ಬಾಗಲಕೋಟೆ: ಗಗನಕ್ಕೇರಿದ ಈರುಳ್ಳಿ ದರ: ಗ್ರಾಹಕರ ಕಣ್ಣಲ್ಲಿ ನೀರು, ಖುಷಿಪಡದ ರೈತಾಪಿ ವರ್ಗ
ಬಾಗಲಕೋಟೆ ವಲ್ಲಭಭಾಯಿ ವೃತ್ತದ ತರಕಾರಿ ಮಾರುಕಟ್ಟೆ ಹಾಗೂ ಹೊರಭಾಗದ ರೈತರ ಹೊಲದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಕೆಜಿ ಗೆ 70-80 ರೂ ಆಗಿದೆ. ಇದರಿಂದ ಗೃಹಿಣಿಯರು ಈರುಳ್ಳಿ ಕಟ್ ಮಾಡುವಾಗಷ್ಟೇ ಕಣ್ಣೀರು ಹಾಕೋದಲ್ಲ. ಈರುಳ್ಳಿ ಖರೀದಿ ಮಾಡುವಾಗಲು ಕಂಬನಿ ಸುರಿಸುವಂತಾಗಿದೆ.
ಬಾಗಲಕೋಟೆ, ಅಕ್ಟೋಬರ್ 30: ಕೆಲ ದಿನಗಳ ಹಿಂದೆ ಕೆಂಪು ಸುಂದರಿ ಟೊಮ್ಯಾಟೊ ಬೆಲೆ ಗಗನಕ್ಕೆ ಏರಿತ್ತು. ಆದರೆ ಇದೀಗ ಈರುಳ್ಳಿ (onion) ಬೆಲೆ ದಿನದಿಂದ ದಿನಕ್ಕೆ ಆಕಾಶದತ್ತ ಕೈ ಚಾಚುತ್ತಿದೆ. ಈರುಳ್ಳಿ ಬೆಲೆಯಿಂದ ಗೃಹಿಣಿಯರು ಕಣ್ಣೀರು ಹಾಕುವಂತಾಗಿದೆ. ಆದರೆ ಬೆಲೆ ಏರಿಕೆ ಆದರೂ ರೈತರ ಮುಖದಲ್ಲಿ ಮಾತ್ರ ಮಂದಹಾಸವಿಲ್ಲ. ಇದಕ್ಕೆ ಕಾರಣ ಈರುಳ್ಳಿ ಇಳುವರಿ ಗಣನೀಯವಾಗಿ ಕಡಿಮೆಯಾಗಿರುವುದು.
ಬಾಗಲಕೋಟೆ ವಲ್ಲಭಭಾಯಿ ವೃತ್ತದ ತರಕಾರಿ ಮಾರುಕಟ್ಟೆ ಹಾಗೂ ಹೊರಭಾಗದ ರೈತರ ಹೊಲದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಕೆಜಿ ಗೆ 70-80 ರೂ ಆಗಿದೆ. ಇದರಿಂದ ಗೃಹಿಣಿಯರು ಈರುಳ್ಳಿ ಕಟ್ ಮಾಡುವಾಗಷ್ಟೇ ಕಣ್ಣೀರು ಹಾಕೋದಲ್ಲ. ಈರುಳ್ಳಿ ಖರೀದಿ ಮಾಡುವಾಗಲು ಕಂಬನಿ ಸುರಿಸುವಂತಾಗಿದೆ. ಈರುಳ್ಳಿ ಎಲ್ಲ ಅಡುಗೆಗೂ ಬೇಕೇ ಬೇಕು ಆದರೆ ಇಷ್ಟೊಂದು ಬೆಲೆ ಹೆಚ್ಚಾಗಿದೆ. ಹೇಗೆ ಅಡುಗೆ ಮಾಡೋದು. ಸರಕಾರ ರೇಟ್ ಕಡಿಮೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆ ಎಂದು ಗೃಹಿಣಿ ಲಕ್ಷ್ಮಿ ಮಡಿವಾಳರ ಅಳಲು ತೊಡಿಕೊಂಡಿದ್ದಾರೆ.
