ಬಾಗಲಕೋಟೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಹಾಗೂ ಡಿಪೊದಲ್ಲಿ ನೀರಿಗೆ ಹಾಹಾಕಾರ, ಅಂತರ್ಜಲ-ಬೋರ್​ವೆಲ್ ಬತ್ತಿದೆ

| Updated By: ಸಾಧು ಶ್ರೀನಾಥ್​

Updated on: Mar 15, 2024 | 11:55 AM

Bagalkote KSRTC Depot water shortage: ಬಂದ್ ಆಗಿರುವ ಬಸ್ ತೊಳೆಯುವ ಸ್ವಯಂಚಾಲಿತ ಯ‌ಂತ್ರ. ನೀರಿಲ್ಲದೆ ಬಿಕೊ ಅಂತಿರುವ ಶುದ್ದ ಕುಡಿಯುವ ನೀರಿನ ಘಟಕ. ಶೌಚಾಲಯಕ್ಕೂ ನೀರಿಲ್ಲ. ಪ್ರಯಾಣಿಕರು ಕುಡಿಯೋದಕ್ಕೂ ನೀರಿಲ್ಲ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ.

ಬಾಗಲಕೋಟೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಹಾಗೂ ಡಿಪೊದಲ್ಲಿ ನೀರಿಗೆ ಹಾಹಾಕಾರ, ಅಂತರ್ಜಲ-ಬೋರ್​ವೆಲ್ ಬತ್ತಿದೆ
ಬಾಗಲಕೋಟೆ ಕೆ ಎಸ್ ಆರ್ ಟಿ ಸಿ ಡಿಪೊದಲ್ಲಿ ನೀರಿಗೆ ಹಾಹಾಕಾರ
Follow us on

ಆ ಜಿಲ್ಲೆಯಲ್ಲಿ ಮೂರು ನದಿಗಳಿದ್ದು ಮೂರೂ ನದಿಗಳು ಖಾಲಿ ಖಾಲಿಯಾಗಿವೆ. ಜಿಲ್ಲೆಯಲ್ಲಿ ಮುಂಗಾರು ಹಿಂಗಾರು ಎರಡೂ ಮಳೆ ಕೈಕೊಟ್ಟು ಭೀಕರ ಬರ ಆವರಿಸಿದೆ. ಇಷ್ಟು ದಿನ ನೀರಿನ ಪರಿಸ್ಥಿತಿ ಹೇಗೋ ನಿರ್ವಹಣೆ ಆಗ್ತಿತ್ತು. ಆದರೆ ಈಗ ಜಲಕ್ಷಾಮ ಶುರುವಾಗಿದ್ದು, ಕೆ ಎಸ್ ಆರ್ ಟಿ ಸಿ ಬಸ್‌ ನಿಲ್ದಾಣ ಡಿಪೊಗೂ (Bagalkote KSRTC Bus Station Depot) ಬರದ ಬಿಸಿ ತಟ್ಟಿದೆ. ಬಂದ್ ಆಗಿರುವ ಬಸ್ ತೊಳೆಯುವ ಸ್ವಯಂಚಾಲಿತ ಯ‌ಂತ್ರ. ನೀರಿಲ್ಲದೆ ಬಿಕೊ ಅಂತಿರುವ ಶುದ್ದ ಕುಡಿಯುವ ನೀರಿನ ಘಟಕ. ಶೌಚಾಲಯಕ್ಕೂ ನೀರಿಲ್ಲ. ಪ್ರಯಾಣಿಕರು ಕುಡಿಯೋದಕ್ಕೂ ನೀರಿಲ್ಲ ( groundwater-borewell dried up). ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ.

ಜಿಲ್ಲೆಯಲ್ಲಿ ಆವರಿಸಿರುವ ಬರದ ಬಿಸಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಹಾಗೂ ಡಿಪೊಗೂ ತಟ್ಟಿದೆ. ಮಳೆಯಿಲ್ಲದೆ ನಿಲ್ದಾಣದಲ್ಲಿದ್ದ ಒಂದೇ ಒಂದು ಬೋರ್ವೆಲ್ ಬತ್ತಿದೆ. ಇದರಿಂದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಪ್ರಯಾಣಿಕರಿಗೆ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗೆ ನೀರಿಲ್ಲದಂತಾಗಿದೆ. ಬೋರ್ವೆಲ್ ಬತ್ತಿದ ಪರಿಣಾಮ ಡಿಪೊದಲ್ಲಿದ್ದ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿದೆ.

ಇದರಿಂದ ಮೆಕ್ಯಾನಿಕ್ ಗಳು ಚಾಲಕರು ನಿರ್ವಾಹಕರು ಸೇರಿದಂತೆ ಎಲ್ಲ ಸಿಬ್ಬಂದಿಗೆ ಕುಡಿಯಲು ನೀರಿಲ್ಲದಂತಾಗಿದೆ. ಜೊತೆಗೆ ನಿಲ್ದಾಣದಲ್ಲಿನ ಪ್ರಯಾಣಿಕರು ನೀರಿಲ್ಲದಂತಾಗಿದೆ. ಬೋರ್ವೆಲ್ ಬತ್ತಿದ ಪರಿಣಾಮ ಶೌಚಾಲಯಕ್ಕೂ ನೀರಿನ ಕೊರತೆ ಎದುರಾಗಿದೆ.ಇದರಿಂದ ಪ್ರಯಾಣಿಕರು ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ಎಲ್ಲರೂ ಪರದಾಡುವಂತಾಗಿದ್ದು,ಕೂಡಲೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹ ಕೇಳಿ ಬಂದಿದೆ.

