AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಡ್ಡಿ ಹೋಗಿ ಲುಂಗಿ ಗ್ಯಾಂಗ್ ಬಂತು: ಕಳ್ಳರ ಹಾವಳಿಗೆ ಆತಂಕಗೊಂಡ ಬಾಗಲಕೋಟೆ ಜನ

ಬಾಗಲಕೋಟೆ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಅಮೀನಗಡದಲ್ಲಿ ಲುಂಗಿ ಗ್ಯಾಂಗ್ ಆಟೋ ಚಾಲಕನ ಮನೆಯಲ್ಲಿ 8 ಲಕ್ಷ ರೂ ಕಳ್ಳತನ ನಡೆದಿದೆ. ಈ ಹಿಂದೆ ಮುಧೋಳದಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿತ್ತು. ಇಂತಹ ಗ್ಯಾಂಗ್‌ಗಳಿಂದ ಸಾರ್ವಜನಿಕರಲ್ಲಿ ಭಯ ಹೆಚ್ಚಿದ್ದು, ಪೊಲೀಸರು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಚಡ್ಡಿ ಹೋಗಿ ಲುಂಗಿ ಗ್ಯಾಂಗ್ ಬಂತು: ಕಳ್ಳರ ಹಾವಳಿಗೆ ಆತಂಕಗೊಂಡ ಬಾಗಲಕೋಟೆ ಜನ
ಲುಂಗಿ ಗ್ಯಾಂಗ್​ನಿಂದ ಕಳ್ಳತನಕ್ಕೆ ಯತ್ನ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Nov 25, 2025 | 7:24 PM

Share

ಬಾಗಲಕೋಟೆ, ನವೆಂಬರ್​ 25: ಜಿಲ್ಲೆಯಲ್ಲಿ ಸದ್ದಿಲ್ಲದೆ ಕಳ್ಳರ ಗ್ಯಾಂಗ್ ಕರಾಮತ್ತು ತೋರುತ್ತಿದೆ. ಈ ಹಿಂದೆ ಚಡ್ಡಿ ಗ್ಯಾಂಗ್ ಅದೊಂದು ತಾಲ್ಲೂಕು ಕೇಂದ್ರದಲ್ಲಿ ಒಂದು‌ ಮನೆ ದೋಚಿತ್ತು. ಇನ್ನೊಂದು‌ ಮನೆ ಕಳ್ಳತನ (Thefts) ಯತ್ನ ನಡೆಸಿದಾಗ ಅಮೇರಿಕದಲ್ಲಿ ನೆಲೆಸಿದ ಆ‌ ಮನೆಯ ಮಗಳು ತನ್ನ ಮೊಬೈಲ್​ನಲ್ಲಿ ಸಿಸಿ ಕ್ಯಾಮೆರಾದಲ್ಲಿ ದೃಶ್ಯವನ್ನು ನೋಡಿ ಕಳ್ಳತನ ತಪ್ಪಿಸಿದ್ದಳು. ಇದೀಗ ಅದೇ ಜಿಲ್ಲೆಯ ಇನ್ನೊಂದು ತಾಲ್ಲೂಕಿನ ಪಟ್ಟಣದಲ್ಲಿ ಲುಂಗಿ ಗ್ಯಾಂಗ್ (Lungi Gang)​ ಕಳ್ಳತನ ವಿಫಲಯತ್ನ ನಡೆಸಿತ್ತು. ಇಂದು ಹಾಡಹಗಲೇ ಅದೇ ಪಟ್ಟಣದಲ್ಲಿ ಆಟೋ ಚಾಲಕನ ಮನೆಯಲ್ಲಿ 8 ಲಕ್ಷ ರೂ ಹಣ‌ ಕಳ್ಳತನವಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡ ಪಟ್ಟಣದಲ್ಲಿ ಲುಂಗಿ ಗ್ಯಾಂಗ್​​ ಆ್ಯಕ್ಟೀವ್​ ಆಗಿದೆ. ಅಮೀನಗಡ ಅಂದರೆ ಎಲ್ಲರಿಗೂ ನೆನಪಾಗುವುದು ಕರದಂಟು. ಕರದಂಟಿಗೆ ಪ್ರಸಿದ್ಧವಾದ ಪಟ್ಟಣದಲ್ಲಿ ಇದೀಗ ಲುಂಗಿ ಗ್ಯಾಂಗ್ ಕಳ್ಳರದ್ದೇ ಸುದ್ದಿ ಹೆಚ್ಚಾಗಿದೆ. ನವೆಂಬರ್ 23ರಂದು ಲುಂಗಿ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿತ್ತು.

