ಮಗನ ಅನಾರೋಗ್ಯದಿಂದ ಜಿಗುಪ್ಸೆಗೊಂಡ ತಾಯಿ: ಜಲಾಶಯಕ್ಕೆ ಜಿಗಿದು ಆತ್ಮಹತ್ಯೆಗೆ ಶರಣು

Belagavi News: ಮಗನ ಅನಾರೋಗ್ಯ ಜಿಗುಪ್ಸೆಗೊಂಡ ತಾಯಿ ಸವದತ್ತಿ ತಾಲೂಕಿನ ಗೊರವನಕೊಳ್ಳದ ಬಳಿಯ ನವಿಲು ತೀರ್ಥ ಜಲಾಶಯ ಹಿನ್ನೀರಿಗೆ ಜಗಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಭಾನುವಾರ ನಡೆದಿದೆ. ಮಗನ ಆರೈಕೆ ಮಾಡಲು ಆಸ್ಟ್ರೇಲಿಯಾದಿಂದ ತಾಯಿ ಬಂದಿದ್ದರು ಎನ್ನಲಾಗುತ್ತಿದ್ದು, ಮಗನ ಅನಾರೋಗ್ಯ ಕಂಡು ಚಿಂತೆ, ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಗನ ಅನಾರೋಗ್ಯದಿಂದ ಜಿಗುಪ್ಸೆಗೊಂಡ ತಾಯಿ: ಜಲಾಶಯಕ್ಕೆ ಜಿಗಿದು ಆತ್ಮಹತ್ಯೆಗೆ ಶರಣು
ಮೃತ ತಾಯಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 21, 2023 | 4:29 PM

ಬೆಳಗಾವಿ, ಆಗಸ್ಟ್​ 21: ಪುತ್ರನಿಗೆ ಅನಾರೋಗ್ಯ ಹಿನ್ನೆಲೆ ಜಿಗುಪ್ಸೆಗೊಂಡು ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಜಿಗಿದು ತಾಯಿ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಸವದತ್ತಿ ತಾಲೂಕಿನ ಗೊರವನಕೊಳ್ಳದ ಬಳಿ ಡ್ಯಾಂ ಹಿನ್ನೀರಿನಲ್ಲಿ ನಿನ್ನೆ ನಡೆದಿದ್ದು, ಮಹಿಳೆಯ ಶವ ಪತ್ತೆಯಾಗಿತ್ತು. ಧಾರವಾಡ ನಗರದ ಸಪ್ತಾಪುರ ನಿವಾಸಿ ಪ್ರಿಯದರ್ಶಿನಿ ಲಿಂಗರಾಜ್ ಪಾಟೀಲ್(40) ಮೃತ ತಾಯಿ. ಪ್ರೀಯದರ್ಶಿನಿ ಪತಿ ಲಿಂಗರಾಜ್​ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಇಂಜಿನೀಯರ್ ಆಗಿದ್ದಾರೆ.

ಮಗನ ಆರೈಕೆ ಮಾಡಲು ಆಸ್ಟ್ರೇಲಿಯಾದಿಂದ ಆಗಸ್ಟ್ 18ರಂದು ತಾಯಿ ಪ್ರೀಯದರ್ಶಿನಿ ಆಗಮಿಸಿದ್ದರು. ಮಗ ಅಮರ್ಥ್ಯನ ಅನಾರೋಗ್ಯ ಕಂಡು ಚಿಂತೆ ಹಚ್ಚಿಕೊಂಡು, ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸವದತ್ತಿ ಠಾಣೆಯಲ್ಲಿ ಪ್ರಿಯದರ್ಶಿನಿ ತಂದೆ ಸುಬರಾಯ ದೇಸಾಯಿ ಆತ್ಮಹತ್ಯೆ ಅಂತಾ ಕೇಸ್ ದಾಖಲಿಸಿದ್ದಾರೆ.

