ಬಾಗಲಕೋಟೆ: ಪ್ರಿನ್ಸಿಪಾಲ್ ಆತ್ಮಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ವಹಿಸಿವಂತೆ ಆಗ್ರಹಿಸಿದ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 25, 2023 | 2:33 PM

ನಾನು ಅವರ ಕುಟುಂಬ ವರ್ಗದವರನ್ನು ಮಾತನಾಡಿಸಿದಾಗ, ‘ಪ್ರಿನ್ಸಿಪಾಲ್ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಸಮಸ್ಯೆ ಇರಲಿಲ್ಲ. ಅವರ ಮಗನಿಗೆ ಮೊನ್ನೆ ತಾನೇ ಎಂಬಿಬಿಎಸ್ ಸೀಟು ಸಿಕ್ಕು ಪ್ರವೇಶ ಮಾಡಿಸಿದ್ದಾರೆ. ಜೊತೆಗೆ ಮಗಳಿಗೆ ಡಿಸೆಂಬರ್​ನಲ್ಲಿ‌ ಮದುವೆ ಕೂಡ ಫಿಕ್ಸ್ ಆಗಿತ್ತು. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೆಂದು, ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ: ಪ್ರಿನ್ಸಿಪಾಲ್ ಆತ್ಮಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ವಹಿಸಿವಂತೆ ಆಗ್ರಹಿಸಿದ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​
ಮಾಜಿ ಬಿಜೆಪಿ ಶಾಸಕ, ಆತ್ಮಹತ್ಯೆ ಮಾಡಿಕೊಂಡ ಪ್ರಿನ್ಸಿಪಾಲ್​
Follow us on

ಬಾಗಲಕೋಟೆ, ಆ.25: ಹುನಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ (College Principal) ನಾಗರಾಜ್ ಮುದಗಲ್ ಅವರು ಆಗಸ್ಟ್ 22 ರಂದು ಕಾಲೇಜಿನಲ್ಲಿ ನಸುಕಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಬಿಐ(CBI) ತನಿಖೆಗೆ ವಹಿಸುವಂತೆ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇಳಕಲ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಆತ್ಮಹತ್ಯೆ ಬಗ್ಗೆ ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದು, ಪ್ರಕರಣ ತನಿಖೆಗೆ ಒಳಪಡಿಸಲು ಹೇಳಿದರು ಎಂದರು.

‘ನಾನು ಅವರ ಕುಟುಂಬ ವರ್ಗದವರನ್ನು ಮಾತನಾಡಿಸಿದಾಗ ‘ಪ್ರಿನ್ಸಿಪಾಲ್ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಸಮಸ್ಯೆ ಇರಲಿಲ್ಲ. ಅವರ ಮಗನಿಗೆ ಮೊನ್ನೆ ತಾನೇ ಎಂಬಿಬಿಎಸ್ ಸೀಟು ಸಿಕ್ಕು ಪ್ರವೇಶ ಮಾಡಿಸಿದ್ದಾರೆ. ಜೊತೆಗೆ ಮಗಳಿಗೆ ಡಿಸೆಂಬರ್​ನಲ್ಲಿ‌ ಮದುವೆ ಕೂಡ ಫಿಕ್ಸ್ ಆಗಿತ್ತು. ಅತ್ಯಂತ ಸಂಭ್ರಮದಲ್ಲಿದ್ದ ಕುಟುಂಬದ ಮುಖ್ಯಸ್ಥ. ಕಾಲೇಜಿನಲ್ಲೆ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಅವರ ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದಾರೆ ಎಂದರು.