ಇದನ್ನೂ ಓದಿ: ಬ್ಯಾಂಕ್​ಗಳ​ ರಾಬರಿ ಪ್ರಕರಣ: ಅಂತಾರಾಜ್ಯ ಕಳ್ಳರು ಅಂದರ್​; ಹಣ, ಬಂಗಾರ ಸೀಜ್​

ಪಟ್ಟಣದ‌ ದಡ್ಡೆನವರ ಎಂಬುವರ ಮನೆ, Spr ಖಾದ್ರಿ ಎಂಬುವರ ಕಚೇರಿ, ಮಂಜು ಹೂಗಾರ ಟೈಲ್ಸ್ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಆದರೆ ಏನು ಸಿಗದೆ ಮೂರು ಜನರ ಗ್ಯಾಂಗ್​ ಅಲ್ಲಿಂದ ಕಾಲ್ಕಿತ್ತಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು‌. ಇನ್ನು ಅದೇ ಪಟ್ಟಣದ ವಾರ್ಡ್ ‌ನಂ 1ರಲ್ಲಿ ಇಂದು ಹಾಡಹಗಲೇ‌ 3 ಗಂಟೆ ವೇಳೆ 8 ಲಕ್ಷ ರೂ. ಹಣ ಕಳ್ಳತನವಾಗಿದೆ. ಆಟೋ ಚಾಲಕ ಸಿದ್ದಪ್ಪ ಹಳ್ಳಿಮನಿ ಎಂಬುವವರು ಮನೆ ಕಟ್ಟಿಸುವುದಕ್ಕೆ ಕೂಡಿಟ್ಟಿದ್ದ 8 ಲಕ್ಷ ರೂ. ಹಣ‌ ದೋಚಿದ್ದಾರೆ.

ಮನೆಯಲ್ಲಿ ಕಣ್ಣು ‌ಕಾಣಿಸದ ಸಿದ್ದಪ್ಪ ಅವರ ತಾಯಿ ಇದ್ದರು. ಅವರಿಗೆ ಗೊತ್ತಾಗದಂತೆ ಕಳ್ಳತನ ಮಾಡಿ‌ ಎಸ್ಕೇಪ್‌ ಆಗಿದ್ದಾರೆ. ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಲುಂಗಿ ಗ್ಯಾಂಗ್​​ ಅನ್ನು ಹಿಡಿಯುವುದಕ್ಕೆ ಪ್ರಯತ್ನ ನಡೆಸಿದ್ದಾರೆ.