ದರ್ಗಾ ದರ್ಶನಕ್ಕೆ ಬಂದಿದ್ದ ಯುವಕ ನೀರುಪಾಲು

ಚಿಕ್ಕೋಡಿ: ದರ್ಗಾ ದರ್ಶನಕ್ಕೆ ಬಂದಿದ್ದ ಯುವಕ ನೀರುಪಾಲಾಗಿರುವಂತಹ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹೊರವಲಯ ಗಡ್ಡೆ ಪ್ರದೇಶ ಬಳಿ ಕೃಷ್ಣಾ ನದಿ ತೀರದಲ್ಲಿ ನಿನ್ನೆ ಸಂಜೆ ನಡೆದಿದೆ. ಬೆಳಗಾವಿಯ ಗಾಂಧಿನಗರ ನಿವಾಸಿ ಹುಸೇನ್ ಅರಕಟ್ಟಿ ಮೃತ ಯುವಕ. ಕುಟುಂಬಸ್ಥರು, ಸ್ನೇಹಿತರ ಜೊತೆ ಕುಡಚಿ ಹೊರವಲಯ ಗಡ್ಡೆ ಪ್ರದೇಶದ ಹಜರತ್ ಶೇಖ್ ಶಿರಾಜುದ್ದೀನ್ ಜುನೈದಿ ದರ್ಗಾಗೆ ಆಗಮಿಸಿದ್ದರು. ನದಿ ತೀರದಲ್ಲಿ ಬಾಲಕರಿಬ್ಬರ ಜೊತೆ ಕುಳಿತಿದ್ದರು. ಈ ವೇಳೆ ಆಯತಪ್ಪಿ ಮೂವರು ನದಿಗೆ ಬಿದಿದ್ದು, ಸ್ಥಳೀಯರಿಂದ ಇಬ್ಬರು ಬಾಲಕರ ರಕ್ಷಣೆ ಮಾಡಲಾಗಿದೆ. ಹುಸೇನ್​ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವಾಟ್ಸಾಪ್ ವಿಡಿಯೋ ಕಾಲ್ ರಿಸೀವ್ ಮಾಡಿ 35 ಸಾವಿರ ರೂ. ಕಳೆದುಕೊಂಡ ನಿವೃತ್ತ ಸರ್ಕಾರಿ ನೌಕರ

ನಿನ್ನೆ ಸಂಜೆ ಕತ್ತಲಾದ ಬಳಿಕ ಶೋಧಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕುಡಚಿ ಪೊಲೀಸ್​ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶೋಧಕಾರ್ಯ ನಡೆಯುತ್ತಿದೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಲಾರಿ ಹರಿದು ಇಬ್ಬರು ಬೈಕ್​ ಸವಾರರ ದುರ್ಮರಣ: ಚಾಲಕ ಪರಾರಿ 

ಹಾವೇರಿ: ಲಾರಿ ಹರಿದು ಇಬ್ಬರು ಬೈಕ್​ ಸವಾರರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ಮೂರು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಿಂಗಪ್ಪ(40), ಶರೀಫ್(45) ಮತೃ ಬೈಕ ಸವಾರರು.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯೆಂದು ಪ್ರಚೋದನಕಾರಿ ಭಾಷಣ ಆರೋಪ: ಹಿಂದೂ ಜಾಗರಣೆ ವೇದಿಕೆ ಮುಖಂಡನ ಬಂಧನ

ಮೃತರು ಶಿಗ್ಗಾಂವಿ ತಾಲೂಕಿನ ಚಾಕಾಪುರ ಗ್ರಾಮದವರು. ಬೈಕ್ ಸವಾರ ವಾಹನವೊಂದರ ಓವರ್​ಟೇಕ್​ ಮಾಡುತ್ತಿದ್ದು, ಈ ವೇಳೆ ಹಿಂದಿನಿಂದ ಬಂದ ಟ್ರಕ್​ ಡಿಕ್ಕಿ ಹೊಡೆದಿದೆ. ಬೈಕ್​ನಲ್ಲಿದ್ದ ಇಬ್ಬರು ಸವಾರರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಲಾರಿ ಸಮೇತ ಪರಾರಿಯಾಗಿರುವ ಚಾಲಕನಿಗಾಗಿ ಹುಡುಕಾಟ ನಡೆದಿದ್ದು, ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:22 pm, Mon, 21 August 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?