ಎಪಿಎಂಸಿ ವ್ಯಾಪ್ತಿಯ ಮನೆಗಳ ಕರೆಂಟ್ ಕಟ್; ಹೆಸ್ಕಾಂ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ

ಎಲ್ಲೆಲ್ಲೋ ಹೋಗ್ತಿದೆ, ಬಡವರಿಗೆ ಕರೆಂಟ್ ಕೊಡಿ. ಎಲ್ಲರೂ ಬಿಲ್ ಕಟ್ಟಿದ್ದಾರೆ. ತಕ್ಷಣ ವಿದ್ಯುತ್ ಪೂರೈಕೆ ಮಾಡಿ ಎಂದು ಅಹವಾಲು ಸಲ್ಲಿಕೆ ವೇಳೆ ಬಾಗಲಕೋಟೆ ಜಿಲ್ಲೆ ಬಾದಾಮಿ ಹೆಸ್ಕಾಮ್ ಎಇಇ ನದಾಪ್ ಎಂಬುವವರಿಗೆ ಕರೆ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಎಪಿಎಂಸಿ ವ್ಯಾಪ್ತಿಯ ಮನೆಗಳ ಕರೆಂಟ್ ಕಟ್; ಹೆಸ್ಕಾಂ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ

ಬಾಗಲಕೋಟೆ: ಎಪಿಎಂಸಿ ವ್ಯಾಪ್ತಿಯ ಮನೆಗಳ ವಿದ್ಯುತ್ ಕಡಿತ (Power cut) ಹಿನ್ನೆಲೆ ದೂರವಾಣಿ ಕರೆ ಮಾಡಿ ಹೆಸ್ಕಾಂ (Hescom) ಅಧಿಕಾರಿಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲೆಲ್ಲೋ ಹೋಗ್ತಿದೆ, ಬಡವರಿಗೆ ಕರೆಂಟ್ ಕೊಡಿ. ಎಲ್ಲರೂ ಬಿಲ್ ಕಟ್ಟಿದ್ದಾರೆ. ತಕ್ಷಣ ವಿದ್ಯುತ್ ಪೂರೈಕೆ ಮಾಡಿ ಎಂದು ಅಹವಾಲು ಸಲ್ಲಿಕೆ ವೇಳೆ ಬಾಗಲಕೋಟೆ ಜಿಲ್ಲೆ ಬಾದಾಮಿ ಹೆಸ್ಕಾಮ್ ಎಇಇ ನದಾಪ್ ಎಂಬುವವರಿಗೆ ಕರೆ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪರನ್ನು ಕೇಳಿ ನಾನು ನಿಂತ್ಕೋಬೇಕೇನ್ರಿ: ಸಿದ್ದರಾಮಯ್ಯ ನಾನು ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಕೇಳಬೇಕಾ? ಸಚಿವ ಕೆ.ಎಸ್.ಈಶ್ವರಪ್ಪರನ್ನು ಕೇಳಿ ನಾನು ನಿಂತ್ಕೋಬೇಕೇನ್ರಿ? ನಮಗೆ ಹೇಳೋದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಯಾರು? ಜನರು ನನ್ನನ್ನು ಪ್ರೀತಿಯಿಂದ ಕರೆದಲ್ಲಿ ಹೋಗಿ ನಿಲ್ಲುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ನಿಲ್ಲುತ್ತೇನೆ. ಈಶ್ವರಪ್ಪ ಯಾರು? ಕಾಂಗ್ರೆಸ್‌ಗೂ ಅವರಿಗೂ ಏನು ಸಂಬಂಧ? ಎಂದು ಬಾದಾಮಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪನಿಗೆ ಸಂಸ್ಕೃತಿ, ಸಂಸ್ಕಾರ ಇಲ್ಲ. ಅವರಿಗೆ ಪಾರ್ಲಿಮೆಂಟರಿ ಲಾಂಗ್ವೇಜ್ ಗೊತ್ತಿಲ್ಲ. ಏನೂ ಗೊತ್ತಿಲ್ಲದವರಿಗೆ ಏನು ಹೇಳೋದು. ಸಂವಿಧಾನದ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪಗೆ ಗೊತ್ತಿದೆಯಾ? ಓದಿದ್ದರೆ ಮುಸಲ್ಮಾನರು, ಕ್ರಿಶ್ಚಿಯನ್ನರ ಬಗ್ಗೆ ಮಾತನಾಡ್ತಿದ್ರಾ? ಸಂವಿಧಾನ ಗೊತ್ತಿಲ್ಲದಿರುವವರಿಗೆ ಅಧಿಕಾರ ಸಿಕ್ಕರೆ ಹೀಗಾಗುತ್ತದೆ. ಸಮಾನತೆಯಲ್ಲಿ ನಂಬಿಕೆಯಿಲ್ಲದವರು ಬಿಜೆಪಿಯವರು. ಈಶ್ವರಪ್ಪಗೆ ತರಬೇತಿ ಆಗಿರುವುದೇ ಅಲ್ಲಿ, ಅದು ಸಮಸ್ಯೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಹಣವಿದ್ದವರಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಅದೆಲ್ಲ ಬಿಜೆಪಿಯಲ್ಲಿ ನಡೆಯೋದು. ಮಾರಿಕೊಳ್ಳೋದು ಎಲ್ಲ ಬಿಜೆಪಿಯಲ್ಲಿ, ನಮ್ಮಲ್ಲಿ ನಡೆಯೋದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪರಿಷತ್ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆ ಧಿಕ್ಸೂಚಿನಾ ?ಎಂಬುದಕ್ಕೆ ಉತ್ತರ‌‌ ನೀಡಿದ ಸಿದ್ದರಾಮಯ್ಯ, ಯಾವುದೇ ಉಪಚುನಾವಣೆಯಿಂದ ಜನರ ಅಭಿಪ್ರಾಯ ಏನು ಅಂತ ಗೊತ್ತಾಗುತ್ತದೆ.  ಜನವಿರೋಧಿ ನೀತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ‌ ಎಂದು ಹೇಳಿದ್ದಾರೆ.