ಆಗಸ್ಟ್​​ನಲ್ಲೇ ಚಡ್ಡಿ ಗ್ಯಾಂಗ್ ಪ್ರತ್ಯಕ್ಷ

ಇನ್ನು ಈ ಚಡ್ಡಿ ಗ್ಯಾಂಗ್ ಆಗಸ್ಟ್ 27ರ ರಾತ್ರಿ ಜಿಲ್ಲೆಯ ‌ಮುಧೋಳ‌ ನಗರದಲ್ಲಿ ಕಾಣಿಸಿಕೊಂಡಿತ್ತು. ಮುಧೋಳ ನಗರದ ಸಿದ್ದರಾಮೇಶ್ವರ ಕಾಲೋನಿಯಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿತ್ತು. ಅಂದು ಹನುಮಂತಗೌಡ ಎಂಬ ನಿವೃತ್ತ ಇಂಜಿನಿಯರ್​ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಮೆರಿಕದಲ್ಲಿ ನೆಲೆಸಿದ್ದ ಅವರ ಮಗಳ ಮೊಬೈಲ್​ಗೆ ಲಿಂಕ್‌ ಇತ್ತು. ಹೀಗಾಗಿ ಕಳ್ಳರು ತಮ್ಮ ಮನೆಗೆ ಬಂದ ದೃಶ್ಯವನ್ನು ಮೊಬೈಲ್​ನಲ್ಲಿ ಗಮನಿಸಿದ ಶೃತಿ, ಮನೆಯವರಿಗೆ ಕರೆ ಮಾಡಿ ಕಳ್ಳತನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದೇ ಕಳ್ಳರು ಅಂದು ರಾತ್ರಿ ಹನುಮಂತಗೌಡ ಅವರ ಮನೆಗೂ ಮುನ್ನ ಅಶೋಕ ಕರಿಹೊನ್ನ ಎಂಬುವರ ಮನೆಯಲ್ಲಿ 12 ಗ್ರಾಂ ಚಿನ್ನ, 40 ಸಾವಿರ ರೂ ಹಣ ಕದ್ದಿದ್ದರು. ಅದು ಇನ್ನು ಪತ್ತೆಯಾಗಿಲ್ಲ.

ಇನ್ನೊಂದೆಡೆ ಮತ್ತೊಂದು ಕಳ್ಳರ ಗ್ಯಾಂಗ್, ಬಾದಾಮಿ ತಾಲ್ಲೂಕಿನ ಎಸ್ ಬಿ ಬೈ ಬ್ಯಾಂಕ್​ನಲ್ಲಿ ಕಳ್ಳತನ ಮಾಡಿತ್ತು. ನಂತರ ಕುಳಗೇರಿ ವೀರಪುಲಿಕೇಶಿ ಬ್ಯಾಂಕ್​ನಲ್ಲಿ ಕಳ್ಳತನ ಮಾಡಿತ್ತು. ಬ್ಯಾಂಕ್​ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಳ್ಳರೆಂದು ಗುರುತಿಸಿದ್ದು, ಅವರನ್ನು ಬಂಧಿಸಲಾಗಿದೆ. ಎರಡು ಬ್ಯಾಂಕ್​ಗೆ ಸಂಬಂಧಿಸಿದಂತೆ 26 ಲಕ್ಷ 30 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಬಾದಾಮಿ ಹಾಗೂ ಕೆರೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಬೇರೆ ಗ್ಯಾಂಗ್​​ಗಳಿಂದಲೂ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ. ಇಂತಹ ಗ್ಯಾಂಗ್​ನಿಂದ ಸಾರ್ವಜನಿಕರು ಭಯದಲ್ಲಿ ರಾತ್ರಿ ಕಳೆಯುವಂತಾಗಿದೆ. ಮೇಲಾಗಿ ಈಗ ಬಂದಿರುವ ಕಳ್ಳರ ಗ್ಯಾಂಗ್ ಹೆಚ್ಚು ಆತಂಕ ಹುಟ್ಟಿಸಿದೆ.

ಇದನ್ನೂ ಓದಿ: ಬಾಗಲಕೋಟೆ ವ್ಯಾಪಾರಿಗೆ ಅಂತಾರಾಜ್ಯ ಆನ್​ಲೈನ್ ಚೋರರಿಂದ 1 ಕೋಟಿ ರೂ. ಪಂಗನಾಮ

ಇನ್ನು ಲುಂಗಿ ಗ್ಯಾಂಗ್ ಮಹಾರಾಷ್ಟ್ರ ಮೂಲದ ಕಬ್ಬಿನ ಗ್ಯಾಂಗ್ ರೀತಿ ಕಾಣುತ್ತಿದ್ದು, ಯಾರು ಕಬ್ಬಿನ ಗ್ಯಾಂಗ್ ನವರು, ಯಾರು ಕಳ್ಳರು ಎಂದು ಗುರುತು ಹಿಡಿಯದಂತಾಗಿದೆ. ಆದ್ದರಿಂದ ಆದಷ್ಟು ಬೇಗ ಈ ಲುಂಗಿ ಗ್ಯಾಂಗ್ ಹಿಡಿದು ಜನರಲ್ಲಿರುವ ಭಯ ದೂರ ಮಾಡಬೇಕೆಂದು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮನವಿ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?