ಇದನ್ನೂ ಓದಿ:ತುಮಕೂರು: ಮೇಲಾಧಿಕಾರಿಯಿಂದ ಕಿರುಕುಳ ಆರೋಪ; ಡೆತ್​ನೋಟ್ ಬರೆದಿಟ್ಟು ಸಹಾಯಕ ಸರ್ವೆಯರ್​ ಆತ್ಮಹತ್ಯೆಗೆ ಯತ್ನ

ಆತ್ಮಹತ್ಯೆಯ ಹಿಂದೆ ಏನೋ ಒಂದು ವ್ಯವಹಾರ ಕಾರಣವಿರುವ ಶಂಕೆ

ಹೌದು, ಆತ್ಮಹತ್ಯೆಯ ಹಿಂದೆ ಏನೋ ಒಂದು ವ್ಯವಹಾರ ಕಾರಣವಿರುವ ಶಂಕೆ ವ್ಯಕ್ತವಾಗಿದೆ. ಅತಿಸೂಕ್ಷ್ಮ ಮತಿಯವರಾಗಿದ್ದ ನಾಗರಾಜ್ ಮುದಗಲ್ ಅವರ ಆತ್ಮಹತ್ಯೆಯ ಹಿಂದೆ ಏನೋ ಕಾರಣ ಇದೆ. ಹೀಗಾಗಿ ಈ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​ ಆಗ್ರಹಿಸುತ್ತೇನೆ ಎಂದರು.

ಇನ್ನು ಇದೆ ವೇಳೆ ‘ಹುನಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕ್ಷೇತ್ರದ ತುಂಬೆಲ್ಲ ಇಸ್ಪೇಟ್ ಅಡ್ಡಗಳು ಓಪನ್ ಆಗಿವೆ. ಮೂರು ತಿಂಗಳಲ್ಲಿ ಜೂಜಾಟ ಕೇಂದ್ರ ತೆರೆಸಿದ್ದು, ಇವರ ಸಾಧನೆ ಎಂದು ಹಾಲಿ ಶಾಸಕರ ವಿರುದ್ದ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​ ಕಿಡಿಕಾರಿದರು. ಇವರು ಜನರ ಸೇವೆ ಮಾಡಲು ಬಂದಿದ್ದಾರೋ, ಲೂಟಿ ಮಾಡಲು ಬಂದಿದ್ದಾರೋ ಎಂದು ಮೂರು ತಿಂಗಳು ಸುಮ್ಮನಿದ್ದೆ. ಈಗ ಹುನಗುಂದ ಕ್ಷೇತ್ರದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಆರೋಪಿಸಿದರು.

ಯುವ ಸಮುದಾಯವನ್ನು ಜೂಜಾಟಕ್ಕೆ ತಳ್ಳುವ ವ್ಯವಸ್ಥಿತ ಸಂಚು ಕ್ಷೇತ್ರದಲ್ಲಿ ನಡೆದಿದೆ

ಹೌದು, ಇಳಕಲ್ ಪೊಲೀಸ್ ಠಾಣೆ ಹಿಂಭಾಗ, ಮುಖ್ಯರಸ್ತೆಗಳಲ್ಲೆ ಇಸ್ಪೇಟ್ ಅಡ್ಡ ತೆರೆದಿವೆ. ಇದಕ್ಕೆ ಕ್ಷೇತ್ರದ ಕಾಂಗ್ರೆಸ್​ ಶಾಸಕರಾದ ವಿಜಯಾನಂದ ಕಾಶಪ್ಪನವರ್​ ಬೆಂಗಾವಲು ಆಗಿ ನಿಂತಿದ್ದಾರೆ. ಹೀಗಾಗಿ ಪೊಲೀಸರು ಅಕ್ರಮ ಚಟುವಟಿಕೆ ತಡೆಯುತ್ತಿಲ್ಲ, ಅವರಿಗೆ ತಡೆಯಲು ಆಗಲ್ಲ. ಇನ್ನು ಹುನಗುಂದ ಕ್ಷೇತ್ರದಲ್ಲಿ ಪ್ರತ್ಯೇಕ ಇಲಾಖೆಗಳು ಆಗಿವೆ. ಅವರದ್ದೆ ಆದ ಪೊಲೀಸ್ ಠಾಣೆ, ಅವರದ್ದೆ ವಸೂಲಿ ಇಲಾಖೆ ಮಾಡಿಕೊಂಡು,
ಅದಕ್ಕೆ ಒಬ್ಬೊಬ್ಬರನ್ನು ಹೆಡ್ ಮಾಡಿದ್ದಾರೆ ಎಂದು ಕಿಡಿಕಾರಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