; ವಿಡಿಯೋ ಇಲ್ಲಿದೆ
 Nrityanjali  Jewellery Collection: ಭಾರತೀಯ ನೃತ್ಯಕಲೆಯನ್ನು ಚಿನ್ನದ ಆಭರಣಗಳ ಮೇಲೆ ಮೂಡಿಸಿದ ಮಲಬಾರ್​ ಗೋಲ್ಡ್​ನ ನೃತ್ಯಾಂಜಲಿ ಕಲೆಕ್ಷನ್
ಹಿಜಾಬ್​ ಧರಿಸಿ ಕಾಣಿಸಿಕೊಳ್ಳುತ್ತಿರುವ ಸ್ಟಾರ್​ ನಟಿಯರು; ಕುತೂಹಲ ಹುಟ್ಟುಹಾಕಿವೆ ಈ ಪಾತ್ರಗಳು

ಬಡತನದಲ್ಲಿ ಅರಳಿದ ಪ್ರತಿಭೆ

ಬಾಗಲಕೋಟೆ: ಕಡು ಬಡತನದಲ್ಲಿದ್ದುರು ಛಲ ಬಿಡದೆ ಕಷ್ಟಪಟ್ಟು ಓದಿ SSLC ಅಥವಾ PUCಯಲ್ಲಿ ರಾಜ್ಯಕ್ಕೆ ಪ್ರಥಮ ಅಥವಾ ಜಿಲ್ಲೆಗೆ ಪ್ರಥಮ ಬಂದಿರುವ ವಿದ್ಯಾರ್ಥಿಗಳು ನಮ್ಮ ಕಣ್ಣಮುಂದೆ ಇದ್ದಾರೆ. ಅಂಥವರಲ್ಲಿ ಸಾಲಿಗೆ ಸೇರಲಿದ್ದಾರೆ ಬಾಗಲಕೋಟೆ ಜಿಲ್ಲೆಯ ಈ ಮಕ್ಕಳು.

ಬಾಗಲಕೋಟೆ (Bagalakote) ಜಿಲ್ಲೆಯ ಬದಾಮಿ (Badami) ತಾಲೂಕಿನ ಗುಡ್ದಗಳ ಅಂಚಿನ ಪುಟ್ಟ ಮಣ್ಣಿನ ಮನೆಯಲ್ಲಿ ವಾಸವಿರುವ ಅತ್ಯಂತ ಹಿಂದುಳಿದ ದಕ್ಕಲಿಗ ಸಮುದಾಯದ ಕವಿತಾ ಎಮ್ ಸಾಲಿಮನಿ ೧೦ ನೇ ತರಗತಿಯ (SSLC) ಪರೀಕ್ಷೆಯಲ್ಲಿ ೬೨೫ ಕ್ಕೆ ೫೫೯ ಅಂಕ ಪಡೆದ್ದಾರೆ. ಇವರ ಸಾಧನೆಗೆ ಇಡೀ ದಕ್ಕಲಿಗ ಸಮುದಾಯ ಸಂಭ್ರಮ ಪಟ್ಟಿದೆ. ಕವಿತಾ ತಾಯಿ ಮಂಜುಳಮ್ಮ ತಂದೆ ಮಲ್ಲೇಶಣ್ಣ ಸಾಲಿಮನಿ ಕೂಲಿ-ನಾಲಿ ಮಾಡಿಕೊಡು ಜೀವನ ಸಾಗಿಸುತ್ತಿದ್ದಾರೆ.

ಇದನ್ನು ಓದಿ: ನಿಮ್ಮ ಪಾದದಲ್ಲಿ ಉರಿ ಅನುಭವವಾಗುತ್ತಿದೆಯೇ, ಈ ಮನೆಮದ್ದುಗಳನ್ನು ಟ್ರೈ ಮಾಡಿ

ಕವಿತಾ ಜೀವನದಲ್ಲಿ ದೊಡ್ಡ ತಿರುವು ಸಿಕ್ಕಿದ್ದು ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ವಸತಿ ಶಾಲೆಯ ಪ್ರವೇಶ ಪಡೆದ ನಂತರ. ಕಲಿಯುವ, ಕಲಿತು ನಲಿಯುವ ವಾತಾವರಣಕ್ಕೆ ಬಂದ ಕವಿತಾ ಸಿಕ್ಕ ಅವಕಾಶವನ್ನು ಶ್ರಮಪಟ್ಟು ಬಳಸಿಕೊಂಡು ಈ ಅಪರೂಪದ ಸಾಧನೆ ಮಾಡಿದ್ದಾರೆ. ಹಿಂದಿ ಭಾಷಾ ವಿಷಯದಲ್ಲಿ ೯೬ ಅಂಕ, ಇಂಗ್ಲೀಷ್‌ನಲ್ಲಿ ೮೮, ಕನ್ನಡದಲ್ಲಿ ೧೧೧ (೧೨೫ ಕ್ಕೆ) ಅಂಕ ಪಡೆದಿದ್ದಾಳೆ . ವಿಜ್ಞಾನದಲ್ಲಿ ಶಿಕ್ಷಣ ಮುಂದುವರೆಸಿ ಏನನ್ನಾದರು ಸಾಧಿಸುವ ಕನಸು ಹೊತ್ತಿರುವ ಕವಿತಾಳ ಈ ಪುಟ್ಟ ಯಶಸ್ಸು ಸುತ್ತಲಿನ ಊರಿನ ಮಕ್ಕಳಿಗೆ ಮಾದರಿ ಮತ್ತು ಸ್ಫೂರ್ತಿಯಾಗುತ್ತದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.