AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಸ್ತು, ಶಿಕ್ಷಣಕ್ಕೆ ಹೆಸರುವಾಸಿಯಾದ ಬಾಗಲಕೋಟೆ ಸರ್ಕಾರಿ ಶಾಲೆ: ನಿಜಕ್ಕೂ ಬಡ ಮಕ್ಕಳಿಗೆ ಇದು ಅಕ್ಷರದಾಸೋಹ

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಚಿಕನಾಳ‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಶಿಸ್ತು ಶಿಕ್ಷಣ ಸಂಸ್ಕಾರದಿಂದ ಹೆಸರುವಾಸಿಯಾಗಿದೆ. ಒಂದರಿಂದ 8 ರವರೆಗೆ ಇಲ್ಲಿ ಒಟ್ಟು 280 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯಲ್ಲಿನ ಶಿಕ್ಷಣ, ಶಿಸ್ತು, ಡಿಜಿಟಲ್‌ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ಸ್ವಚ್ಚತೆ ಎಲ್ಲದರಲ್ಲೂ ಮುಂದೆ ಇದ್ದು ಸರಕಾರಿ ಶಾಲೆ ಖಾಸಗಿ ಶಾಲೆಗರ ಸೆಡ್ಡು ಹೊಡೆಯುತ್ತಿದೆ.

ಶಿಸ್ತು, ಶಿಕ್ಷಣಕ್ಕೆ ಹೆಸರುವಾಸಿಯಾದ ಬಾಗಲಕೋಟೆ ಸರ್ಕಾರಿ ಶಾಲೆ: ನಿಜಕ್ಕೂ ಬಡ ಮಕ್ಕಳಿಗೆ ಇದು ಅಕ್ಷರದಾಸೋಹ
ಬಾಗಲಕೋಟೆ ಸರ್ಕಾರಿ ಶಾಲೆ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Sep 02, 2023 | 8:15 PM

Share

ಬಾಗಲಕೋಟೆ, ಸೆಪ್ಟೆಂಬರ್​ 2: ಸರಕಾರಿ ಶಾಲೆಗಳಲ್ಲಿ (government school) ಶಿಸ್ತು ಇರೋದಿಲ್ಲ. ಶಿಕ್ಷಣ ಸರಿಯಿಲ್ಲ ಅಂತ ಎಷ್ಟೊ ಜನ ಖಾಸಗಿ ಶಾಲೆಗಳ ಕಡೆ ಮುಖ ಮಾಡುತ್ತಾರೆ. ಆದರೆ ಇಂದಿಗೂ ಗ್ರಾಮೀಣ ಮಟ್ಟಣಲ್ಲಿ ಸರಕಾರಿ ಕನ್ನಡ ಶಾಲೆಗಳೇ ಮಕ್ಕಳಿಗೆ ದಾರಿ ದೀಪವಾಗಿವೆ. ಅದೊಂದು ಗ್ರಾಮದ ಸರಕಾರಿ ಶಾಲೆ ಶಿಸ್ತು, ಶಿಕ್ಷಣ ಸಂಸ್ಕಾರ ಸ್ವಚ್ಚತೆಗೆ ಹೆಸರಾಗಿದೆ. ರಾಜ್ಯದ ಹತ್ತು ಶಿಸ್ತುಬದ್ದ ಶಾಲೆಯಲ್ಲಿ ಅದು ಕೂಡ ಒಂದಾಗಿದ್ದು ಬಡ ಮಕ್ಕಳಿಗೆ ಅಕ್ಷರದಾಸೋಹ ನೀಡುತ್ತಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಚಿಕನಾಳ‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಶಿಸ್ತು ಶಿಕ್ಷಣ ಸಂಸ್ಕಾರದಿಂದ ಹೆಸರುವಾಸಿಯಾಗಿದೆ. ಒಂದರಿಂದ 8 ರವರೆಗೆ ಇಲ್ಲಿ ಒಟ್ಟು 280 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯಲ್ಲಿನ ಶಿಕ್ಷಣ, ಶಿಸ್ತು, ಡಿಜಿಟಲ್‌ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ಸ್ವಚ್ಚತೆ ಎಲ್ಲದರಲ್ಲೂ ಮುಂದೆ ಇದ್ದು ಸರಕಾರಿ ಶಾಲೆ ಖಾಸಗಿ ಶಾಲೆಗರ ಸೆಡ್ಡು ಹೊಡೆಯುತ್ತಿದೆ. ಗ್ರಾಮದ ಯಾವುದೇ ಒಬ್ಬ ವಿದ್ಯಾರ್ಥಿಗಳು ಬೇರೆ ಕಡೆ ಖಾಸಗಿ ಶಾಲೆ ಕಡೆ ಮುಖ ಮಾಡಿಲ್ಲ. ಇದಕ್ಕೆ ಕಾರಣ ಇಲ್ಲಿನ ಶಿಕ್ಷಣ ಶಿಸ್ತು ಸ್ವಚ್ಚತೆ ಸಂಸ್ಕಾರ. ಇದರಿಂದ ಮೊರಾರ್ಜಿ ಶಾಲೆಗರ ಆಯ್ಕೆಯಾದ ವಿದ್ಯಾರ್ಥಿಗಳು ಕೂಡ ಅಲ್ಲಿಗೆ ಹೋಗದೆ ತಮ್ಮೂರ ಶಾಲೆಯಲ್ಲೇ ಓದುತ್ತಿದ್ದಾರೆ. ಇಂತಹ ಶಾಲೆಯಲ್ಲಿ ಓದುತ್ತಿರೋದೆ ನಮಗೆ ಹೆಮ್ಮೆ ಅಂತ ಮನದುಂಬಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಚಿನಕಾಳ ಗ್ರಾ ಪಂ‌ ಅಧ್ಯಕ್ಷೆಯ ಗಂಡನ ಅಂಧಾ ದರ್ಬಾರ್, ಊರಿನ ಸಿಸಿಟಿವಿ ದೃಶ್ಯಾವಳಿಯೆಲ್ಲ ಈತನ ಮೊಬೈಲಿಗೇ ಲಿಂಕ್​! ಗ್ರಾಮಸ್ಥರು ಚಿಂತಾಕ್ರಾಂತ

