ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಆಯ್ಕೆ ಕಗ್ಗಂಟು: ಅಧ್ಯಕ್ಷ ಸ್ಥಾನಕ್ಕೆ ಒಳಗೊಳಗೆ ಪೈಪೋಟಿ ಶುರು
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಇದಕ್ಕೆ ಒಬ್ಬ ಅದ್ಯಕ್ಷ ಉಪಾಧ್ಯಕ್ಷ ಸದಸ್ಯರು ಆಯ್ಕೆ ಆಗಬೇಕು. ಆದರೆ ಕಾಂಗ್ರೆಸ್ ಸರಕಾರ ಬಂದು ಮೂರು ತಿಂಗಳಾದರೂ ಇಂದಿಗೂ ಆಡಳಿತ ಮಂಡಳಿ ರಚನೆಯಾಗಿಲ್ಲ. ಇದಕ್ಕೆ ಕಾರಣ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಆಯ್ಕೆ ಕಗ್ಗಂಟಾಗಿದೆ.

ಬಾಗಲಕೋಟೆ, ಸೆಪ್ಟೆಂಬರ್ 3: ಅದು ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಮುಳುಗಡೆಯಾದ ನಗರ. ಇದೇ ಕಾರಣಕ್ಕೆ ಅದನ್ನು ಸ್ಥಳಾಂತರ ಮಾಡೋದಕ್ಕೆ ಅಂತಾನೆ ಪ್ರಾಧಿಕಾರವನ್ನು ಸ್ಥಾಪನೆ ಮಾಡಲಾಗಿದೆ. ಅದಕ್ಕೊಬ್ಬ ಅಧ್ಯಕ್ಷ ಹಾಗೂ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿ ಅಸ್ತಿತ್ವದಲ್ಲಿದೆ. ಆದರೆ ಹೊಸ ಸರಕಾರ (Congress) ಬಂದು ಮೂರು ತಿಂಗಳಾದರೂ ಆಡಳಿತ ಮಂಡಳಿ ರಚನೆಯಾಗಿಲ್ಲ. ಇದರಿಂದ ಪ್ರಾಧಿಕಾರ ಆಡಳಿತ ಮಂಡಳಿ ಇಲ್ಲದೆ ಅನಾಥವಾದಂತಾಗಿದೆ. ಈ ಮಧ್ಯೆ ಅದಿಬ್ಬರು ನಾಯಕರು ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಒಳಗೊಳಗೆ ಪೈಪೋಟಿ ಶುರು ಮಾಡಿದ್ದಾರೆ.
ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಅನುಗುಣವಾಗಿ ಸ್ಥಳಾಂತರವಾದ ಜಿಲ್ಲೆ. ಹಳ್ಳಿಗಳು ಅಷ್ಟೇ ಅಲ್ಲದೆ ಬಾಗಲಕೋಟೆ ಇಡೀ ನಗರ ಸ್ಥಳಾಂತರಗೊಂಡಿದೆ. ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಸ್ಥಳಾಂತರಗೊಂಡ ನಗರ ಬಾಗಲಕೋಟೆ. ಇದರಿಂದಲೇ ಬಾಗಲಕೋಟೆಯನ್ನು ಮುಳುಗಡೆ ನಗರ ಅಂತ ಕೂಡ ಕರೆಯುತ್ತಾರೆ. ಬಾಗಲಕೋಟೆ ಸ್ಥಳಾಂತರ ಸಂತ್ರಸ್ತರಿಗೆ ಪುನರ್ವಸತಿ, ಪುನರ್ನಿರ್ಮಾಣಕ್ಕಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಇದಕ್ಕೆ ಒಬ್ಬ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಆಯ್ಕೆ ಆಗಬೇಕು. ಆದರೆ ಕಾಂಗ್ರೆಸ್ ಸರಕಾರ ಬಂದು ಮೂರು ತಿಂಗಳಾದರೂ ಇಂದಿಗೂ ಆಡಳಿತ ಮಂಡಳಿ ರಚನೆಯಾಗಿಲ್ಲ. ಇದಕ್ಕೆ ಕಾರಣ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ(ಬಿಟಿಡಿಎ)ಅಧ್ಯಕ್ಷ ಆಯ್ಕೆ ಕಗ್ಗಂಟು.
ಬಿಟಿಡಿಎ ಅಧ್ಯಕ್ಷ ಸ್ಥಾನಕ್ಕೆ ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ ಶತಪ್ರಯತ್ನ ನಡೆಸಿದ್ದಾರೆ. ಬಿಟಿಡಿಎ ಪ್ರಾಧಿಕಾರಕ್ಕೆ ಕೋಟಿ ಕೋಟಿ ಅನುದಾನ ಬರುತ್ತಿದ್ದು, ಬಿಟಿಡಿಎ ಕೂಡ. ಚಿನ್ನದ ಮೊಟ್ಟೆ ಇಡುವ ಪ್ರಾಧಿಕಾರವಾಗಿದೆ. ಇದರಿಂದ ಸಚಿವ ಸ್ಥಾನ ಸಿಗದ ಹೆಚ್ ವೈ ಮೇಟಿ ಹೇಗಾದರೂ ಮಾಡಿ ಬಿಟಿಡಿಎ ಅಧ್ಯಕ್ಷ ಆಗಲು ತಯಾರಿ ನಡೆಸಿದ್ದಾರೆ. ಆದರೆ ಮೇಲ್ಮಾತಿಗೆ ಬಿಟಿಡಿಎ ಅಧ್ಯಕ್ಷ ಸ್ಥಾನ ಕೊಟ್ಟರೆ ಒಳ್ಳೆಯ ಕೆಲಸ ಮಾಡುತ್ತೇನೆ. ಕೊಡದೆ ಇದ್ದರೆ ಇಲ್ಲ ಎನ್ನುತ್ತಲೇ ನಾನು ಬಿಟಿಡಿಎ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಕ್ಲೂ ಕೊಟ್ಟಿದ್ದಾರೆ.
