ಎಸ್.ಸಿ ಎಸ್.​ಟಿ ಕುಟುಂಬಗಳಿಗೆ 75 ಯುನಿಟ್ ಫ್ರೀ ಪವರ್ ಗಿಫ್ಟ್​ ​ಕೊಟ್ಟ ಸಿಎಂ ಬೊಮ್ಮಾಯಿ

ಎಸ್.ಸಿ ಎಸ್.​ಟಿ ಕುಟುಂಬಗಳಿಗೆ 75 ಯುನಿಟ್ ಫ್ರೀ ಪವರ್ ಗಿಫ್ಟ್​ ​ಕೊಟ್ಟ ಸಿಎಂ ಬೊಮ್ಮಾಯಿ
ಏತ ನೀರಾವರಿ ಯೋಜನೆ ಸೇರಿದಂತೆ ಮುಧೋಳ ತಾಲೂಕಿನ 758ಕೋಟಿ ರೂ ಯೋಜನೆಗೆ ಶಂಕುಸ್ಥಾಪನಾ ಸಮಾರಂಭ

ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಹೋಗಿದೆ, ಮುಂದೆ ಗುಜರಾತ್ ಹಾಗೂ ಕರ್ನಾಟಕದಲ್ಲೂ ಮುಳುಗೋ ಸರದಿ ಬಂದಿದೆ. ಪ್ರಶ್ನೆನೇ ಇಲ್ಲ ಎನ್ನುವ ಮೂಲಕ ಕಾರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರ್ತವೆಂಬ ಭರವಸೆ ನೀಡಿದ ಸಿಎಂ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 22, 2022 | 9:52 PM

ಬಾಗಲಕೋಟೆ: ಎಸಿ, ಎಸ್​ಟಿ (SC,ST) ಕುಟುಂಬಗಳಿಗೆ 75 ಯುನಿಟ್ ಫ್ರೀ ವಿದ್ಯುತ್ ಕೊಡುತ್ತೇವೆ ಎಂದು ಜಿಲ್ಲೆಯ ಮುಧೋಳ ನಗರದ ಆರ್.ಎಂ.ಜೆ ಕಾಲೇಜ್ ಮೈದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಏತ ನೀರಾವರಿ ಯೋಜನೆ ಸೇರಿದಂತೆ ಮುಧೋಳ ತಾಲೂಕಿನ 758ಕೋಟಿ ರೂ ಯೋಜನೆಗೆ ಶಂಕುಸ್ಥಾಪನಾ ಸಮಾರಂಭ ನೆರವೇರಿಸಿ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಬಜೆಟ್ ಬಳಿಕ ಈ ಕುರಿತು ತೀರ್ಮಾನವನ್ನು ಮಾಡಿದ್ದೇವೆ. ಜಮೀನು ಖರೀದಿಗೆ 15-20 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ. ನಮ್ಮ ಸರ್ಕಾರ ಪ್ರಗತಿಪರವಾಗಿರುವ ಸರ್ಕಾರ. ಕರ್ನಾಟಕದ ಆದಾಯ ಹೆಚ್ಚಿಸಿ ನಂಬರ್ 1 ಸ್ಥಾನಕ್ಕೆ ಬರ್ತೇವೆ. ದೇಶದಲ್ಲಿ ನಂ.1 ಸ್ಥಾನಕ್ಕೆ ಬರಬೇಕೆಂಬ ಛಲದಿಂದ ಕೆಲಸ ಮಾಡುತ್ತೇವೆ. ಕಾಂಗ್ರೆಸ್​ನವರಿಗೆ ಕಷ್ಟ ಆಗುತ್ತೆ. ಇಷ್ಟು ಕೆಲಸ‌ ಮಾಡಿಬಿಟ್ಟರೆ ಜನ ನಮ್ಮ ಮರೆಯುತ್ತರಂತೆ. ಜನ ಕಾಂಗ್ರೆಸ್​ ಮರೆಯುವುದು ಗ್ಯಾರಂಟಿ. ಕರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಹೋಗಿದೆ, ಮುಂದೆ ಗುಜರಾತ್ ಹಾಗೂ ಕರ್ನಾಟಕದಲ್ಲೂ ಮುಳುಗೋ ಸರದಿ ಬಂದಿದೆ. ಪ್ರಶ್ನೆನೇ ಇಲ್ಲ ಎನ್ನುವ ಮೂಲಕ ಕಾರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರ್ತವೆಂಬ ಭರವಸೆ ನೀಡಿದ ಸಿಎಂ. ಪ್ರಶಾಂತ್ ಕಿಶೋರ್ ಎಂಬ ಅಡ್ವೈಸರ್​ರನ್ನ ತಗೊಂಡಿದ್ದಾರೆ. ಅವರನ್ನು ತಗೊಂಡ ಮರುದಿನ, ಅವರು ಸೋನಿಯಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರಿಗೆ ನೀವು ಯಾರೂ ಕಾಂಗ್ರೆಸ್​ ಅಧ್ಯಕ್ಷರಾಗಬಾರದು ಎಂದು ಸಲಹೆ ಕೊಟ್ಟಿದ್ದಾರೆ. ಅವರನ್ನು ತಗೊಂಡ್ ಮರುದಿನವೇ, ಪ್ರಶಾಂತ್ ಕಿಶೋರ್ ಈ ಬಾಂಬ್ ಹಾಕಿದ್ದಾರೆ. ಅಂದ್ರೆ ಉದ್ದಾರ ಆಗುತ್ತೆ ಕಾಂಗ್ರೆಸ್. ಪ್ರಶ್ನೆ ಏನು ಅಂದ್ರೆ ಆ ಗಾಂಧಿ ಪರಿವಾರ ಬಿಟ್ಟು ಇನ್ನೊಬ್ಬರು ಯಾರಾದ್ರೂ ಆದ್ರೆ ಅದು (ಕಾಂಗ್ರೆಸ್) ಉಳಿಯಲ್ಲ. ಇವರಿಬ್ಬರು (ಸೋನಿಯಾ ಹಾಗೂ ರಾಹುಲ್) ಉಳಿಯಲ್ಲ ಎಂದು ಸಿಎಂ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಹೀಗಾಗಿ 23ರ ಚುನಾವಣೆಯಲ್ಲಿ ನಮ್ಮ ಸರ್ಕಾರ ಬರುತ್ತೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಪೊಲೀಸರು ವಸಾಹತುಶಾಹಿ ಯುಗದ ಲಾಠಿ ಬಳಸುವುದನ್ನು ಬಿಟ್ಟು ತಂತ್ರಜ್ಞಾನ ಬಳಸಿ: ಅಮಿತ್ ಶಾ

India GDP: ಜಿಡಿಪಿ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಭಾರತ ಇದನ್ನು ಮಾಡಬೇಕು ಎಂದ ಐಎಂಎಫ್

Follow us on

Related Stories

Most Read Stories

Click on your DTH Provider to Add TV9 Kannada