ಸಿದ್ದರಾಮಯ್ಯ ಸಿಎಂ ಆಗಲಿ ಎಂದು 40 ಕಿಮೀ ದೀರ್ಘ ದಂಡ ನಮಸ್ಕಾರ: ನೆಚ್ಚಿನ ನಾಯಕರ ಅಧಿಕಾರಕ್ಕಾಗಿ ಅಭಿಮಾನಿಗಳ ವಿಭಿನ್ನ ಹರಕೆ

ಒಂದೆಡೆ ಸಿಎಂ ಯಾರು ಎಂಬ ಪ್ರಶ್ನೆ ಉತ್ತರ ಹುಡುಕುವಲ್ಲಿ ಕಾಂಗ್ರೆಸ್ ಹೈಕಮಾಂಡ್ ತಲೆ‌ ಕೆಡೆಸಿಕೊಂಡಿದೆ. ಇತ್ತ ತಮ್ಮ ನಾಯಕರ ಅಭಿಮಾನಿಗಳು ವಿಭಿನ್ನ ಹರಕೆ ತೀರಿಸುವ ಮೂಲಕ ಅಭಿಮಾನ ಮರೆದಿದ್ದಾರೆ. 

ಸಿದ್ದರಾಮಯ್ಯ ಸಿಎಂ ಆಗಲಿ ಎಂದು 40 ಕಿಮೀ ದೀರ್ಘ ದಂಡ ನಮಸ್ಕಾರ: ನೆಚ್ಚಿನ ನಾಯಕರ ಅಧಿಕಾರಕ್ಕಾಗಿ ಅಭಿಮಾನಿಗಳ ವಿಭಿನ್ನ ಹರಕೆ
ದೀರ್ಘ ದಂಡ ನಮಸ್ಕಾರ ಹಾಕುತ್ತಿರುವ ಅಭಿಮಾನಿ
Follow us
ಗಂಗಾಧರ​ ಬ. ಸಾಬೋಜಿ
|

Updated on: May 16, 2023 | 8:29 PM

ಬಾಗಲಕೋಟೆ: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಪತ ಪಡೆದಿದೆ. 135 ಸ್ಥಾನ ಪಡೆದು ಭರ್ಜರಿ ಗೆಲವು ಏನೋ ಕಾಂಗ್ರೆಸ್​ಗೆ (Congress) ಸಿಕ್ಕಿದೆ. ಆದರೆ ಸಿಎಂಗಾಗಿ ಭರ್ಜರಿ ಫೈಟ್ ಶುರುವಾಗಿದ್ದು, ಸಿಎಂ ಆಯ್ಕೆ ಚೆಂಡು ಇದೀಗ ದೆಹಲಿ ಅಂಗಳ ತಲುಪಿದೆ. ಈ ನಡುವೆ ಅಭಿಮಾನಿಯೊರ್ವ ಸಿದ್ದುನೇ ಸಿಎಂ ಆಗಲಿ ಅಂತ 40 ಕಿಮೀ ದೀರ್ಘ ದಂಡ ನಮಸ್ಕಾರ ಹಾಕಿದರೆ, ಜನಾರ್ಧನ ರೆಡ್ಡಿ ಶಾಸಕ ಆಗಿದ್ದಕ್ಕೆ ಅಭಿಮಾನಿಗಳು ನೂರೊಂದು ತೆಂಗಿನಕಾಯಿ ಒಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಸುಡುವ ಬಿಸಿಲು ನಡುವೆಯೂ ಸುರೇಶ ವಾಲಿಕಾರ ಎಂಬ ಯುವಕ ದೀರ್ಘ ದಂಡ ನಮಸ್ಕಾರ ಹಾಕಿದ್ದಾನೆ.

