ACB: ಈ ಹಿಂದೆ ಎಸಿಬಿ ದಾಳಿಗೆ ಒಳಗಾಗಿದ್ದ ಬಾಗಲಕೋಟೆ ಆರ್ ಟಿಒ ಅಧಿಕಾರಿ ಸಸ್ಪೆಂಡ್, ಕಾರಣ ಇಂಟರೆಸ್ಟಿಂಗ್ ಆಗಿದೆ!

Bagalkot RTO: ಬಾಗಲಕೋಟೆಯ ಆರ್ ಟಿ ಒ ಅಧಿಕಾರಿ ಯಲ್ಲಪ್ಪ ಪಡಸಾಲಿ 4 ಕೋಟಿ 11 ಲಕ್ಷ 28 ಸಾವಿರದ 372 ರೂ ಹೆಚ್ಚುವರಿ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದಾಯಕ್ಕಿಂತ 239.11 ಪಟ್ಟು ಆಸ್ತಿ ಹೆಚ್ಚುವರಿಯಾಗಿರುವ ಹಿನ್ನೆಲೆ ಅಮಾನತು ಮಾಡಲಾಗಿದೆ.

ACB: ಈ ಹಿಂದೆ ಎಸಿಬಿ ದಾಳಿಗೆ ಒಳಗಾಗಿದ್ದ ಬಾಗಲಕೋಟೆ ಆರ್ ಟಿಒ ಅಧಿಕಾರಿ ಸಸ್ಪೆಂಡ್, ಕಾರಣ ಇಂಟರೆಸ್ಟಿಂಗ್ ಆಗಿದೆ!
ಈ ಹಿಂದೆ ಎಸಿಬಿ ದಾಳಿಗೆ ಒಳಗಾಗಿದ್ದ ಬಾಗಲಕೋಟೆ ಆರ್ ಟಿಒ ಅಧಿಕಾರಿ ಸಸ್ಪೆಂಡ್, ಕಾರಣ ಇಂಟರೆಸ್ಟಿಂಗ್ ಆಗಿದೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 21, 2022 | 4:02 PM

ಬಾಗಲಕೋಟೆ: ಈ ಹಿಂದೆ ಭ್ರಷ್ಟಾಚಾರ ವಿರೋಧಿ ದಳದಿಂದ ದಾಳಿಗೆ (ACB raid) ಒಳಗಾಗಿದ್ದ ಬಾಗಲಕೋಟೆಯ ಆರ್ ಟಿ ಒ ಅಧಿಕಾರಿಯನ್ನು ಅಮಾನತು ‌ಮಾಡಿ (Suspend) ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಾರಿಗೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರಿಂದ ಈ ಆದೇಶ ಹೊರಬಿದ್ದಿದೆ. ಯಲ್ಲಪ್ಪ ಪಡಸಾಲಿ ಅಮಾನತ್ತಾದ ಆರ್ ಟಿ ಒ ಅಧಿಕಾರಿ (Bagalkot RTO).

ಅಧಿಕಾರಿಯ ಸಸ್ಪೆಂಡ್ ಹಿಂದಿರುವ ಕಾರಣ ಇಂಟರೆಸ್ಟಿಂಗ್:

ಕಳೆದ ಜೂನ್ 17, 2022 ರಂದು ಯಲ್ಲಪ್ಪ ಪಡಸಾಲಿ ಅವರಿಗೆ ಸೇರಿದ ಧಾರವಾಡ ಮತ್ತು ಬಾಗಲಕೋಟೆಯಲ್ಲಿರುವ ಮನೆಗಳ‌ ಮೇಲೆ ಧಾರವಾಡ ಎಸಿಬಿ ತಂಡದಿಂದ ದಾಳಿ ನಡೆದಿತ್ತು. ಮೇಲ್ನೋಟಕ್ಕೆ ಆದಾಯಕ್ಕಿಂತ ಅಧಿಕ ಆಸ್ತಿ ಇರೋದು ಸಾಬೀತಾದ ಹಿನ್ನೆಲೆ ಅಮಾನತು ಸರ್ಕಾರವು ಭ್ರಷ್ಟ ಅಧಿಕಾರಿಯನ್ನು ಮನೆಗೆ ಕಳಿಸಿದೆ. ಕರ್ತವ್ಯದ ಮೇಲಿದ್ದರೆ ಸಾಕ್ಷ್ಯ ನಾಶ ಸಾಧ್ಯತೆ ಹಿನ್ನೆಲೆ ಅಮಾನತು ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಬಾಗಲಕೋಟೆಯ ಆರ್ ಟಿ ಒ ಅಧಿಕಾರಿ ಯಲ್ಲಪ್ಪ ಪಡಸಾಲಿ 4 ಕೋಟಿ 11 ಲಕ್ಷ 28 ಸಾವಿರದ 372 ರೂ ಹೆಚ್ಚುವರಿ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದಾಯಕ್ಕಿಂತ 239.11 ಪಟ್ಟು ಆಸ್ತಿ ಹೆಚ್ಚುವರಿಯಾಗಿರುವ ಹಿನ್ನೆಲೆ ಅಮಾನತು ಮಾಡಲಾಗಿದೆ. ಯಲ್ಲಪ್ಪ ಪಡಸಾಲಿ ಒಟ್ಟು ಸ್ಥಿರಾಸ್ತಿಗಳ ಮೌಲ್ಯ 5 ಕೋಟಿ 3 ಲಕ್ಷ 28 ಸಾವಿರದ 373 ರೂ. ಒಟ್ಟು ಖರ್ಚುಗಳ ಮೊತ್ತ 80 ಲಕ್ಷ. ಬಲ್ಲ ‌ಮೂಲಗಳ ಆದಾಯದ ಅಂದಾಜು ಮೌಲ್ಯ 1 ಕೋಟಿ 72 ಲಕ್ಷ ರೂಪಾಯಿ.

