ಸಚಿವ ಮುರುಗೇಶ್ ನಿರಾಣಿ ಒಡೆತನದ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ; ಕೆಲಸಕ್ಕೆ ಸೇರಿದ ಮೊದಲ ದಿನವೇ ಕಾರ್ಮಿಕನ ಸಾವು

Murugesh Nirani: ಸಚಿವ ಮುರುಗೇಶ್ ನಿರಾಣಿ ಒಡೆತನದ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ ಸಂಭವಿಸಿದೆ.

ಸಚಿವ ಮುರುಗೇಶ್ ನಿರಾಣಿ ಒಡೆತನದ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ; ಕೆಲಸಕ್ಕೆ ಸೇರಿದ ಮೊದಲ ದಿನವೇ ಕಾರ್ಮಿಕನ ಸಾವು
ಗುರುನಾಥ ಹುಚ್ಚಣ್ಣನವರ್
Follow us
TV9 Web
| Updated By: ಆಯೇಷಾ ಬಾನು

Updated on:Feb 10, 2023 | 10:53 AM

ಬಾಗಲಕೋಟೆ: ಸಕ್ಕರೆ ಕಾರ್ಖಾನೆಯ ಬಾಯ್ಲರ್ ದಿಡೀರ್ ಓಪನ್ ಆಗಿ ಅದರಿಂದ ಬಂದಂತಹ ಬಿಸಿ ಹಬೆಗೆ ಓರ್ವ ಕಾರ್ಮಿಕ ಸ್ಥಳದಲ್ಲಿ ಮೃತಪಟ್ಟಿದ್ದು ನಾಲ್ಕೈದು ಜನರಿಗೆ ಗಾಯವಾದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ಬಳಿ ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಅವಘಡದಲ್ಲಿ 27 ವರ್ಷದ ಗುರುನಾಥ್ ಹುಚ್ಚಣ್ಣವರ ಎಂಬ ಯುವಕ ಸಾವನ್ನಪ್ಪಿದ್ದಾನೆ.

ಈತ ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಜುಂಜರಕೊಪ್ಪದಲ್ಲಿ ನಿವಾಸಿಯಾಗಿದ್ದು, ದಿಡೀರ್ ಬಾಯ್ಲರ್ ಓಪನ್ ಆದ ಹಿನ್ನೆಲೆಯಲ್ಲಿ ಬಂದಂತಹ ಬಿಸಿ ಹಬೆಯಿಂದ ಇಡೀ ದೇಹವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ನಿನ್ನೆ ಸಂಜೆ ಏಳು ಗಂಟೆ ಸಂದರ್ಭದಲ್ಲಿ ಗುರುನಾಥ ಹುಚ್ಚಣ್ಣವರ ಹಾಗೂ ಆರು ಜನ ಕಾರ್ಮಿಕರು ಸೇರಿಕೊಂಡು ಬಾಯ್ಲರ್ ಕ್ಲೀನ್ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ದಿಢೀರ್ ಓಪನ್ ಆದ ಕಾರಣದಿಂದ ಸ್ಟೀಮ್ ಬಿಸಿಯಾದ ಹಬೆ ನೇರವಾಗಿ ಬಡಿದು ಓರ್ವನ ಬಲಿ ಪಡೆದಿದೆ. ಗಾಯಾಳುಗಳಿಗೆ ಮುಧೋಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸದ್ಯದ ಮಟ್ಟಿಗೆ ತಿಳಿದುಬಂದಿರುವ ಮಾಹಿತಿ ಪ್ರಕಾರ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ಬಗ್ಗೆ ಸುದ್ದಿ ತಿಳಿದಂತಹ ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯದ ಮಟ್ಟಿಗೆ ಈ ಬಗ್ಗೆ ಯಾವುದೇ ರೀತಿ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ದಾಖಲಾಗಿಲ್ಲವಾದರೂ, ಕುಟುಂಬಸ್ಥರು ನಂತರ ದೂರು ನೀಡಲು ನಿರ್ಧರಿಸಿದ್ದಾರೆ.