ಮೂಲತಃ ಬಾಗಲಕೋಟೆ ತಾಲ್ಲೂಕಿನ ಮನ್ನಿಕಟ್ಟಿ ಗ್ರಾಮದವರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಹೆಚ್‌ವೈ ಮೇಟಿ ಬಾಗಲಕೋಟೆ ಕ್ಷೇತ್ರದ ಎಂಎಲ್‌ಎ ಆಗಿ ಆಯ್ಕೆ ಆಗಲಿ ಅಂತ ಹರಕೆ ಕಟ್ಟಿಕೊಂಡಿದ್ದರು. ಜೊತೆಗೆ ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಹರಕೆ ಹೊತ್ತಿದ್ದರು. ಅದರಂತೆ ಇವತ್ತು ತನ್ನ ಊರಾದ ಮನ್ನಿಕಟ್ಟಿಯಿಂದ ಕೂಡಲಸಂಗಮವರೆಗೆ ಸುಮಾರು 40 ಕಿಮೀ ದೂರವನ್ನ ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ ಡಿಕೆ ಶಿವಕುಮಾರ್! ಏನದು?

ಹೌದು, ಬೆಳಿಗ್ಗೆ ನಾಲ್ಕು ಗಂಟೆಗೆ ಮನ್ನಿಕಟ್ಟಿ ಗ್ರಾಮದಿಂದ ಮಹಿಳೆಯರು, ಯುವಕರು ಸೇರಿ 200 ಕ್ಕೂ ಹೆಚ್ಚು ಜನ ಕೂಡಲಸಂಗಮವರೆಗೆ ಸುರೇಶ ಹರಕೆಗೆ ಸಾತ್ ನೀಡಿದ್ದಾರೆ. ಸನಾದಿ ವಾದ್ಯಗಳ ಮೂಲಕ ಕೂಡಲಸಂಗಮವರೆಗೂ ದೀಡನಮಸ್ಕಾರ ಹಾಕಿದರು. ಇದೇ ವೇಳೆ ಪಕ್ಕದ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರಕ್ಕೆ ಈ ಬಾರಿ ಜನಾರ್ಧನ ರೆಡ್ಡಿ ಎಂಎಲ್‌ಎ ಆಗಲಿ ಅಂತ ಯುವಕರು ಹರಕೆ ಕಟ್ಟಿಕೊಂಡಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗದಿದ್ದರೆ ಅರ್ಧ ಮೀಸೆ ಬೋಳಿಸ್ತೀನಿ ಎಂದ ಬಾಲಕ: ವಿಡಿಯೋ ವೈರಲ್

ಅದರಂತೆ ಇವತ್ತು ಕೂಡಲಸಂಗಮಕ್ಕೆ ಆಗಮಿಸಿದ ಗಂಗಾವತಿ ತಾಲ್ಲೂಕಿನ ಆಗೋಲಿ ಗ್ರಾಮದ ಬಸವರಾಜ, ಕರಿಯಪ್ಪ, ಯಮನೂರಪ್ಪ, ರಮೇಶ್ ನಾಲ್ಕೈದು ಜನ ಯುವಕರ ತಂಡ ತ್ರಿವಳಿ ನದಿಗಳ ಸಂಗಮದಲ್ಲಿ 101 ತೆಂಗಿನಕಾಯಿ ಒಡೆಯುವ ಮೂಲಕ ತಮ್ಮ ನೆಚ್ಚಿನ ನಾಯಕನ ಮೇಲೆ ಅಭಿಮಾನ ಮೆರೆದಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಚುನಾವಣೆಗೆ ತೆರೆ ಬಿದ್ದಿದೆ‌. ಒಂದೆಡೆ ಸಿಎಂ ಯಾರು ಎಂಬ ಪ್ರಶ್ನೆ ಉತ್ತರ ಹುಡುಕುವಲ್ಲಿ ಕಾಂಗ್ರೆಸ್ ಹೈಕಮಾಂಡ್ ತಲೆ‌ ಕೆಡೆಸಿಕೊಂಡಿದೆ. ಇತ್ತ ತಮ್ಮ ನಾಯಕರ ಅಭಿಮಾನಿಗಳು ವಿಭಿನ್ನ ಹರಕೆ ತೀರಿಸುವ ಮೂಲಕ ಅಭಿಮಾನ ಮರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