ಇದನ್ನೂ ಓದಿ: ನಮಗೆ ಸರ್ಕಾರದ ಗ್ಯಾರಂಟಿಗಳು ಬೇಕಾಗಿಲ್ಲ, ಇರುಳ್ಳಿ ಬೆಲೆ ಕಡಿಮೆ ಮಾಡಿ ಎಂದ ಗೃಹಿಣಿ
ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಗೋಳು ಈ ರೀತಿಯಾಗಿದೆ. ಇಲ್ಲಿ ಗ್ರಾಹಕರಿಗೂ ಖುಷಿಯಿಲ್ಲ, ರೈತರಿಗೂ ಖುಷಿಯಿಲ್ಲ. ಮಧ್ಯವರ್ತಿಗಳಿಗೆ ಮಾತ್ರ ಬೆಲೆ ಏರಿಕೆ ಸಂತಸ ತಂದಿದೆ. ಯಾಕೆಂದರೆ ಗ್ರಾಹಕರು ಕೆಜಿ 70-80 ರೂ ಕೊಡಬೇಕು. ಇನ್ನು ರೈತರು ಬೆಲೆ ಏರಿಕೆಯಾರೂ ಖುಷಿಪಡುತ್ತಿಲ್ಲ. ಇದಕ್ಕೆ ಕಾರಣ ಈರುಳ್ಳಿ ಇಳುವರಿ ತೀರಾ ಕಡಿಮೆಯಾಗಿದೆ. ಜೊತೆಗೆ ಬೆಳೆದ ಈರುಳ್ಳಿ ಕೂಡ ದೊಡ್ಡ ಪ್ರಮಾಣದಲ್ಲಿ ಗಡ್ಡೆ ಹಿಡಿದಿಲ್ಲ. ಇದಕ್ಕೆ ಕಾರಣ ಮುಂಗಾರು ಮಳೆ ಕೈ ಕೊಟ್ಟಿರುವುದು.
ಮುಂಗಾರು ಮಳೆ ಕೈ ಕೊಟ್ಟ ಕಾರಣ ಈರುಳ್ಳಿ ಬಿತ್ತನೆಯಲ್ಲೂ ಬಾತಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಒಣಬೇಸಾಯದ ಈರುಳ್ಳಿ ಒಣಗಿ ಹಾಳಾಗಿದೆ. ಬೋರ್ವೆಲ್ ಅಂತರ್ಜಲ ಕಡಿಮೆಯಾಗಿ ನೀರಾವರಿ ಕೃಷಿಕರ ಈರುಳ್ಳಿ ಕೂಡ ಸರಿಯಾಗಿ ಬೆಳೆದಿಲ್ಲ. ಇದೆಲ್ಲ ಕಾರಣದಿಂದ ಈರುಳ್ಳಿ ಬೆಲೆ ಇಂದು ಗಗನಕ್ಕೆ ಏರಿದೆ. ಆದರೆ ರೈತರಿಗೆ ಬೆಲೆ ಏರಿಕೆ ಆದರೂ ಬಿತ್ತಿ ಬೆಳೆದ ಖರ್ಚು ಕೂಡ ತಿರುಗಿ ಬಾರದಂತಾಗಿದೆ.
ಇದನ್ನೂ ಓದಿ: ಗಗನಕ್ಕೇರಿದ ಈರುಳ್ಳಿ ದರ: ಒಂದೇ ವಾರದಲ್ಲಿ ಡಬ್ಬಲ್ ರೇಟ್, ಮುಂದಿನ ವಾರ 100 ರೂ. ಗಡಿ ದಾಟುವ ಸಾಧ್ಯತೆ
ಎಕರೆಗೆ ಬೀಜ ಗೊಬ್ಬರ ಕ್ರಿಮಿನಾಷಕ ಆಳು ಕಾಳು ಅಂತ ಐವತ್ತು ಸಾವಿರ ರೂ. ಖರ್ಚು ಮಾಡಿರ್ತಾರೆ. ಆದರೆ ಇಳುವರಿ ಇಲ್ಲ. ಒಣಬೇಸಾಯ ರೈತರು ಬಹುತೇಕ ನಷ್ಟ ಅನುಭವಿಸಿದ್ದಾರೆ. ನೀರಾವರಿ ರೈತರು ಎಕತೆಗೆ 200 ಚೀಲ ಈರುಳ್ಳಿ ಬೆಳೆಯುತ್ತಿದ್ದರು. ಆದರೆ ಈ ವರ್ಷ ಎಕರೆಗೆ ಹತ್ತು ಹದಿನೈದು ಚೀಲಮಾತ್ರ ಬಂದಿದೆ. ಇದರಿಂದ ಬೆಲೆ ಏರಿದರೂ ರೈತರ ಜೇಬು ತುಂಬದಂತಾಗಿದ್ದು, ಸರಕಾರ ರೈತರ ಅನುಕೂಲಕ್ಕೆ ಬರಬೇಕು ಅಂತಾರೆ ರೈತರು.
ಒಂದು ಕಡೆ ಈರುಳ್ಳಿ ಬೆಲೆ ಏರಿಕೆ ಗ್ರಾಹಕರು ಪರದಾಡುತ್ತಿದ್ದಾರೆ. ಆದರೆ ಬೆಲೆ ಏರಿದರೂ ಇಳುವರಿ ಹೊಡೆತದಿಂದ ಲಾಭವಿಲ್ಲದೆ ರೈತರು ಪರಿತಪಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:29 pm, Mon, 30 October 23