AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ಮೇಲಾಧಿಕಾರಿಯಿಂದ ಕಿರುಕುಳ ಆರೋಪ; ಡೆತ್​ನೋಟ್ ಬರೆದಿಟ್ಟು ಸಹಾಯಕ ಸರ್ವೆಯರ್​ ಆತ್ಮಹತ್ಯೆಗೆ ಯತ್ನ

ತುಮಕೂರು ಜಿಲ್ಲಾಧಿಕಾರಿ ಆವರಣದಲ್ಲಿ ಸಹಾಯಕ ಸರ್ವೆಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಎಂಬಾತ​ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್​ನೋಟ್​ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರು: ಮೇಲಾಧಿಕಾರಿಯಿಂದ ಕಿರುಕುಳ ಆರೋಪ; ಡೆತ್​ನೋಟ್ ಬರೆದಿಟ್ಟು ಸಹಾಯಕ ಸರ್ವೆಯರ್​ ಆತ್ಮಹತ್ಯೆಗೆ ಯತ್ನ
ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ | Edited By: ಕಿರಣ್ ಹನುಮಂತ್​ ಮಾದಾರ್|

Updated on: Aug 23, 2023 | 10:05 PM

Share

ತುಮಕೂರು, ಆ.23: ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಸಹಾಯಕ ಸರ್ವೆಯರ್ (Assistant Surveyor)​ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು (Tumakur) ಜಿಲ್ಲಾಧಿಕಾರಿ ಆವರಣದಲ್ಲಿ ನಡೆದಿದೆ. ಮಹೇಶ್​ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. 6 ರಿಂದ7 ವರ್ಷ ಕೆಲಸ ಮಾಡುತ್ತಿರುವ ಸಹಾಯಕ ಸರ್ವೆಯರ್ ಮಹೇಶ್ ಮೇಲೆ ಸರ್ವೆ ಮೇಲ್ವಿಚಾರಕಿ ಕವಿತಾ ಎಂಬುವವರು ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಹೌದು, ಸರಿಯಾಗಿ ಕೆಲಸ ಮಾಡಿಲ್ಲ ಎಂದು ಮಹೇಶ್​ಗೆ ಟಾರ್ಚರ್​ ನೀಡುತ್ತಿದ್ದಾರೆ ಎಂದು ಮಹೇಶ್​ ಆರೋಪಿಸಿ ಡೆತ್​ನೋಟ್ ಬರೆದಿಟ್ಟು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಷ ಸೇವಿಸಿ​​ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಈ ಘಟನೆ ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರತಿಭಾ ಕಾರಂಜಿ ಕಾರ್ಯಕ್ರಮ ವೇಳೆ ಎಡವಟ್ಟು! ಪೆಟ್ರೋಲ್ ಬಿದ್ದು ವಿದ್ಯಾರ್ಥಿಗೆ ಸುಟ್ಟಗಾಯ

ರಾಮನಗರ: ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ವೇಳೆ ಪೆಟ್ರೋಲ್ ಬಿದ್ದು ವಿದ್ಯಾರ್ಥಿಯೊರ್ವನಿಗೆ ಸುಟ್ಟಗಾಯಗಳಾಗಿವೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರೀತಮ್ (12)ಗಾಯಗೊಂಡ ವಿದ್ಯಾರ್ಥಿ. 5 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಪ್ರೀತಮ್, ವೀರಗಾಸೆ ಪ್ರದರ್ಶನ ವೇಳೆ ಪೆಟ್ರೋಲ್ ಬಳಕೆ ಮಾಡಿದ್ದರು. ಈ ವೇಳೆ ಈ ಅವಘಡ ಸಂಭವಿಸಿದ್ದು, ಕಣ್ಣು, ಮುಖ ಹಾಗೂ ತಲೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಘಟನೆ ಬಳಿಕ ವಿದ್ಯಾರ್ಥಿಗಳ ಕೈಯಲ್ಲಿ ಪೆಟ್ರೋಲ್ ಬಳಸಲು ಅನುಮತಿ ನೀಡಿದಕ್ಕೆ ಶಿಕ್ಷಕರ ವಿರುದ್ದ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಬೆಡ್​​ ರೂಮ್​ನಲ್ಲಿ ಯುವಕನ ಜೊತೆ ಹೆಂಡ್ತಿ ಕಂಡು ಹೌಹಾರಿದ ಪತಿ, ಡೆತ್​ನೋಟ್ ನಲ್ಲಿ ಭಾವುಕ ನುಡಿ ಬರೆದಿಟ್ಟು ಬಿಬಿಎಂಪಿ ನೌಕರ ಆತ್ಮಹತ್ಯೆ

ಬೆಸ್ಕಾಂ ಎಇಇ ಮೇಲೆ‌ ಲೋಕಾಯುಕ್ತ ದಾಳಿ

ತುಮಕೂರು: ಜಿಲ್ಲೆಯ ಕೊರಟಗೆರೆ ಬೆಸ್ಕಾಂ ಎಇಇ ಅರಸರಾಜು ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರೈತರ ಬಳಿ ಸದಾ ಲಂಚಕ್ಕಾಗಿ ಪೀಡಿಸುತ್ತಿದ್ದ ಆರೋಪದಡಿ ದಾಳಿ ಮಾಡಲಾಗಿದ್ದು, ಗುತ್ತಿಗೆದಾರ ಹರೀಶ್ ಎಂಬುವವರಿಂದ 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಅರಸರಾಜು ಬಳಿಯಿದ್ದ ಸುಮಾರು 50 ಸಾವಿರ ನಗದು ವಶಕ್ಕೆ ಪಡೆಯಲಾಗಿದ್ದು, ಅರಸರಾಜು ಅವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ
ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