ಜ.13ರಂದು ಸಿಎಂ ಬೊಮ್ಮಾಯಿ ನಿವಾಸ ಬಳಿ ಧರಣಿ ಮಾಡಲು ಪಂಚಮಸಾಲಿ‌ ಸಮುದಾಯಕ್ಕೆ ಕರೆ ಕೊಟ್ಟ ಮೃತ್ಯುಂಜಯ ಸ್ವಾಮೀಜಿ

2ಎ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಖಡಕ್​ ಆಗಿ ಹೇಳಿಕೆ ನೀಡಿದ್ದಾರೆ.

ಜ.13ರಂದು ಸಿಎಂ ಬೊಮ್ಮಾಯಿ ನಿವಾಸ ಬಳಿ ಧರಣಿ ಮಾಡಲು ಪಂಚಮಸಾಲಿ‌ ಸಮುದಾಯಕ್ಕೆ ಕರೆ ಕೊಟ್ಟ ಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಶ್ರೀ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jan 08, 2023 | 4:56 PM

ಬಾಗಲಕೋಟೆ: ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ತಾಯಿ ಮೇಲೆ ಆಣೆ ಮಾಡಿ ಕೊಟ್ಟ ಮಾತು ತಪ್ಪಿದ್ದಾರೆ. ಈಗಾಗಲೇ ಸರ್ಕಾರ ನೀಡಿರುವ 2ಡಿ ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ. 2ಎ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಖಡಕ್​ ಆಗಿ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಇಂದು (ಜ. 8) ಮಾಧ್ಯಮದವರೊಂದಿಗೆ ಮಾತನಾಡಿ, ಜ.12ರೊಳಗೆ 2ಎ ಮೀಸಲಾತಿ ಘೋಷಿಸಿ ನೋಟಿಫಿಕೇಷನ್ ಹೊರಡಿಸಬೇಕು. ಇಲ್ಲದಿದ್ದರೆ ಜ. 13ರಂದು ಶಿಗ್ಗಾಂವಿಯಲ್ಲಿರುವ ಸಿಎಂ ಬೊಮ್ಮಾಯಿ ನಿವಾಸದ ಬಳಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ರಾಜ್ಯದ ಪಂಚಮಸಾಲಿ‌ (Panchamasali) ಸಮಾಜದ ಬಾಂಧವರು ರೊಟ್ಟಿ ಬುತ್ತಿ ಕಟ್ಟಿಕೊಂಡು ಬಂದು ಧರಣಿಯಲ್ಲಿ ಭಾಗವಹಿಸುವಂತೆ ಸ್ವಾಮೀಜಿ ಕರೆ ನೀಡಿದರು.

ಮೀಸಲಾತಿ ಹೋರಾಟ ಮುಚ್ಚಿ ಹಾಕಲು ಯತ್ನ

ಕಳೆದ 1 ವಾರದಿಂದ ಮೀಸಲಾತಿ ಹೋರಾಟ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಕೆಲವು ಕುತಂತ್ರಿಗಳು, ದುಷ್ಟಶಕ್ತಿಗಳು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷರ ಪಾಲಿಸಿ ಮೂಲಕ ಹೋರಾಟ ಕುಂದಿಸುವ ಕೆಲಸ ಮಾಡ್ತಿದ್ದಾರೆ. ದುಷ್ಟಶಕ್ತಿಗಳ ಎಲ್ಲ ಒಳಮರ್ಮ ಶಿಗ್ಗಾಂವಿಯಲ್ಲಿ ಚರ್ಚೆ ಮಾಡುತ್ತೇವೆ. ಪಂಚಮಸಾಲಿ ಸಮಾಜ ಕುತಂತ್ರಿಗಳ ಯಾವುದೇ ಮಾತು ಕೇಳಬಾರದು. ಒಡೆದಾಳುವ ತಂತ್ರಕ್ಕೆ ಒಳಗಾಗಬಾರದು ಎಂದರು.

ಇದನ್ನೂ ಓದಿ:

ಮೀಸಲಾತಿ ನೀಡಲು ಕುಲಶಾಸ್ತ್ರ ಆಧ್ಯಯನ ಅವಶ್ಯಕತೆ ಇಲ್ಲಾ: ಯತ್ನಾಳ 

ಶಾಸಕ ಬಸನಗೌಡ ಪಾಟೀಲ ಯತ್ನಾಳ 2ಎ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮೀಸಲಾತಿ ನೀಡಲು ಹಿಂದುಳಿದ ಆಯೋಗದ ವರದಿ ಹಾಗೂ ಕುಲಶಾಸ್ತ್ರ ಆಧ್ಯಯನ ಅವಶ್ಯಕತೆ ಇಲ್ಲಾ. ಎಸ್ಟಿಎಸ್ಟಿ ಸಮುದಾಯಕ್ಕೆ ಯಾವುದಾರೂ ಸಮಾಜವನ್ನು ಸೇರಿಸಬೇಕಾದರೆ ಮಾತ್ರ ಕುಲಶಾಸ್ತ್ರ ಆಧ್ಯಯನವಾಗಬೇಕು. ಇದನ್ನ ಸಚಿವ ಮಾಧುಸ್ವಾಮಿಯವರೇ ಹೇಳಿದ್ಧಾರೆ. ಪಿಎಂ ಮೋದಿ ಅವರು ಯಕನಾಮಿಕ್ ವೀಕರ್ ಸೆಕ್ಷನ್ ಎಂದು ಮಾಡಿದ್ಧಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪ್ರಕಟಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುತ್ತದೆ: ಬಸನಗೌಡ ಯತ್ನಾಳ್

ಯಾವುದೇ ಮೀಸಲಾತಿ ಇಲ್ಲದ ಸಮಾಜ ಯಾವುದಿವೆ. ಅಂಥ ಸಮಾಜಗಳಿಗೆ 10 ಪರ್ಸೆಂಟ್ ಮೀಸಾಲಾತಿ ನೀಡಲಾಗಿದೆ. ಅದರಲ್ಲಿ ಲಿಂಗಾಯತರು, ರಿಸರ್ವೇಷನ್​ನಲ್ಲಿದ್ದವರು ಸೇರಲು ಬರಲ್ಲ. ರಿಸರ್ವೇಷನ್​ನಲ್ಲಿ ಇರದ ಸಮುದಾಯಗಳಿಗೆ 10 ಪರ್ಸೆಂಟ್ ಮೀಸಲಾತಿಯಲ್ಲಿ ಸೇರಬಹುದು. ಈ ಮೀಸಲಾತಿ ಪಡೆದುಕೊಳ್ಳುವುದೂ ಸಹ ಕಠಿಣವಿದ್ದು, ಹತ್ತಾರು ನಿಯಮಗಳಿವೆ. ಅದರಲ್ಲಿನ 2 ಪರ್ಸೆಂಟ್ ಲಿಂಗಾಯತರಿಗೆ ಕೊಡುತ್ತೇವೆಂದು ಹೇಳಿದ್ದಾರೆ. ಆದರೆ ಅದು ಅಸಾಧ್ಯ ಅದರಲ್ಲಿಂದ ತೆಗೆದು ಇದಕ್ಕೆ ಹಾಕೋದು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:56 pm, Sun, 8 January 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