AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರೋದು ಒಂದು ಹುಡುಗಿ, 10 ಜನ ಗಂಡಂದಿರು ರೆಡಿಯಾಗಿದ್ದಾರೆ; ಸಿಎಂ ಸ್ಥಾನಕ್ಕೆ ನಡೆದ ಪೈಪೋಟಿಗೆ ಇಬ್ರಾಹಿಂ ವ್ಯಂಗ್ಯ​

ನಮ್ಮಲ್ಲಿ ಪೈಪೋಟಿ ಇಲ್ಲ, ನಮ್ಮದು ಸಿಂಗಲ್, ಕುಮಾರಸ್ವಾಮಿ ಕಿ ಜೈ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಹಾಗೆ ಇಲ್ಲ ಸಿ.ಎಂ.ಇಬ್ರಾಹಿಂ ಟಾಂಗ್​ ನೀಡಿದ್ದಾರೆ.

ಇರೋದು ಒಂದು ಹುಡುಗಿ, 10 ಜನ ಗಂಡಂದಿರು ರೆಡಿಯಾಗಿದ್ದಾರೆ; ಸಿಎಂ ಸ್ಥಾನಕ್ಕೆ ನಡೆದ ಪೈಪೋಟಿಗೆ ಇಬ್ರಾಹಿಂ ವ್ಯಂಗ್ಯ​
ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 18, 2022 | 5:14 PM

ಬಾಗಲಕೋಟೆ: ನಮ್ಮಲ್ಲಿ ಪೈಪೋಟಿ ಇಲ್ಲ, ನಮ್ಮದು ಸಿಂಗಲ್, ಕುಮಾರಸ್ವಾಮಿ ಕಿ ಜೈ. ಆದರೆ ಕಾಂಗ್ರೆಸ್ (Congress)​​ ಹಾಗೂ ಬಿಜೆಪಿಯಲ್ಲಿ ಹಾಗೆ ಇಲ್ಲ. ಇರೋದು ಒಂದು ಹುಡುಗಿ, 10 ಜನ ಗಂಡಂದಿರು ರೆಡಿ ಇದ್ದಾರೆ. ಎಲ್ಲಿ ಏನಾಗುತ್ತೋ ಗೊತ್ತಿಲ್ಲ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಟಾಂಗ್ (CM Ibrahim) ನೀಡಿದರು. ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರದ್ದು ಡಿಕ್ಲೇರ್ ಮಾಡಿ ಹೊರಟಿವಿ ನಾವು. ಮಾಜಿ ಸಚಿವ ಎಸ್.ಆರ್.ಪಾಟೀಲ ಜೆಡಿಎಸ್​ಗೆ ಆಹ್ವಾನಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮನಸ್ಸು ಕೂಡಿದಾವ, ದೇಹಗಳು ಪಕ್ಕಪಕ್ಕ ಬರಬೇಕು. ನೋಡೋಣ ಕಾಲಾಯ ತಸ್ಮೈ ನಮಃ. ಆಹ್ವಾನದ ಬಗ್ಗೆ ಎಸ್.ಆರ್.ಪಾಟೀಲರಿಗೆ ಗೊತ್ತಿದೆ. ಅವರು ಕಾಂಗ್ರೆಸ್ ಸೀನಿಯರ್ ಲೀಡರ್​. ಕಾಂಗ್ರೆಸ್​ನಲ್ಲಿ ಅವರಿಗೆ ಎಷ್ಟು ಅವಮಾನ ಆಗಿದೆ ಅಂತ ಗೊತ್ತು ಎಂದು ಹೇಳಿದರು.