ಈ ಶಾಲೆಯ ಮುಂದೆ ಐದು ಅಡಿ ತಗ್ಗು ಇತ್ತು, ಅದನ್ನು ಮಣ್ಣು ಹಾಕಿ ಗ್ರಾಮಸ್ಥರು ಸಮತಟ್ಟು ಮಾಡಿದ್ದಾರೆ. ಶಿಕ್ಷಣ ಇಲಾಖೆಯಿಂದ ದರಾ ಬೇಂದ್ರೆ ಕಲಾವೇದಿಕೆ ನಿರ್ಮಾಣ ಮಾಡಲಾಗಿದೆ. ಶಾಲೆ ಮುಂದೆ ಗಿಡಗಳ ಹಸಿರು. ಇನ್ನು ಶಾಲೆಯಲ್ಲಿ ಬಿಸಿಯೂಟ ಬಾರಿ ಶುಚಿ ರುಚಿಯಾಗಿರುತ್ತದೆ. ಮಕ್ಕಳು ಎಲ್ಲರೂ ಇದೇ ಕಲಾವೇದಿಕೆಯಲ್ಲಿ ಕೂತು ಪ್ರಾರ್ಥನೆ ಮಾಡಿ ಸಾಮೂಹಿಕ ಭೋಜನ ಮಾಡ್ತಾರೆ. ಈ ಶಾಲೆಯ ಶಿಕ್ಷಣ ಗುಣಮಟ್ಟ ಹೇಗಿದೆ ಎಂದರೆ ಇಲ್ಲಿ‌ಕನ್ನಡ‌ ಮಾದ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಎಂಬಿಬಿಎಸ್​ ಓದಿ ವೈದ್ಯರಾಗಿದ್ದಾರೆ.

ವಾಯುಸೇನೆಯಲ್ಲಿ ಅಧಿಕಾರಿಗಳಾಗಿದ್ದಾರೆ. ಶಾಲೆಯಲ್ಲಿ ಸಿಸಿ‌ಕ್ಯಾಮೆರಾ ಅಳವಡಿಸಿ ಅನೈತಿಕ ಚಟುವಟಿಕೆ ನಡೆಯದಂತರ ಹದ್ದಿನ ಕಣ್ಣಿಡಲಾಗಿದೆ. ಶಿಕ್ಷಣ, ಶಿಸ್ತು ಸ್ವಚ್ಚತೆ ಕಾರಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯ್ಕೆ‌ಮಾಡಿದ ರಾಜ್ಯದ ಹತ್ತು ಶಾಲೆಗಳಲ್ಲಿ ಇದು ಕೂಡ ಒಂದಾಗಿದೆ. ಶಾಲೆಗೆ 2021-23 ರಲ್ಲಿ ರಾಜ್ಯೋತ್ಸವ ಪುರಸ್ಕಾರ, ಸ್ವಚ್ಚತಾ ಪುರಸ್ಕಾರ, ಅತ್ಯುತ್ತಮ ಎಸ್​.ಡಿ.ಎಮ್​.ಸಿ ಪ್ರಶಸ್ತಿ ಸಿಕ್ಕಿವೆ.

ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆಯಲ್ಲಿ ಬರದ ಛಾಯೆ; ಮಳೆಯಿಲ್ಲದೆ ಹಾಳಾಗುತ್ತಿದೆ ಸಾವಿರಾರು ಎಕರೆ ಈರುಳ್ಳಿ

ಗ್ರಾಮದಲ್ಲಿ ಎಲ್ಲ ಸಮುದಾಯದ ಜನರಿದ್ದು ಎಲ್ಲ ಸಮಾಜದವರಿಗೂ ಎಸ್​.ಡಿ.ಎಮ್​.ಸಿಯಲ್ಲಿ ಸ್ಥಾನಮಾನ ನೀಡುತ್ತಾ ಬರಲಾಗಿದೆ. ಗ್ರಾಮದ ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥತು ಸಂಪೂರ್ಣ ಸಹಕಾರ ನೀಡುತ್ತಿದ್ದು ಶಾಲೆಗೆ ವಿದೇಶಿಗರು ಕೂಡ ಭೇಟಿ ನೀಡಿದ್ದಾರೆ. ಆದರೆ ಶಾಲೆಯ ನಾಲ್ಕು ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು ಸರಕಾರ ನಾಲ್ಕು ನೂತನ ಕೊಠಡಿ ಕಟ್ಟಿಸಿ ಕೊಡಬೇಕು ಅಂತಿದ್ದಾರೆ.

ವಿವಿಧ ವಿಶೇಷತೆಗಳ‌ ಮೂಲಕ ಸರಕಾರಿ ಶಾಲೆ ಮಕ್ಕಳ ಭವಿಷ್ಯಕ್ಕೆ ದಾರಿಯಾಗುತ್ತಿದೆ. ಸರಕಾರಿ ಶಾಲೆ ಬಗ್ಗೆ ಅಸಡ್ಡೆ ಹೊಂದುವ ಈ ಕಾಲದಲ್ಲಿ ಈ ಹಳ್ಳಿ ಶಾಲೆ ಇಷ್ಟೊಂದು ಸಾಧನೆಯತ್ತ ಸಾಗಿದ್ದು ಶ್ಲಾಘನೀಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