ಕೆಲಸಕ್ಕೆ ಸೇರಿದ ಮೊದಲ ದಿನವೇ ಪ್ರಾಣ ಕಳೆದುಕೊಂಡ ಕಾರ್ಮಿಕ, ಕುಟುಂಬಸ್ಥರ ಆಕ್ರಂದನ

ಹೌದು ಇಲ್ಲಿ ಗುರುನಾಥ ಹುಚ್ಚಣ್ಣವರ ಅವರ ದುರಾದೃಷ್ಟ ಹೇಗಿದೆಯಂದರೆ ಈ ಮೊದಲು ಬೇರೆ ಬೇರೆ ಕಡೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡು ತನ್ನ ಕುಟುಂಬವನ್ನು ನಿಭಾಯಿಸುತ್ತಿದ್ದ ಗುರುನಾಥ, ಸಕ್ಕರೆ ಕಾರ್ಖಾನೆ ಕೆಲಸಕ್ಕೆ ನಿನ್ನೆ ತಾನೆ ಸೇರಿಕೊಂಡಿದ್ದ. ಸೇರಿಕೊಂಡ ಮೊದಲ ದಿನವೇ ತನ್ನ ಪ್ರಾಣವನ್ನು ಕಳೆದುಕೊಂಡಿರುವುದು ನಿಜವಾಗಲೂ ವಿಪರ್ಯಾಸ. ಗುರುನಾಥ ಪತ್ನಿ ಲಕ್ಷ್ಮಿ, ತಾಯಿ ಮಾದೇವಿ ಅವರ ಗೋಳಾದ ದೃಶ್ಯ ಎಲ್ಲರ ಮನಕಲುಕುತ್ತಿದೆ. ಒಂದು ವರ್ಷದ ಹಿಂದೆ ಲಕ್ಷ್ಮಿ ಎಂಬರನ್ನು ಮದುವೆಯಾಗಿದ್ದ ಆದರೆ ಮಕ್ಕಳ ಇರ್ಲಿಲ್ಲ ತಾಯಿ ಇದ್ದು ತಂದೆಯನ್ನು ಕಳೆದುಕೊಂಡಿದ್ದ. ಗುರುನಾತಯ ತಾಯಿ ಹಾಗೂ ಪತ್ನಿ ಜೊತೆಗೆ ವಾಸವಿದ್ದು,ಇಡೀ ಕುಟುಂಬಕ್ಕೆ ಆಸರೆಯಾಗಿದ್ದ.ಆದರೆ ಗುರುನಾಥ ಅವರನ್ನು ಕಳೆದುಕೊಂಡ ಪತ್ನಿ ಹಾಗು ತಾಯಿ ಎಲ್ಲರೂ ಕೂಡ ಈಗ ದಿಕ್ಕು ತೋಚದಂತಾಗಿದ್ದಾರೆ ಕುಟುಂಬಕ್ಕೆ ಆಸರೆಯಾಗಿದ್ದಂತವನನ್ನು ಕಳೆದುಕೊಂಡಿದ್ದರಿಂದ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ

ಸಹಜವಾಗಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಇರುವ ಸ್ಥಳ ಅಂದ್ರೆ ತುಂಬಾನೇ ಅಪಾಯಕಾರಿ ಸ್ಥಳ ಅಂತ ಹೇಳಬಹುದು. ಆದರೆ ಆ ಕೆಲಸಕ್ಕೆ ಸೇರಿದ ಮೊದಲ ದಿನವೇ ಅದನ್ನು ಸ್ವಚ್ಛ ಮಾಡುವ ಕೆಲಸಕ್ಕೆ ಕಳಿಸಿದ್ದು ಯಡವಟ್ಟು ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಯುವಕನ ಮೊದಲ ದಿನವೇ ಶುಚಿತ್ವ ಮಾಡುವ ಕೆಲಸಕ್ಕೆ ಕಳಿಸಿದ್ದು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ಎಂದು ಆರೋಪ ಕೇಳಿಬಂದಿದೆ.

“ಈ ಹಿಂದೆಯೂ ನಡೆದಿತ್ತು ಮಹಾ ದುರಂತ”

ಇದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಒಡೆತನಕ್ಕೆ ಸೇರಿದ ಎಂ ಆರ್ ಎನ್ ನಿರಾಣಿ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಇಂತಹದೊಂದು ಘಟನೆ ನಡೆದಿರುವಂಥದ್ದು ಓರ್ವ ಕಾರ್ಮಿಕ ಈಗಾಗಲೇ ಬಲಿಯಾಗಿದ್ದಾನೆ. ಆದರೆ ಈ ಹಿಂದೆ 2017 ರ ಡಿಸೆಂಬರ್ ಸಂದರ್ಭದಲ್ಲಿ ಕೂಡ ನಿರಾಣಿ ಒಡೆತನದ ಡಿಸ್ಟಿಲರ್ ಘಟಕ ಸ್ಪೋಟವಾಗಿದ್ದರಿಂದ ಆಗ 4 ಜನ ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಸುಮಾರು ಏಳು ಜನರು ಕೂಡ ಆ ಸಂದರ್ಭದಲ್ಲಿ ಗಾಯಗೊಂಡಿದ್ದರು.

ಒಟ್ಟಿನಲ್ಲಿ ಹೊಸ ಉತ್ಸಾಹದೊಂದಿಗೆ ಉತ್ತಮ ವೇತನ ಸಿಗುತ್ತದೆ ಎಂಬ ಆಸೆಯಿಂದ ಕೆಲಸಕ್ಕೆ ಸೇರಿದ ಯುವಕ ಮೊದಲ ದಿನವೇ ಪ್ರಾಣ ಕಳೆದುಕೊಂಡಿದ್ದು ಕುಟುಂಬಕ್ಕೆ ಆಸರೆಯಾಗುವ ಕೆಲಸ ಆಗಬೇಕಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:34 am, Fri, 10 February 23

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್