ಬೆಳಗಾವಿಯಲ್ಲಿ ವಿವಾದವಿಲ್ಲ, ಸುಮ್ಮನೆ ಹೇಳುತ್ತಿದ್ದಾರೆ

ಇನ್ನು ಮಹಾಗಡಿ ತಂಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಹೊಟ್ಟೆ, ಬಟ್ಟೆ, ಮೊಟ್ಟೆ ಆಯಿತು. ಈಗ ಗಡಿ ಹಿಡಿದುಕೊಂಡಿದ್ದಾರೆ. ಯಾಕೆ ಬೇಕಿತ್ತು, ಇದನ್ನು ಯಾರು ಕೇಳಿದ್ರು. ಇದಕ್ಕೆ ಕಮೀಟಿ ಮಾಡಿದ್ದಾರೆ. ಮಹಾಜನ್ ವರದಿ ತೀರ್ಪು ಬಂದು ಮುಗಿದಿತ್ತು. ಕರ್ನಾಟಕದಲ್ಲಿ ಮರಾಠಿಗರು ಆರಾಮವಾಗಿದ್ದಾರೆ, ಸಂತೋಷವಾಗಿದ್ದಾರೆ‌‌‌. ಬೆಳಗಾವಿಯಲ್ಲಿ ವಿವಾದ ಇಲ್ಲ. ಇವರು ಸುಮ್ಮನೆ ಹೇಳುತ್ತಿದ್ದಾರೆ. ಹಾಗೆ ಇದ್ದರೆ ಮೊದಲು ಮಹಾದಾಯಿ ವಿವಾದ ಬಗೆ ಹರಿಸಲು ಹೇಳಿ. ಸಿಎಂ ಬೊಮ್ಮಾಯಿ ಮೊದಲು ಗೋವಾ ಮತ್ತು ಮಹಾರಾಷ್ಟ್ರ ಸಿಎಂ ಜೊತೆ ಮಾತನಾಡಿ ಮಹಾದಾಯಿ ಬಗೆಹರಿಸಲಿ. ಅವರೆಲ್ಲ ಸೇರಿ ನಮ್ಮ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದಾರೆ.

ಇದನ್ನೂ ಓದಿ: ಯಂಕ, ನಾಣಿ, ಸೀನ ನಾನೇ ಸಿಎಂ ಅಂತಾ ಹೇಳುತ್ತಿದ್ದಾರೆ: ಪರೋಕ್ಷವಾಗಿ ಟಾಂಗ್​ ಕೊಟ್ಟ ಯಡಿಯೂರಪ್ಪ

ನಮ್ಮ ನೀರು, ನಮ್ಮ ಹಕ್ಕು ನಾವು ಹೋರಾಟ ಮಾಡುತ್ತೇವೆ

ಅವರೆಲ್ಲಾ ಕೆಲಸ ಮಾಡಲಿ. ಮಾಡದೇ ಹೋದರೆ 4 ತಿಂಗಳು ಕಳೆಯಲಿ. ನಾವು ಅಮಿತ್ ಶಾಗೂ ಕೇಳಲ್ಲ, ಡೆಲ್ಲಿಗೂ ಕೇಳಲ್ಲ. ನಾವೇ ನಮ್ಮ ನಾಡು, ನಮ್ಮ ನೀರು, ನಮ್ಮ ಹಕ್ಕು ಅಂತ ಹೋರಾಟ ಮಾಡುತ್ತೇವೆ. ಅವರನ್ನು ಒದ್ದು ಹೊರಗೆ ಹಾಕಿ ನಾಲೆ ಕೆಲಸ ಮಾಡುತ್ತೇವೆ ಎಂದು ಸಿಎಂ ಇಬ್ರಾಹಿಂ ವಾಗ್ದಾಳಿ ಮಾಡಿದರು.

ಮುಂದಿನ ಚುನಾವಣೆ ಟಿಕೆಟ್​ಗಾಗಿ 1,350 ಅರ್ಜಿಗಳು ಬಂದಿವೆ: ಡಿ.ಕೆ.ಶಿವಕುಮಾರ್​ 

ಮುಂದಿನ ಚುನಾವಣೆ ಟಿಕೆಟ್​ಗಾಗಿ 1,350 ಅರ್ಜಿಗಳು ಬಂದಿವೆ. ಟಿಕೆಟ್ ಹಂಚಿಕೆ ಬಗ್ಗೆ ಸಂಜೆ ಬೆಳಗಾವಿಯಲ್ಲಿ ಮೊದಲ ಸುತ್ತಿನ ಸಭೆ ನಡೆಯಲಿದೆ. ಅಭ್ಯರ್ಥಿ ಆಯ್ಕೆಗೆ ಮಾನದಂಡದ ಬಗ್ಗೆ ಸಭೆಯಲ್ಲಿ ನಿರ್ಧರಿಸುತ್ತೇನೆ. ಜನವರಿ 15ರೊಳಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಯತ್ನಿಸುತ್ತೇವೆ ಎಂದು ಬಾಡಗಂಡಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:12 pm, Sun, 18 December 22