ಕೋಳಿ ಫಾರ್ಮ್ ನಿರ್ಮಾಣಕ್ಕೆ ಅನುಮತಿ ನೀಡಲು ಲಂಚ ಬೇಡಿಕೆ: ಪಿಡಿಒ, ಬಿಲ್​ ಕಲೆಕ್ಟರ್​​ಗೆ 4 ವರ್ಷ ಜೈಲು

ತುಮಕೂರು: ಕೋಳಿ ಫಾರ್ಮ್ ನಿರ್ಮಾಣಕ್ಕೆ ಎನ್​ಒಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ, ಪಿಡಿಒ ಮತ್ತು ಬಿಲ್​ ಕಲೆಕ್ಟರ್​​ಗೆ ತುಮಕೂರಿನ 7ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಶಿರಾ ತಾಲೂಕಿನ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಡಿ.ಎಂ.ನಾಗರಾಜು ಮತ್ತು ಬಿಲ್‌ ಕಲೆಕ್ಟರ್ ಶಿವಣ್ಣ 2018 ರಲ್ಲಿ ಕೋಳಿ ಫಾರಂ ನಿರ್ಮಾಣಕ್ಕೆ ಎನ್​ಒಸಿ ಕೊಡಲು 10 ಸಾವಿರ ಲಂಚ ಕೇಳಿದ್ದರು.

ಲಂಚ ಪಡೆಯಲೆಂದು ಬಿಲ್‌ ಕಲೆಕ್ಟರ್ ಶಿವಣ್ಣ ತೆರಳಿದ್ದ, ಈ ವೇಳೆ ಶಿವಣ್ಣ ರೇಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದನು. ತನಿಕೆ ಬಳಿಕ ಪ್ರಕರಣ ಸಾಭೀತಾಗಿದ್ದು, ಬಿಲ್‌ ಕಲೆಕ್ಟರ್ ಶಿವಣ್ಣ ಮತ್ತು ಪಿಡಿಒ ಡಿ.ಎಂ.ನಾಗರಾಜುಗೆ 4 ವರ್ಷ ಜೈಲು ಶಿಕ್ಷೆ, 30 ಸಾವಿರ ದಂಡ ವಿಧಿಸಿ ನ್ಯಾಯಮೂರ್ತಿ ಟಿ.ಪಿ ರಾಮೇಲಿಂಗೇಗೌಡ ರಿಂದ ಶಿಕ್ಷೆ ಪ್ರಕಟ ಮಾಡಿದ್ದಾರೆ.

RTO ನಿವೃತ್ತ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ, 63 ಲಕ್ಷ ದಂಡ!

ಬೆಳಗಾವಿ: ನಿವೃತ್ತಿಯಾಗಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 63 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಬೆಳಗಾವಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ನಿವೃತ್ತ ಸಾರಿಗೆ ಅಧಿಕಾರಿ ಪಿ. ಶಾಂತಕುಮಾರ ಶಿಕ್ಷೆಗೆ ಒಳಗಾದ ನಿವೃತ್ತ ಅಧಿಕಾರಿ. ಶಾಂತಕುಮಾರ ಪ್ರಸ್ತುತ ಬೆಳಗಾವಿ ‌ನಗರದ ಆಂಜನೇಯ ನಗರದಲ್ಲಿ ವಾಸವಾಗಿದ್ದಾರೆ. ಶಾಂತಕುಮಾರ ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್‌ದವರು.

ಬೀದರ ಜಿಲ್ಲೆಯ ಹುಮನಾಬಾದ್ ಆರ್‌ಟಿಓ ಆಗಿದ್ದಾಗ ಭ್ರಷ್ಟಾಚಾರ ನಡೆಸಿದ್ದರು. ತಮ್ಮ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿಕೊಂಡಿದ್ದರು. ಈ ಸಂಬಂಧ ಗುಪ್ತ ಮಾಹಿತಿ ಕಲೆ ಹಾಕಿದ್ದ ಲೋಕಾಯುಕ್ತ ಎಸ್ಪಿ ಆರ್.ಕೆ. ಪಾಟೀಲ್‌ ಅವರು ಶಾಂತಕುಮಾರ ಮನೆಯ ಮೇಲೆ ದಾಳಿ ಮಾಡಿ, ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು.

ಲೋಕಾಯುಕ್ತ ಅಧಿಕಾರಿಗಳು 2010 ಮೇ 3 ರಂದು ಪಿ. ಶಾಂತಕುಮಾರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ನಡೆಸಿದ್ದ ಬೆಳಗಾವಿ ಲೋಕಾಯುಕ್ತ ಎಸ್ಪಿ ಆರ್. ಬಿ. ಹವಾಲ್ದಾರ್ ಅವರು 1.14 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಮೋಹನ ಪ್ರಭು ಅವರು ಸುದೀರ್ಘ ವಿಚಾರಣೆಯ ಬಳಿಕ ಇಂದು ತೀರ್ಪು ಪ್ರಕಟಿಸಿದ್ದಾರೆ. ದಂಡ ಪಾವತಿಸದಿದ್ರೆ ಆರೋಪಿ ಅಥವಾ ಪತ್ನಿಯ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಸಹ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Wed, 21 September 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್