ಇದನ್ನೂ ಓದಿ: ಶಿಸ್ತು, ಶಿಕ್ಷಣಕ್ಕೆ ಹೆಸರುವಾಸಿಯಾದ ಬಾಗಲಕೋಟೆ ಸರ್ಕಾರಿ ಶಾಲೆ: ನಿಜಕ್ಕೂ ಬಡ ಮಕ್ಕಳಿಗೆ ಇದು ಅಕ್ಷರದಾಸೋಹ
ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿ ನೇಮಕವಾಗದ ಹಿನ್ನೆಲೆ ಬಿಟಿಡಿಎ ಕಾರ್ಯಕ್ಕೆ ಗ್ರಹಣ ಬಡಿದಂತಾಗಿದೆ. ಸಮಯಕ್ಕೆ ಸರಿಯಾಗಿ ಸಂತ್ರಸ್ತರ ಕೆಲಸಗಳು ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆದರೆ ಇಷ್ಟೆಲ್ಲ ಹೊರತಾಗಿಯೂ ಸರಕಾರ ಬಿಟಿಡಿಎ ಆಡಳಿತ ಮಂಡಳಿ ರಚನೆ ಮಾಡುತ್ತಿಲ್ಲ. ಬಿಟಿಡಿಎ ಅಧ್ಯಕ್ಷ ಸ್ಥಾನದ ಇನ್ನೊಬ್ಬ ಪ್ರಬಲ ಪ್ರತಿಸ್ಪರ್ಧಿ ಪ್ರಕಾಶ್ ತಪಶೆಟ್ಟಿಯಾಗಿದ್ದಾರೆ. ಪ್ರಕಾಶ್ ತಪಶೆಟ್ಟಿ ಈ ಹಿಂದೆ ಬಿಜೆಪಿಯಲ್ಲಿದ್ದವರು.
ಒಂದು ಹಂತದಲ್ಲಿ ಬಿಟಿಡಿಎ ಅಧಕ್ಷ ಸ್ಥಾನ ನನಗೆ ಕೊಡಬೇಕೆಂದು ಕಂಡೀಷ ಮೂಲಕವೇ ಕಾಂಗ್ರೆಸ್ಗೆ ಪುನಃ ಸೇರ್ಪಡೆಯಾಗಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಹೆಚ್ ವೈ ಮೇಟಿ ಅವರ ಪರ ಪ್ರಚಾರ ಮಾಡಿದ್ದಾರೆ. ಮೇಟಿ ಗೆಲುವಿನಲ್ಲಿ ಪ್ರಕಾಶ್ ತಪಶೆಟ್ಡಿ ಪಾತ್ರ ಕೂಡ ಇದೆ. ಪ್ರಕಾಶ್ ತಪಶೆಟ್ಟಿ ನಾನು ಬಿಟಿಡಿಎ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ನನಗೆ ಹೆಚ್ ವೈ ಮೇಟಿ, ಮಾಜಿ ಸಚಿವ ಅಜಯಕುಮಾರ ಸರನಾಯಕ ಸೇರಿದಂತೆ ಪ್ರಮುಖ ನಾಯಕರ ಸಮ್ಮುಖದಲ್ಲೇ ಮಾತು ಕೊಡಲಾಗಿದೆ.
ಇದನ್ನೂ ಓದಿ: ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ರೈತರ ಆಕ್ರೋಶ ಎದುರಿಸಬೇಕಾಯಿತು
ಈ ವಿಷಯ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ಇದೆ. ಆದ ಕಾರಣ ನನಗೆ ಬಿಟಿಡಿಎ ಅಧ್ಯಕ್ಷ ಸ್ಥಾನ ಕೊಡಬೇಕು. ನಾನು ಈ ಹಿಂದೆ ಬಿಟಿಡಿಎ ಅಧ್ಯಕ್ಷನಾಗಿ ಕೆಲಸ ಮಾಡಿದ ಕಾರಣ ಸಂತ್ರಸ್ತರಿಗೆ ಅನುಕೂಲಕರವಾದ ಕಾರ್ಯ ಮಾಡುತ್ತೇನೆ ಅಂತಿದ್ದಾರೆ.
ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾಗುತ್ತಾ ಬಂದರೂ ಬಿಟಿಡಿಎಗೆ ಸಾರಥಿಯೂ ಇಲ್ಲ, ಸೈನಿಕರು ಇಲ್ಲ. ಆದಷ್ಟು ಬೇಗ ಸರಕಾರ ಬಿಟಿಡಿಎ ಆಡಳಿತ ಮಂಡಳಿ ರಚನೆ ಮಾಡಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.