ಈ ಸಾರಿ ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ಈ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಜಾಸ್ತಿಯಾಗಿದೆ. ಈ ಸಾರಿ ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ. ಎಲ್ಲ ಅಭಿವೃದ್ಧಿ ಕೆಲಸಗಳು ನಿಂತಿವೆ. ಬಿಜೆಪಿ ಅವರು ಬಂದ ಮೇಲೆ ವಿಪಕ್ಷದ ನಾಯಕನಾಗಿ ಬಾದಾಮಿ ಜನರಿಗೆ ಒಂದೇ ಒಂದು ಮನೆ ಕೊಡಿಸೋಕೆ ಆಗಿಲ್ಲ ನಂಗೆ. ಇಡಿ ರಾಜ್ಯದಲ್ಲಿ ಒಂದು ಮನೆ ಮಂಜೂರು ಮಾಡಿ ಕೊಟ್ಟಿಲ್ಲ. ಹೀಗಾಗಿ ಜನರಿಗೆ ಬಿಜೆಪಿ ತೊಲಗಿದರೆ ಸಾಕು ಅನ್ನೋ ಮಟ್ಟಿಗೆ ಬಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಚುನಾವಣೆಗೆ ಹೆದರಿಕೊಂಡು ತಾಪಂ, ಜಿಪಂ ಚುನಾವಣೆ ಮುಂದಕ್ಕೆ ಹಾಕಿದ್ದಾರೆ. ಬಿಜೆಪಿಯವರು ಕೇಂದ್ರಿಕೃತ ವ್ಯವಸ್ಥೆಯಯಲ್ಲಿ ನಂಬಿಕೆ ಇಟ್ಟುಕೊಂಡವರು. ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಗರಿಗೆ ನಂಬಿಕೆ ಇಲ್ಲ. ಇದು ಎಲ್ಲ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ತಿಳಿದಿದೆ. ಜನ ಅವರನ್ನು ತಿರಸ್ಕಾರ ಮಾಡುತ್ತಾರೆ. 20 ಕಡೆಗಳಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಚಿಮ್ಮನಕಟ್ಟಿ ಭಾಷಣ ತಡೆಯಲು ಮುಂದಾದ ಕೈ ಮುಖಂಡರು ವಿಜಯಪುರ ಬಾಗಲಕೋಟೆ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಬಾದಾಮಿ ಮಾಜಿ ಶಾಸಕ ಬಿಬಿ ಚಿಮ್ಮನಕಟ್ಟಿ ಭಾಷಣ ಮಾಡಿದ್ದು, ಸಿದ್ದರಾಮಯ್ಯ ಮುಂದಿನ ಬಾರಿ ಬಾದಾಮಿಯಲ್ಲಿ ಸ್ಪರ್ಧೆ ಮಾಡಬಾರದು. ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ. ನಾನು ಬಾದಾಮಿಯಿಂದ ಸ್ಪರ್ಧಿಸಿ ಎಮ್​ಎಲ್​ಎ ಆಗ್ತಿನಿ, ಮಂತ್ರಿನೂ ಆಗ್ತೀನಿ ಸಿಎಂ ಕೂಡ ಆಗ್ತೇನೆ ಎಂದು ಹೇಳಿದ್ದಾರೆ. ವೇದಿಕೆ ಮೇಲೆಯೇ ಸಿದ್ದರಾಮಯ್ಯ ಅವರಿಗೆ ಚಿಮ್ಮನಕಟ್ಟಿ ಟಾಂಗ್ ನೀಡಿದ್ದು, ಈ ಮಾತಿನಿಂದ ಸಿದ್ದರಾಮಯ್ಯಗೆ ಮುಜುಗರ ಉಂಟಾಗಿದೆ.

ಕೂಡಲೇ ಹಾಗೆಲ್ಲ ಮಾತಾಡಬೇಡಿ ಎಂದು ಕೈ ಮುಗಿದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಮನವಿ ಮಾಡಿದ್ದಾರೆ. ಹೀಗಾಗಿ ಸಭೆಯಲ್ಲಿ ಕೆಲ ಹೊತ್ತು ಗೊಂದಲ ಉಂಟಾಗಿದೆ. ಸಿದ್ದರಾಮಯ್ಯ ಹಾಗೂ ಬೆಂಬಲಿಗರು ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ವಿಚಾರಕ್ಕಾಗಿ ಅಸಮಾಧಾನಗೊಂಡಿರುವ ಚಿಮ್ಮನಕಟ್ಟಿ, ಈ ಹಿಂದಿನ ಅನೇಕ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈಗ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಭೇಟಿ ಮಾಡುವುದು ತಪ್ಪಾ? ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

Bengaluru Power Cut: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಇಂದಿನಿಂದ ಒಂದು ವಾರ ಪವರ್ ಕಟ್

Published On - 12:32 pm, Mon, 6 December 21

Click on your DTH Provider to Add TV9 Kannada