ನೀರಿನ ಸಮಸ್ಯೆ ಬಸ್ ಗಳ ಶುಚಿತ್ವಕ್ಕೂ ಎದುರಾಗಿದೆ. ಬಸ್ ಗಳನ್ನು ತೊಳೆಯುವ ಸ್ವಯಂಚಾಲಿತ ಬಸ್ ತೊಳೆಯುವ ಯಂತ್ರಕ್ಕೆ ನೀರಿಲ್ಲ. ಇದರಿಂದ ಸ್ವಯಂಚಾಲಿತ ಯಂತ್ರದಿಂದ ಬಸ್ ಗಳನ್ನು ತೊಳೆಯಲಾಗದೆ ಬಿಕೊ ಅಂತಿದೆ. ಶುಚಿತ್ವಕ್ಕೆ ಅಂತ ಬಂದ ಬಸ್ ಗಳು ನಿಂತಲ್ಲೇ ನಿಂತಿವೆ. ಬಾಗಲಕೋಟೆ ಡಿಪೊದಲ್ಲಿ ದಿನಾಲು ೧೦೦-೧೨೦ ಬಸ್ ಗಳನ್ನು ತೊಳೆಯಲಾಗುತ್ತದೆ.

Also Read: ಕಾಂಗ್ರೆಸ್​​ ಗ್ಯಾರಂಟಿ ಸಮಾವೇಶಕ್ಕೆ ಕೆಎಸ್​ಆರ್​​ಟಿಸಿ ಬಸ್​ ಬಳಕೆ: ಇತ್ತ ಕಾದು ಕಾದು ಸುಸ್ತಾದ ಪ್ರಯಾಣಿಕರು

ಆದರೆ ಎರಡು ದಿನದಿಂದ ಬಸ್ ಗಳನ್ನು ತೊಳೆಯಲಾಗುತ್ತಿಲ್ಲ. ತಾತ್ಕಾಲಿಕವಾಗಿ ಅಗ್ನಿಶಾಮಕ ದಳ ವಾಹನದ ಮೂಲಕ ನೀರನ್ನು ತಂದು ಕೆಲ ಸಿಂಟೆಕ್ಸ್ ನಲ್ಲಿ ಸಂಗ್ರಹಿಸಲಾಗಿದೆ. ಒಂದು ಬೋರ್ವೆಲ್ ಹೊರತುಪಡಿಸಿ ಇನ್ನೊಂದು ಬೋರ್ವೆಲ್ ಇಲ್ಲದ ಕಾರಣ ಇಂತಹ ಪರಿಸ್ಥಿತಿ ಬಂದಿದೆ.ಇನ್ನು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಮುಂಜಾಗ್ರತಾ ಕ್ರಮ‌ ಕೈಗೊಂಡಿಲ್ಲ.

ಮತ್ತೊಂದು ಬೋರ್ವೆಲ್ ಕೊರೆಸದೆ ಹಾಗೆ ಬಿಟ್ಟಿರೋದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇನ್ನು ಈ ಬಗ್ಗೆ ಕೆಎಸ್ ಆರ್ ಟಿ ಸಿ ಅಧಿಕಾರಿಗಳನ್ನು ಕೇಳಿದರೆ,ಅಂತರ್ಜಲ ಬತ್ತಿದ ಪರಿಣಾಮ ಇದ್ದ ಒಂದು ಬೋರ್ವೆಲ್ ಬತ್ತಿದೆ.ಇನ್ನೊಂದು ಬೋರ್ವೆಲ್‌ ಕೊರೆಸಲು ಕ್ರಮ ಕೈಗೊಳ್ಳುತ್ತಿದ್ದೇವೆ.ತಾತ್ಕಾಲಿಕವಾಗಿ ಅಗ್ನಿಶಾಮಕದಳ ವಾಹನದ ನೀರನ್ನು ಅವಶ್ಯಕತೆಗೆ ಬಳಸಿಕೊಂಡಿದ್ದೇವೆ.ಆದಷ್ಟು ಬೇಗ ಸಮಸ್ಯೆ ಸರಿಪಡಿಸುತ್ತೇವೆ ಅಂತಾರೆ ಎಂದಿದ್ದಾರೆ.

ಅಂತರ್ಜಲ ಬತ್ತಿದ ಪರಿಣಾಮ ಇದ್ದ ಒಂದು ಬೋರ್ವೆಲ್ ಬತ್ತಿದೆ. ಇನ್ನೊಂದು ಬೋರ್ವೆಲ್‌ ಕೊರೆಸಲು ಕ್ರಮ ಕೈಗೊಳ್ಳುತ್ತಿದ್ದೇವೆ.ತಾತ್ಕಾಲಿಕವಾಗಿ ಅಗ್ನಿಶಾಮಕದಳ ವಾಹನದ ನೀರನ್ನು ಅವಶ್ಯಕತೆಗೆ ಬಳಸಿಕೊಂಡಿದ್ದೇವೆ.ಆದಷ್ಟು ಬೇಗ ಸಮಸ್ಯೆ ಸರಿಪಡಿಸುತ್ತೇವೆ ಎಂದು ಪಿ ವ್ಹಿ ಮೇತ್ರಿ ವಿಭಾಗೀಯ ಸಾರಿಗೆ ಅಧಿಕಾರಿ ಬಾಗಲಕೋಟೆ ಅವರು ಹೇಳಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿನ ಬರ ಕೇವಲ ರೈತರು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೊಂದರೆ ತಂದಿಲ್ಲ.ಕೆ ಎಸ್ ಆರ್ ಟಿ ಸಿ ಗೂ ಬಿಸಿ ಮೂಡಿಸಿದ್ದು, ಆದಷ್ಟು ಬೇಗ ಕೆ ಎಸ್ ಆರ್ ಟಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿ ನೀರಿನ‌ ಕೊರತೆ ಸರಿದೂಗಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.