Congress Bus Yatra: ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಿ ಘೋಷ ವಾಕ್ಯದೊಂದಿಗೆ ಜನವರಿ 11ರಿಂದ ಬಸ್ ಯಾತ್ರೆ ಶುರು – ಬಸವರಾಜ ರಾಯರೆಡ್ಡಿ
ರಾಜ್ಯದಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಬಸ್ ಯಾತ್ರೆ ಜನವರಿ 11ರಿಂದ ಪ್ರಾರಂಭವಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಕರ್ನಾಟಕ ಕಾಂಗ್ರೆಸ್ (Congress) ನಾಯಕರು ರಾಜ್ಯದಲ್ಲಿ ಬಸ್ ಯಾತ್ರೆ (Bus Yatre) ಮಾಡಲು ಮುಂದಾಗಿದ್ದಾರೆ. ಭ್ರಷ್ಟ ಬಿಜೆಪಿ (BJP) ಸರ್ಕಾರ ತೊಲಗಿಸಿ ಎಂಬ ಘೋಷ ವಾಕ್ಯದೊಂದಿಗೆ ಜನವರಿ 11ರಿಂದ ರಾಜ್ಯದಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಬಸ್ ಯಾತ್ರೆ ಆರಂಭವಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy) ಹೇಳಿದ್ದಾರೆ. ಬೆಳಗಾವಿಯ (Belagavi) ಟಿಳಕವಾಡಿಯಿಂದ ಬಸ್ ಯಾತ್ರೆ ಆರಂಭವಾಗಲಿದೆ. ಅಂದು ಬ್ರಿಟಿಷ್”ರನ್ನ ತೊಲಗಿಸಿ ಎಂಬ ಘೋಷ ವಾಕ್ಯ ಇತ್ತು, ಈಗ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಿ ಎಂಬ ಘೋಷ ವಾಕ್ಯದಿಂದ ಅಭಿಯಾನ ಆರಂಭವಾಗಲಿದೆ. ಕೇಂದ್ರ, ರಾಜ್ಯದ ಪ್ರಮುಖ ನಾಯಕರು ಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ಕಾಂಗ್ರೆಸ್ ನಾಯಕ ಬಸ್ ಯಾತ್ರೆಯ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ರಾಯರೆಡ್ಡಿ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಳಿದಾಸ ವೃತ್ತದಲ್ಲಿ ಜನವರಿ 18ರಂದು ಬಾಗಲಕೋಟೆಯಲ್ಲಿ ಸಮಾವೇಶ ನಡೆಯಲಿದೆ. ಎರಡನೇ ಹಂತದಲ್ಲಿ ಜ.28ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಬಸ್ ಯಾತ್ರೆ ನಡೆಯಲಿದೆ. ಈ ಹಿಂದೆ 1924ರಲ್ಲಿ ಮಹಾತ್ಮಾ ಗಾಂಧಿ, ಬೆಳಗಾವಿಯ ತಿಳಕವಾಡಿಗೆ ಭೇಟಿ ಕೊಟ್ಟ ಸ್ಥಳವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪಕ್ಷ ಸಂಘಟನೆಗೆ ಕಾಂಗ್ರೆಸ್ ಬಸ್ ಯಾತ್ರೆ: ಎರಡು ಪ್ರತ್ಯೇಕ ಸಮಿತಿ ರಚಿಸಿದ ಡಿಕೆ ಶಿವಕುಮಾರ್
ಬಸ್ ಯಾತ್ರೆ ಮಾರ್ಗ
ಬೆಳಗಾವಿಯಿಂದ ಶುರುವಾಗಲಿದ್ದು, ಒಟ್ಟೂ 21 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸಲಿದೆ. ಜನವರಿ 11ರಂದು ಬೆಳಗಾವಿ ಜಿಲ್ಲೆ, ಜನವರಿ 16ರಂದು ಹೊಸಪೇಟೆ, ಜನವರಿ 17ರಂದು ಕೊಪ್ಪಳ, ಜನವರಿ 18ರಂದು ಬಾಗಲಕೋಟೆ-ಗದಗ ಜಿಲ್ಲೆಯಲ್ಲಿ ಬಸ್ ಯಾತ್ರೆ, ಜನವರಿ 19ರಂದು ಹಾವೇರಿ-ದಾವಣಗೆರೆ ಜಿಲ್ಲೆ, ಜನವರಿ 21 ಹಾಸನ-ಚಿಕ್ಕಮಗಳೂರು, ಜನವರಿ 22 ಉಡುಪಿ-ದಕ್ಷಿಣ ಕನ್ನಡ. ಜನವರಿ 23 ಕೋಲಾರ-ಚಿಕ್ಕಬಳ್ಳಾಪುರ, ಜನವರಿ 24 ತುಮಕೂರು-ಬೆಂಗಳೂರು ಗ್ರಾಮಾಂತರ ಜನವರಿ 25 ಚಾಮರಾಜನಗರ-ಮೈಸೂರು, ಜನವರಿ 26 ಮಂಡ್ಯ ಮತ್ತು ರಾಮನಗರ, ಜನವರಿ 27 ಯಾದಗಿರಿ-ಕಲಬುರಗಿ.
ಎಸ್ ಆರ್ ಪಾಟೀಲ್ ಕಾಂಗ್ರೆಸ್ ಪಕ್ಷದ ಆಧಾರಸ್ಥಂಭ
ಕಾಂಗ್ರೆಸ್ನ ಹಿರಿಯ ನಾಯಕ ಎಸ್ ಆರ್ ಪಾಟೀಲ್ರನ್ನು ಪಕ್ಷದಲ್ಲಿ ಕಡೆಗಣಿಸಿದ ವಿಚಾರವಾಗಿ ಮಾತನಾಡಿದ ಅವರಯ ಎಸ್.ಆರ್ ಪಾಟೀಲ್ ಹಿರಿಯ ನಾಯಕರು. ಅವ್ರನ್ನು ಪಕ್ಷದಿಂದ ಕಡೆಗಣೆ ಮಾಡಲು ಸಾಧ್ಯವೇ ಇಲ್ಲ. ಅವರು ಕಾಂಗ್ರೆಸ್ ಪಕ್ಷದ ಆಧಾರಸ್ಥಂಭ. ಟಿಕೆಟ್ ಕೈತಪ್ಪಿ ಅನ್ಯಾಯ ಆಗಿರಬಹುದು.ಅದನ್ನ ಸರಿಪಡಿಸುವ ಕೆಲಸ ಖಂಡಿತವಾಗಿಯೂ ಆಗುತ್ತೆ. ಬಿಜೆಪಿಯಂತ ಭ್ರಷ್ಟರು ಯಾರಿಲ್ಲ. ಅವರು ಲಜ್ಜೆಗೆಟ್ಟು ರಾಜಕಾರಣ ಮಾಡುತ್ತಿದ್ದಾರೆ ಎಂದು ಬಸವರಾಜ ರಾಯರೆಡ್ಡಿ ಆಕ್ರೋಶ ವ್ಯಕ್ತೊಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:35 pm, Mon, 9 January 23